Breaking News
Home / ಜಿಲ್ಲೆ / ಬೆಂಗಳೂರು / ವಿಸ್ಕಿ ಡಿಸ್ಟ್ರಿಬ್ಯೂಟರ್​ವೊಬ್ಬರ ಮೇಲೆ ಹಲ್ಲೆಗೈದು, ಕಿಡ್ನ್ಯಾಪ್ ಮಾಡಲು ಯತ್ನ

ವಿಸ್ಕಿ ಡಿಸ್ಟ್ರಿಬ್ಯೂಟರ್​ವೊಬ್ಬರ ಮೇಲೆ ಹಲ್ಲೆಗೈದು, ಕಿಡ್ನ್ಯಾಪ್ ಮಾಡಲು ಯತ್ನ

Spread the love

ಬೆಂಗಳೂರು: ನಗರದಲ್ಲಿ ವಿಸ್ಕಿ ಡಿಸ್ಟ್ರಿಬ್ಯೂಟರ್​ವೊಬ್ಬರ ಮೇಲೆ ಹಲ್ಲೆಗೈದು, ಕಿಡ್ನ್ಯಾಪ್ ಮಾಡಲು ಯತ್ನಿಸಿರೋ ಘಟನೆ ನಿನ್ನೆ ಸಂಜೆ ನಾಗರಭಾವಿ ಎರಡನೇ ಹಂತದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೋನ್ ಸ್ಟಾಗ್ ವಿಸ್ಕಿ ಡಿಸ್ಟ್ರಿಬ್ಯೂಟರ್ ಅವಿನಾಶ್ ಹಲ್ಲೆಗೊಳಗಾದವರು.

ಅವಿನಾಶ್​ರಿಂದ, ಪ್ರವೀಣ್ ಶೆಟ್ಟಿ ಎಂಬುವವರು ₹35 ಲಕ್ಷ ‌ಮೌಲ್ಯದ ಮದ್ಯವನ್ನ ಪಡೆದಿದ್ರು. ಆದ್ರೆ ಕೊರೊನಾ ಶುರುವಾದ ಹಿನ್ನೆಲೆ ವಿಸ್ಕಿ ಡಿಸ್ಟ್ರಿಬ್ಯೂಟ್ ಮಾಡಲಾಗಿಲ್ಲ ಅಂತ ಪ್ರವೀಣ್ ಶೆಟ್ಟಿ ಅವಿನಾಶ್​ಗೆ ಹಣ ನೀಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಅವಿನಾಶ್​, ಪ್ರವೀಣ್ ಶೆಟ್ಟಿ ವಿರುದ್ದ ಕೊರ್ಟ್​ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆ ಪ್ರವೀಣ್ ಶೆಟ್ಟಿ ಆಪ್ತ ಜೀವನ್ ಎಂಬಾತ, ಹಣದ ವಿಚಾರವಾಗಿ ಮಾತನಾಡಲು ಅವಿನಾಶ್​ರಿಗೆ ಕರೆ ಮಾಡಿ ನಾಗರಭಾವಿ ಬಳಿ ಕರೆಸಿದ್ದ. ಆದ್ರೆ ಹಣ ಕೊಡದೇ ಅವಿನಾಶ್​ರನ್ನ ರೂಂನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರವೀಣ್ ಶೆಟ್ಟಿ, ಜೀವನ್, ಮಂಜು ಹಾಗೂ ಪ್ರೀತಂ ಎಂಬ ನಾಲ್ವರು ಹಲ್ಲೆ ಮಾಡಿ, ಅವಿನಾಶ್​ರನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಅವಿನಾಶ್ ಪೊಲೀಸರಿಗೆ ಕರೆ ಮಾಡಲು ಮುಂದಾದಾಗ ಮೊಬೈಲ್ ಒಡೆದು ಹಾಕಿ ಹಲ್ಲೆಗೈದಿದ್ದಾರೆ. ನಂತರ ಅವಿನಾಶ್ ಕಿರುಚಿಕೊಂಡಾಗ ಸ್ಥಳಿಯರು ಹಾಗೂ ಕಾರು ಚಾಲಕ ಅಜಿತ್ ಸಹಾಯಕ್ಕೆ ಬರುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸದ್ಯ ಘಟನೆ ಬಗ್ಗೆ ಅವಿನಾಶ್​ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆ ಜೀವಬೆದರಿಕೆ ಹಾಗೂ ಕಿಡ್ನ್ಯಾಪ್​​ ಯತ್ನ ಆರೋಪಗಳ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ