Breaking News
Home / ರಾಜಕೀಯ / India vs Eng – ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಭಾರತ ಜಯಭೇರಿ

India vs Eng – ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಭಾರತ ಜಯಭೇರಿ

Spread the love

ಚೆನ್ನೈ(ಫೆ. 16): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆದ ಭಾರೀ ಸೋಲಿನ ಅವಮಾನಕ್ಕೆ ಅಷ್ಟೇ ಭರ್ಜರಿಯಾಗಿ ಭಾರತ ಸೇಡು ತೀರಿಸಿಕೊಂಡಿದೆ. ಚೆನ್ನೈನಲ್ಲೇ ನಡೆದ ಎರಡನೇ ಪಂದ್ಯದಲ್ಲಿ ಭಾರತ 317 ರನ್​ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಗೆಲ್ಲಲು 482 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದ ಎರಡನೇ ಇನ್ನಿಂಗ್ಸ್ 164 ರನ್​ಗೆ ಅಂತ್ಯಗೊಂಡಿತು. ಭಾರತೀಯ ಸ್ಪಿನ್ನರ್​ಗಳ ಕೈಚಳಕಕ್ಕೆ ಆಂಗ್ಲರು ಬೇಸ್ತುಬಿದ್ದು ಸೋಲೊಪ್ಪಿದರು. ಈ ಗೆಲುವಿನ ಮೂಲಕ ಭಾರತ ಈ ನಾಲ್ಕು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿದೆ. ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ.

ನಿನ್ನೆ ಮೂರನೇ ದಿನ ಇಂಗ್ಲೆಂಡ್ ತಂಡ ತನ್ನ ಎರಡನೇ ಇನಿಂಗ್ಸಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದ್ದಾಗಲೇ ಸೋಲು ಖಚಿತವಾಗಿತ್ತು. ಇಂದು ನಾಲ್ಕನೇ ದಿನ ನಿರೀಕ್ಷೆ ಮೀರಿ ಇಂಗ್ಲೆಂಡ್ ತಂಡದ ಪತನ ಆಯಿತು. 126 ರನ್ ಆಗುವಷ್ಟರಲ್ಲಿ 9 ವಿಕೆಟ್​ಗಳು ಪತನವಾಗಿದ್ದವು. ಆದರೆ, ಅಂತ್ಯದಲ್ಲಿ ಮೊಯೀನ್ ಅಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಸೋಲನ್ನು ತುಸು ವಿಳಂಬಗೊಳಿಸಿದರು. ಮಾಜಿ ಆರ್​ಸಿಬಿ ಆಟಗಾರನಾದ ಮೊಯೀನ್ ಅಲಿ ಕೇವಲ 18 ಎಸೆತದಲ್ಲಿ 43 ರನ್ ಚಚ್ಚಿದರು. 5 ಸಿಕ್ಸರ್ 3 ಬೌಂಡರಿ ಭಾರಿಸಿದ ಅವರು ಈ ಪಿಚ್ ಬ್ಯಾಟುಗಾರರ ಸ್ವರ್ಗ ಎಂಬಂತೆ ಬ್ಯಾಟಿಂಗ್ ನಡೆಸಿದ್ದು ವಿಶೇಷ. ಮೊಯೀನ್ ಅವರ 43 ರನ್ ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರ ಪೈಕಿ ಗರಿಷ್ಠ ಸ್ಕೋರ್ ಎನಿಸಿತು.

ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಪ್ರಮುಖ ರೂವಾರಿಯಾದವರು ರೋಹಿತ್ ಶರ್ಮಾ, ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್. ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸಲ್ಲಿ ಗಳಿಸಿದ ಅಮೋಘ ಶತಕ (161 ರನ್) ಭಾರತದ ಗೆಲುವಿಗೆ ಒಳ್ಳೆಯ ಬುನಾದಿ ಹಾಕಿತು. ಆರ್ ಅಶ್ವಿನ್ ಎರಡನೇ ಇನ್ನಿಂಗ್ಸಲ್ಲಿ ಶತಕ ಭಾರಿಸಿದಲ್ಲದೆ ಒಟ್ಟಾರೆ 8 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 7 ವಿಕೆಟ್ ಪಡೆದು ಭಾರತದ ಗೆಲುವನ್ನ ಸುಗಮಗೊಳಿಸಿದರು


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ