Breaking News
Home / ಜಿಲ್ಲೆ / ಬೆಳಗಾವಿ / ED ಹೆಸರಲ್ಲಿ ಬ್ಯಾಂಕ್​ಗಳಿಗೆ ನಕಲಿ ಪತ್ರಗಳನ್ನು ಕಳುಹಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ED ಹೆಸರಲ್ಲಿ ಬ್ಯಾಂಕ್​ಗಳಿಗೆ ನಕಲಿ ಪತ್ರಗಳನ್ನು ಕಳುಹಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

Spread the love

ಬೆಳಗಾವಿ: ED ಹೆಸರಲ್ಲಿ ಬ್ಯಾಂಕ್​ಗಳಿಗೆ ನಕಲಿ ಪತ್ರಗಳನ್ನು ಕಳುಹಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮದುಕರ್​ ಸಪಳೆ ಬಂಧಿತ ಆರೋಪಿ.

ಬೆಳಗಾವಿಯ ಶಾಸ್ತ್ರೀನಗರದ ನಿವಾಸಿಯಾದ ಆರೋಪಿ ಖಾಸಗಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇವನ ಬಳಿ ಬರುವ ಗ್ರಾಹಕರಿಗೆ ಬಣ್ಣ, ಬಣ್ಣದ ಮಾತುಗಳನ್ನ ಹೇಳಿ ಅವರ ಇನ್ಶೂರೆನ್ಸ್​ ಹಣವನ್ನ ತನ್ನ ಅಕೌಂಟ್​ಗೆ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ಅನ್ನೋ ಆರೋಪ ಕೇಳಿ ಬಂದಿದೆ.

ಹಣ ಕಳೆದುಕೊಂಡವರು ಬಂದು ಹಣ ಕೇಳಿದರೆ ED ಹೆಸರಲ್ಲಿ ಬ್ಯಾಂಕ್​ಗೆ ನಕಲಿ ಪತ್ರಗಳನ್ನು ಕಳುಹಿಸಿ ಅವರ ಅಕೌಂಟ್​ ಸೀಜ್​ ಆಗುವಂತೆ ಮಾಡುತ್ತಿದ್ದ. ಆತ ಕಳಿಸುತ್ತಿದ್ದ ಪತ್ರ ಎಷ್ಟರ ಮಟ್ಟಿಗಿರುತ್ತಿತ್ತು ಎಂದರೆ ಇದು ED ಪತ್ರವೇ ಎಂದು ಬ್ಯಾಂಕ್​ ಅಧಿಕಾರಿಗಳು ನಂಬಿ ತನ್ನ ಗ್ರಾಹಕರ ಅಕೌಂಟ್​ಗಳನ್ನ ಸ್ಥಗಿತಗೊಳಿಸುತ್ತಿದ್ದವು ಎನ್ನಲಾಗಿದೆ.

ಇದೇ ರೀತಿ ಈ ಆಸಾಮಿ ಯೂನಿಯನ್​ ಬ್ಯಾಂಕ್‍ಗೆ 3 ನೋಟಿಸ್​, ಐಡಿಬಿಐ ಬ್ಯಾಂಕ್‍ಗೆ 1 ನೋಟಿಸ್​, ಎಸ್‍ಬಿಐ ಬ್ಯಾಂಕಿಗೆ 1 ನೋಟಿಸ್​, ಖಾನಾಪುರದ ಬ್ಯಾಂಕ್​​ ಆಫ್​ ಮಹಾರಾಷ್ಟ್ರ ಬ್ಯಾಂಕ್‍ಗೆ 1 ನೋಟಿಸ್​, ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ 1 ನೋಟಿಸ್​ ನೀಡಿದ್ದಾನೆ. ಇದಷ್ಟೇ ಅಲ್ಲ, ಜಿಲ್ಲಾ ಸತ್ರ ನ್ಯಾಯಾಧೀಶರ ಹೆಸರು ಮತ್ತು ಕೆಲವು ಪ್ರತಿಷ್ಠಿತ ವಕೀಲರ ಹೆಸರನ್ನು ನಮೂದಿಸಿ ನಕಲಿ ಕೌನ್ಸಿಲೇಶನ್​(ಲೀಗಲ್) ನೋಟಿಸ್‍ಗಳನ್ನು ಬ್ಯಾಂಕ್‍ಗಳಿಗೆ ಕಳಿಸಿರುವ ಆರೋಪ ಕೇಳಿ ಬಂದಿದೆ.

ಗ್ರಾಹಕರ ಅಕೌಂಟ್​ಗಳನ್ನ ಸ್ಥಗಿತಗೊಳಿಸಿದ ನಂತರ ಕೆಲವು ಬ್ಯಾಂಕ್​ಗಳು ED ಕಚೇರಿಗೆ ಮೇಲ್​ ಮಾಡುತ್ತಿದ್ದವು. ಅದಕ್ಕೆ ನಾವು ನಿಮಗೆ ಯಾವುದೇ ಪತ್ರ ಕಳಿಸಿಲ್ಲ ಅಂತ ಕಚೇರಿಯಿಂದ ಪ್ರತ್ಯುತ್ತರ ಬರುತ್ತಿತ್ತು. ಇದರಿಂದ ಗೊಂದಲಕ್ಕೊಳಗಾದ ಬ್ಯಾಂಕ್​ ಅಧಿಕಾರಿಗಳು, ಸೈಬರ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ.

ಈ ಬಗ್ಗೆ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಮಾತನಾಡಿ. ಇತ‌ ತನ್ನ ಇನ್ಶೂರೆನ್ಸ್​ ಕಂಪನಿಯಲ್ಲಿ ಅವಧಿ ಮುಗಿದ ಪಾಲಿಸಿದಾರರಿಂದ ಬರೊಬ್ಬರಿ 26 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಬಂಧಿತ ಆರೋಪಿಯಿಂದ ನಕಲಿ ಸ್ಟಾಂಪ್​ ತಯಾರು ಮಾಡುವ ಮಷಿನ್​, ಪ್ರಿಂಟರ್​, ಒಂದು ಇನೋವಾ ಕಾರು​, ಒಂದು ಸ್ವಿಪ್ಟ್​ ಡಿಸೈರ್​ ಕಾರನ್ನ ವಶಕ್ಕೆ ಪಡೆದುಕೊಂಡಿದ್ದೇವೆ. ಈ ಸಂಬಂಧ ಬೆಳಗಾವಿ ಸಿಇಎನ್​ ಅಪರಾಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತಾ ತಿಳಿಸಿದ್ದಾರೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ