Breaking News
Home / ಜಿಲ್ಲೆ / ಬೆಂಗಳೂರು / ಕೇಂದ್ರ ಆರೋಗ್ಯ ಇಲಾಖೆʼಯಿಂದ ʼಕಚೇರಿʼಗಳಿಗೆ ಹೊಸ ʼಗೈಡ್‌ ಲೈನ್ಸ್‌ʼ ಜಾರಿ: ಉದ್ಯೋಗಿಗಳೇ ನೀವು ಇವುಗಳನ್ನ ಪಾಲಿಸ್ಲೇಬೇಕು

ಕೇಂದ್ರ ಆರೋಗ್ಯ ಇಲಾಖೆʼಯಿಂದ ʼಕಚೇರಿʼಗಳಿಗೆ ಹೊಸ ʼಗೈಡ್‌ ಲೈನ್ಸ್‌ʼ ಜಾರಿ: ಉದ್ಯೋಗಿಗಳೇ ನೀವು ಇವುಗಳನ್ನ ಪಾಲಿಸ್ಲೇಬೇಕು

Spread the love

ಬೆಂಗಳೂರು: ಕೇಂದ್ರ ಆರೋಗ್ಯ ಇಲಾಖೆ ಕಚೇರಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದ್ದು, ಉದ್ಯೋಗಿಗಳು ಕಡ್ಡಾಯವಾಗಿ ಇವುಗಳನ್ನ ಪಾಲಿಸಿಲೇ ಬೇಕು ಎಂದು ತಾಕೀತು ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ನೀಡಿದ ಸಾಮಾನ್ಯ ಹಾಗೂ ನಿರ್ಧಿಷ್ಟ ಮಾರ್ಗಸೂಚಿಗಳು ಈ ಕೆಳಗಿನಂತಿವೆ.

ಸಾಮಾನ್ಯ ‌ಮಾರ್ಗಸೂಚಿಗಳು ಇಂತಿವೆ..!

* ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
* ಕಚೇರಿಯಲ್ಲಿ ಇರುವಷ್ಟು ಸಮಯ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು.
* ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪ್ ಬಳಸಿ ಆಗಾಗ ಕೈ ತೊಳೆಯಬೇಕು.
* ಬಳಸಿದ ಟಿಶ್ಯುಗಳನ್ನ ಸರಿಯಾಗಿ ವಿಲೇವಾರಿ ಮಾಡಬೇಕು.
* ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದ್ರು ಆಫೀಸ್ ಸೂಪರ್ ವೈಸರ್ʼಗೆ ತಿಳಿಸಬೇಕು. * ಆಫೀಸ್ ವ್ಯಾಪ್ತಿಯಲ್ಲಿ ಉಗುಳುವಂತಿಲ್ಲ.
* ಕಂಪೆನಿ ಎಲ್ಲಾ ಉದ್ಯೋಗಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಯಪ್ ಬಳಸಬೇಕು.

ನಿರ್ಧಿಷ್ಟ ಮಾರ್ಗಸೂಚಿಗಳು ಇಂತಿವೆ..!

*ಆಫೀಸ್ ಪ್ರವೇಶದ ವೇಳೆ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.
* ಯಾವುದೇ ರೋಗದ‌ ಲಕ್ಷಣಗಳು ಇಲ್ಲದವರಿಗೆ ಮಾತ್ರ ಕಚೇರಿಯೊಳಗೆ ಪ್ರವೇಶಕ್ಕೆ ಅವಕಾಶ.
* ಕಂಟೈನ್ಮೆಂಟ್ ಜೋನ್ʼನಲ್ಲಿರುವ ಉದ್ಯೋಗಿ ಕಚೇರಿಗೆ ಬರುವಂತಿಲ್ಲ.
* ಕಂಪೆನಿಯ ಚಾಲಕರಿಗೆ ಇದು ಅನ್ವಯವಾಗಲಿದ್ದು, ಅಂತರ ಕಾಪಾಡಿಕೊಳ್ಳಬೇಕು.
* ಸೋಡಿಯಂ ಹೈಪೋಕ್ಲೋರೈಡ್ ಬಳಸಿ ದಿನಕ್ಕೆ ಎರಡು ಬಾರಿ ಕಚೇರಿ ಫ್ಲೋರ್ ಸ್ಯಾನಿಟೈಸ್ ಮಾಡಬೇಕು.

 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ