Breaking News
Home / Uncategorized / ಕಾಂಗ್ರೆಸ್‌ನ ಪ್ರಮುಖರನ್ನೇ ಬಿಜೆಪಿಗೆ ಸೇರಿಸುವೆ

ಕಾಂಗ್ರೆಸ್‌ನ ಪ್ರಮುಖರನ್ನೇ ಬಿಜೆಪಿಗೆ ಸೇರಿಸುವೆ

Spread the love

ಬೆಳಗಾವಿ: ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಯಾರೂ ನಂಬಲು ಆಗದಂಥ ಕಾಂಗ್ರೆಸ್‌ನ ಪ್ರಮುಖ ಐವರು ಶಾಸಕರನ್ನು ಬಿಜೆಪಿಗೆ ತರುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.

ಬಿಜೆಪಿ ಗ್ರಾಮೀಣ ಕ್ಷೇತ್ರದ ನೂತನ ಗ್ರಾ.ಪಂ. ಸದಸ್ಯರ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಟಾಪ್‌ 5 ಆ ಶಾಸಕರ ಹೆಸರು ಕೇಳಿದರೆ ಎಲ್ಲರೂ ಬೆರಗಾಗುತ್ತಾರೆ ಎಂದರು.

ಬಿಜೆಪಿಯಲ್ಲಿ ತೃಪ್ತಿ :

ಬಿಜೆಪಿಯಲ್ಲಿ ಖುಷಿ ಹಾಗೂ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಸೇರಿರುವ ಎಲ್ಲ ಶಾಸಕರು ತುಂಬಾ ಸಂತೋಷದಿಂದಿದ್ದೇವೆ. ಕಾಂಗ್ರೆಸ್‌ನಲ್ಲಿ 20 ವರ್ಷಗಳ ಕಾಲ ನಮ್ಮನ್ನು ಕಡೆಗಣಿಸಲಾಗಿತ್ತು. ಬಿಜೆಪಿ ಸೇರಿ ಒಂದೇ ವರ್ಷದಲ್ಲಿ ಅಮಿತ್‌ ಶಾರಿಂದ ತೊಡಗಿ ಮುಖ್ಯಮಂತ್ರಿವರೆಗೆ ಎಲ್ಲರೂ ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದರು.

ಸಿದ್ದು ಜತೆಗೆ ನಿತ್ಯ ಸಂಭಾಷಣೆ! :

ಸಿದ್ದರಾಮಯ್ಯ ನಮಗೆ ಇಂದಿಗೂ ನಾಯಕ. ದಿನಾಲೂ ಎರಡು ಬಾರಿ ಅವರೊಂದಿಗೆ ಮಾತನಾಡುತ್ತೇನೆ. ಆದರೆ ಪಕ್ಷದ ವಿಚಾರ ಬಂದಾಗ ನಾವೆಲ್ಲರೂ ಬಿಜೆಪಿ. 2023ರಲ್ಲಿ ಮತ್ತೆ ಬಿಜೆಪಿ ಸರಕಾರ ಬರಲು ಸಂಕಲ್ಪ ಮಾಡಿದ್ದೇನೆ. ಶೀಘ್ರದಲ್ಲಿ ಮುಖ್ಯಮಂತ್ರಿಯನ್ನು ಕರೆಸಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಜವಾಬ್ದಾರಿಯುತರು ತಲೆ ಕೆಟ್ಟಂತೆ ಮಾತನಾಡಿದರೆ ಕಷ್ಟ :

ರಾಜಕಾರಣದಲ್ಲಿ ಬಹಳ ಅನುಭವ ಬೇಕು ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವಾಗ ಜಾಗ್ರತೆ ವಹಿಸಬೇಕು. ತಲೆ ಕೆಡಿಸಿ ಕೊಂಡು ಮಾತನಾಡಿದರೆ ಕಷ್ಟ ಆಗುತ್ತದೆ ಎಂದು ರಮೇಶ್‌ ಜಾರಕಿಹೊಳಿ ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ಗೆ ಟಾಂಗ್‌ ನೀಡಿದರು.


Spread the love

About Laxminews 24x7

Check Also

5 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾದ ಡಾ.ಶಂಕರೇಗೌಡರಿಗೆ ಹೃದಯಾಘಾತ!?

Spread the love ಮಂಡ್ಯ: ಐದು ರೂಪಾಯಿ ಡಾಕ್ಟರ್​ ಎಂದೇ ಖ್ಯಾತರಾಗಿರುವ ಡಾ.ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿದೆ. ಸದ್ಯ ಅವರನ್ನ ಮೈಸೂರಿನ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ