Breaking News
Home / ರಾಷ್ಟ್ರೀಯ / ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕೊರೊನಾ; ದೇಶದ ಅರ್ಧಕ್ಕಿಂತ ಹೆಚ್ಚು ಕೇಸ್​ ಒಂದೇ ರಾಜ್ಯದಲ್ಲಿ ದಾಖಲು

ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕೊರೊನಾ; ದೇಶದ ಅರ್ಧಕ್ಕಿಂತ ಹೆಚ್ಚು ಕೇಸ್​ ಒಂದೇ ರಾಜ್ಯದಲ್ಲಿ ದಾಖಲು

Spread the love

ಮಹಾರಾಷ್ಟ್ರ: ನೆರೆರಾಜ್ಯ ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈಗಾಗಲೇ ದೇಶದ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಇದೊಂದೇ ರಾಜ್ಯದಲ್ಲಿ ದಾಖಲಾಗಿದ್ದು, ರಾಜ್ಯದ ಜನತೆಯಲ್ಲಿ ಆತಂಕ ಮೂಡುವಂತಾಗಿದೆ.

ಮೊನ್ನೆ ಸುಮಾರು13,000 ನಿನ್ನೆ ಸುಮಾರು 14,000 ಕೊರೊನಾ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಕೇಸ್​ಗಳು ಇದೊಂದೇ ರಾಜ್ಯದಲ್ಲಿ ದಾಖಲಾಗಲು ಮೂರು ಮುಖ್ಯ ಕಾರಣಗಳನ್ನ ಆರೋಗ್ಯ ಇಲಾಖೆ ತಿಳಿಸಿದೆ.

  1. ಕಡಿಮೆ ಟೆಸ್ಟಿಂಗ್ :​- ರಾಜ್ಯದಲ್ಲಿ ಟೆಸ್ಟಿಂಗ್​ ಮಾಡುವ ಸಂಖ್ಯೆ ಕೊರೊನಾ ತೀವ್ರವಾಗುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.
  2. ಕಡಿಮೆ ಟ್ರೇಸಿಂಗ್ :​- ಕೊರೊನಾ ಕೇಸ್​ಗಳು ದಾಖಲಾದ ಮೇಲೆ ಅವರ ಟ್ರ್ಯಾವೆಲ್​ ಹಿಸ್ಟರಿ ಸಂಪರ್ಕಿತರ ಪಟ್ಟಿ ಮಾಡುವುದನ್ನ ಮಹಾರಾಷ್ಟ್ರ ಸರ್ಕಾರ ಕಡೆಗಣಿಸಿದೆ. ಅದು ಕೊರೊನಾ ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನಲಾಗಿದೆ.
  3. ಹೆಚ್ಚಿದ ಕಾರ್ಯಕ್ರಮಗಳು:- ಕೊರೊನಾ ದ್ವಿಗುಣವಾಗುತ್ತಿರುವ ನಡುವೆಯೂ ಮಹಾರಾಷ್ಟ್ರದಲ್ಲಿ ಕುಟುಂಬ ಕಾರ್ಯಕ್ರಮಗಳು ರಾಜಕೀಯ ಸಭೆ ಸಮಾರಂಭಗಳು ಕಡಿಮೆಯಾಗುತ್ತಿಲ್ಲ. ಇದು ಕೊರೊನಾ ಹೆಚ್ಚಾಗಲು ಪ್ರಮುಖ ಕಾರಣ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ.4ಕ್ಕೆ ರೇವಣ್ಣ ವಿಚಾರಣೆ

Spread the loveಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ