Breaking News

ಬ್ಯಾಂಕ್ ಕೆಲಸ ಇದ್ರೆ ಇಂದೇ ಮುಗಿಸಿಕೊಳ್ಳಿ.. ನಾಳೆಯಿಂದ 4 ದಿನ ತೆರೆಯಲ್ಲ ಬಾಗಿಲು

Spread the love

ನವದೆಹಲಿ: ನಿಮಗೇನಾದರೂ ಬ್ಯಾಂಕ್​ನಲ್ಲಿ ಕೆಲಸಗಳಿದ್ದರೆ ಇಂದೇ ಮುಗಿಸಿಕೊಂಡುಬಿಡಿ.. ಯಾಕಂದ್ರೆ ನಾಳೆಯಿಂದ 4 ದಿನಗಳ ಕಾಲ ಬ್ಯಾಂಕ್​ಗಳು ಬಾಗಿಲು ತೆರೆಯಲ್ಲ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್, ಮಾರ್ಚ್​ 15 ಮತ್ತು 16ರಂದು ಭಾರತದಾದ್ಯಂತ ಬ್ಯಾಂಕ್​ ಬಂದ್​ ಮಾಡುವಂತೆ ಕರೆ ನೀಡಿದೆ. ಕೇಂದ್ರ ಸರ್ಕಾರ ಈಗಾಗಲೇ ಹಲವು ಬ್ಯಾಂಕ್​ಗಳನ್ನ ಖಾಸಗೀಕರಣ ಮಾಡಿದೆ, ಇನ್ನು ಹಲವು ಬ್ಯಾಂಕ್​ಗಳನ್ನ ಖಾಸಗೀಕರಣ ಮಾಡುವುದಾಗಿ ತಿಳಿಸಿದೆ.

ಈ ವಿಚಾರವಾಗಿ ಆಕ್ರೋಶಗೊಂಡಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್, ಭಾರತ್​ ಬಂದ್​ ಮಾಡುವಂತೆ ಕರೆ ಕೊಟ್ಟಿದೆ. ಇನ್ನು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕೆಳಗೆ ಅಖಿಲ ಭಾರತ ಬ್ಯಾಂಕ್​ ಸಿಬ್ಬಂದಿಗಳ ಸಂಘ, ಭಾರತೀಯ ಬ್ಯಾಂಕ್​ ಮುಖ್ಯಸ್ಥರ ಸಂಘ ಸೇರಿದಂತೆ ಇತರೆ 7 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಿಬ್ಬಂದಿ ಬಂದ್​ಗೆ ಬೆಂಬಲ ನೀಡಬೇಕು ಅಂತ ಮನವಿ ಮಾಡಿಕೊಂಡಿದೆ.

ಹೀಗಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳು ನಡೆಯುವುದು ಅನುಮಾನ ಎನ್ನಲಾಗಿದೆ. ನಾಳೆ ಶವಿನಾರ ಎರಡನೇ ಶನಿವಾರ ಹಿನ್ನೆಲೆ ರಜೆ, ಭಾನುವಾರ ಎಂದಿನಂತೆ ರಜೆ ಇರಲಿದೆ. ಇನ್ನು 15 ಮತ್ತು 16 ರಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಬಂದ್​ಗೆ ಕರೆಕೊಟ್ಟ ಹಿನ್ನೆಲೆ ಆ ಎರಡೂ ದಿನಗಳ ಕಾಲ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವುದು ಬಹುತೇಕ ಅನುಮಾನವಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ