Breaking News
Home / ರಾಷ್ಟ್ರೀಯ / ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ.

ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ.

Spread the love

ಗಾಜಿಯಾಬಾದ್ (ಉತ್ತರ ಪ್ರದೇಶ): ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ.

ಮನೆಗೆ ಬಂದ ಪಾರ್ಸೆಲ್​ ನೋಡಿ ವೆಜ್​ ಪಿಜ್ಜಾ ಬಂತೆಂದು ತಿಳಿದು ಚಿಕನ್​ ತಿಂದ ಮಹಿಳೆ ಗರಂ ಆಗಿದ್ದು, ಪಿಜ್ಜಾ ಕಂಪೆನಿ ವಿರುದ್ಧ ಒಂದು ಕೋಟಿ ರೂಪಾಯಿ ಪರಿಹಾರಕ್ಕೆ ದಾವೆ ಹೂಡಿದ್ದಾರೆ. ಅಷ್ಟೊಂದು ಪರಿಹಾರವನ್ನು ನೀಡಲು ಕೋರ್ಟ್​ ಆದೇಶ ಮಾಡದೇ ಹೋದರೂ, ಪಿಜ್ಜಾ ಕಂಪೆನಿಯ ಹಣೆಬರಹ ಸರಿಯಿಲ್ಲದಿದ್ದರೆ ಏನು ಬೇಕಾದರೂ ಆದೀತು!

ಇಂಥದ್ದೊಂದು ಘಟನೆ ನಡೆದಿರುವುದು ಗಾಜಿಯಾಬಾದ್​ನಲ್ಲಿ. ಮಹಿಳೆ ಸಂಪ್ರದಾಯಸ್ಥ ಸಸ್ಯಾಹಾರಿಯಾಗಿದ್ದರು. ಸಮೀಪದ ಮಳಿಗೆಯೊಂದರಿಂದ ಸಸ್ಯಾಹಾರಿ ಪಿಜ್ಜಾ ತರಿಸಿಕೊಂಡಿದ್ದರು. ಆದರೆ ಅರ್ಧ ತಿಂದಾದ ಮೇಲೆ ಅದು ಚಿಕನ್​ ಎನ್ನುವುದು ತಿಳಿದಿದೆ.

ಹುಟ್ಟಿನಿಂದಲೂ ಸಸ್ಯಾಹಾರಿಯಾಗಿರುವ ತನ್ನನ್ನು ಮಾಂಸಾಹಾರಿ ಮಾಡಿದ್ದಕ್ಕೆ ತೀವ್ರವಾಗಿ ಆಕ್ರೋಶಗೊಂಡ ಮಹಿಳೆ ಯರ್ ಮೂಲಕ ಗ್ರಾಹಕ ಹಿತರಕ್ಷಣಾ ಕಾಯ್ದೆಯಡಿ ಅಮೆರಿಕ ಮೂಲಕ ಪಿಜ್ಜಾ ಕಂಪೆನಿಗೆ 1 ಕೋಟಿ ರೂ. ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದಾರೆ.

ಮಾಂಸಾಹಾರ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಬೇಕಿದೆ. ಇದಕ್ಕಾಗಿ ಕೆಲವು ಧಾರ್ಮಿಕ ಕಾರ್ಯಕ್ರಮ ನೆರವೇರಿಸಬೇಕಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ. ಹೀಗಾಗಿ 1 ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಆಕೆ ಅರ್ಜಿಯಲ್ಲಿ ಹೇಳಿದ್ದಾರೆ.


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ.4ಕ್ಕೆ ರೇವಣ್ಣ ವಿಚಾರಣೆ

Spread the loveಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ