Breaking News
Home / Uncategorized / ಬೆಳಗಾವಿ: ನಗರಕ್ಕೆ ಮತ್ತೊಂದು ಉಪ ನೋಂದಣಿ ಕಚೇರಿ ಮಂಜೂರಾಗಿದೆ.

ಬೆಳಗಾವಿ: ನಗರಕ್ಕೆ ಮತ್ತೊಂದು ಉಪ ನೋಂದಣಿ ಕಚೇರಿ ಮಂಜೂರಾಗಿದೆ.

Spread the love

ಬೆಳಗಾವಿ:  ನಗರಕ್ಕೆ ಮತ್ತೊಂದು ಉಪ ನೋಂದಣಿ ಕಚೇರಿ ಮಂಜೂರಾಗಿದೆ.  ದಕ್ಷಿಣ ಮತಕ್ಷೇತ್ರ ಶಾಸಕ ಅಭಯ ಪಾಟೀಲ್ ಅವರು ಮತ್ತೊಂದು  ಉಪ ನೋಂದಣಿ ಆರಂಭಿಸುವಂತೆ ಸಿಎಂ, ಕಂದಾಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಇದೀಗ ಸರ್ಕಾರ  ನೂತನ ಉಪ ನೋಂದಣಿ ಕಚೇರಿ ಪ್ರಾರಂಭಿಸಲು ಅನುಮತಿ ನೀಡಿದೆ.  ಶೀಘ್ರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ  ಅಭಯ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. 

ಜಿಲ್ಲೆಯಲ್ಲಿ ಬೆಳಗಾವಿ ತಾಲೂಕು ದೊಡ್ಡದಾಗಿದೆ. ಪ್ರಸ್ತುತ ಡಿಸಿ ಕಚೇರಿ ಬಳಿ ಇರುವ ಉಪ ನೋಂದಣಿ ಕಚೇರಿಯಲ್ಲಿ ಆಸ್ತಿ, ಮದುವೆ ಸೇರಿ ಮೊದಲಾದ ವ್ಯವಹಾರಗಳು ಹೆಚ್ಚಾದ್ದರಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ.  ಹಲವರು ಸರದಿ ಸಾಲನಿಂದ ಗಂಟೆಗಟ್ಟಲೇ ಕಾಯಬೇಕಿದೆ. ಈ ಹಿನ್ನೆಲೆ ಮತ್ತೊಂದು ಉಪ ನೋಂದಣಿ ಕಚೇರಿ ಆರಂಭಿಸುವಂತೆ ಮನವಿ ಮಾಡಿದ್ದೆ ಎಂದು ಶಾಸಕ ಅಭಯ ಪಾಟೀಲ್ ತಿಳಿಸಿದ್ದಾರೆ. 


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ