Breaking News

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದಅದೃಷ್ಟವಂತ!

Spread the love

ದುಬೈ: ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿ ಕಳೆದ 15 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದ ವ್ಯಕ್ತಿ “ಲಕ್ಕಿ ಡ್ರಾ’ ಲಾಟರಿಯಲ್ಲಿ ಬರೋಬ್ಬರಿ 24 ಕೋಟಿ ರೂ. ಗೆದ್ದಿದ್ದಾರೆ!

ಶಿವಮೊಗ್ಗ ಜಿಲ್ಲೆಯ ಶಿವಮೂರ್ತಿ ಕೃಷ್ಣಪ್ಪ ಈ ಅದೃಷ್ಟವಂತ. ಇವರ 202511 ನಂಬರಿನ ಲಾಟರಿ ಟಿಕೆಟ್‌ಗೆ ಈ ಬಹುಮಾನ ಸಿಕ್ಕಿದೆ ಎಂದು ಗಲ್ಫ್ ನ್ಯೂಸ್‌ ವರದಿಮಾಡಿದೆ. ಮನೆಯಲ್ಲಿ ಕುಳಿತು ಲಕ್ಕಿ ಡ್ರಾ ಫ‌ಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಶಿವಮೂರ್ತಿ ಅವರಿಗೆ ಇವರ ನಂಬರ್‌ ಆಯ್ಕೆಯಾದಾಗ ನಂಬಲಸಾಧ್ಯವಾಗಿತ್ತಂತೆ. “ಬಹುಮಾನದ ಹಣದಲ್ಲಿ ಹುಟ್ಟೂರು ಶಿವಮೊಗ್ಗದಲ್ಲಿ ದೊಡ್ಡ ಮನೆ ನಿರ್ಮಿಸಿ, ಮಕ್ಕಳ ಭವಿಷ್ಯಕ್ಕೆ ಠೇವಣಿ ಇಡಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ. ಶಿವಮೂರ್ತಿ ಅವರಿಗೆ 10 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ