Breaking News
Home / ಜಿಲ್ಲೆ / ಮಂಡ್ಯ / ಪಿಎಸ್‍ಎಸ್‍ಕೆಯಿಂದ ಕಬ್ಬು ತೆಗೆದುಕೊಂಡು ಹೋಗದಂತೆ ನಿರ್ಬಂಧ ಹಾಕುವಂತೆ ಮುರುಗೇಶ್ ನಿರಾಣಿ ಮನವಿ

ಪಿಎಸ್‍ಎಸ್‍ಕೆಯಿಂದ ಕಬ್ಬು ತೆಗೆದುಕೊಂಡು ಹೋಗದಂತೆ ನಿರ್ಬಂಧ ಹಾಕುವಂತೆ ಮುರುಗೇಶ್ ನಿರಾಣಿ ಮನವಿ

Spread the love

ಮಂಡ್ಯ ಜಿಲ್ಲೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಮೀಸಲಿಟ್ಟಿರುವ ಕಬ್ಬನ್ನು ಇತರರು ತೆಗೆದುಕೊಂಡು ಹೋಗದಂತೆ ತಕ್ಷಣವೇ ಜಿಲ್ಲಾಡಳಿತ ನಿರ್ಬಂಧ ಹಾಕಬೇಕೆಂದು ಮಾಜಿ ಶಾಸಕ ಹಾಗೂ ನಿರಾಣಿ ಶುಗರ್ಸ್ ಲಿಮಿಟೆಡ್‍ನ ಅಧ್ಯಕ್ಷ ಮುರುಗೇಶ್ ನಿರಾಣಿ ಒತ್ತಾಯ ಮಾಡಿದ್ದಾರೆ.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ವ್ಯಾಪ್ತಿಯ ಕಬ್ಬನ್ನು ಜಿಲ್ಲಾಡಳಿತ ಮೀಸಲಿಟ್ಟಿದೆ.ಆದರೆ ನಮಗೆ ಮೀಸಲಿಟ್ಟಿರುವ ವ್ಯಾಪ್ತಿಯಿಂದ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ತೆಗೆದುಕೊಂಡು ಹೋಗುತ್ತಿವೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ತಕ್ಷಣವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಕ್ಕರೆ ಕಾರ್ಖಾನೆಗಳ ಕಬ್ಬು ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಕಬ್ಬು ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ಹಾಕಬೇಕೆಂದು ಮನವಿ ಮಾಡಿದ್ದಾರ.

ಆ.11ರಿಂದ ಪಾಂಡವಪುರ ಸಕ್ಕರೆ ಸಹಕಾರಿ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ನಾವು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದೇವೆ. ಕೊರೊನಾ ಸೋಂಕಿನ ನಡುವೆಯೂ ಇತರೆ ರಾಜ್ಯಗಳಿಂದ ಹಾಗೂ ಮುಧೋಳ ಸಕ್ಕರೆ ಕಾರ್ಖಾನೆಯಿಂದ ಯಂತ್ರೋಪಕರಣಗಳು ಹಾಗೂ ಬಿಡಿ ಭಾಗಗಳನ್ನು ತರಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸದೆ ತುಕ್ಕು ಹಿಡಿದು ನಿಂತಿರುವ ಪಿಎಸ್‍ಎಸ್‍ಕೆಯಲ್ಲಿ ದುರಸ್ತಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಈಗಾಗಲೇ ಬಿಹಾರಿ ಹಾಗೂ ಮುಧೋಳದಿಂದ ನುರಿತ ಸಕ್ಕರೆ ತಂತ್ರಜ್ಞರನ್ನು ಕರೆಸಲಾಗಿದೆ. ಇಂಜಿನಿಯರ್‍ಗಳು, ತಂತ್ರಜ್ಞರು ಮತ್ತು ನೌಕರರು ಹಗಲಿರುಳು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನಿಗದಿಯಾಗಿರುವಂತೆ ಆ.11ರಂದು ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕೆಲಸಕ್ಕೆ ಚಾಲನೆ ನೀಡಲಿದ್ದೇವೆ ಎಂದು ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಶೇ.90ರಷ್ಟು ಉದ್ಯೋಗಗಳನ್ನು ನೀಡಲು ನಮ್ಮ ನಿರಾಣಿ ಶುಗರ್ಸ್ ಲಿಮಿಟೆಡ್ ತೀರ್ಮಾನಿಸಿದೆ. ನೇಮಕಾತಿ ಪ್ರಕ್ರಿಯೆಯು ಚಾಲನೆಯಲ್ಲಿದೆ. ಕಾರ್ಖಾನೆ ಆರಂಭವಾದ ನಂತರ ಅಧಿಕಾರಿಗಳು , ಸಿಬ್ಬಂದಿ ಹಾಗೂ ಕಾರ್ಮಿಕರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿತ ಯಾವುದೇ ಒಬ್ಬ ವ್ಯಕ್ತಿಯನ್ನು ಪಿಎಸ್‍ಎಸ್‍ಕೆಯಲ್ಲಿ ಕಾರ್ಯ ನಿರ್ವಹಿಸಲು ಬಿಡುವುದಿಲ್ಲ. ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಸ್ವತಃ ನಾನೇ ಕಾರ್ಖಾನೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ. ಕೆಲವರು ನನ್ನ ಏಳಿಗೆಯನ್ನು ಸಹಿಸದೆ ಕಾರ್ಖಾನೆಯಲ್ಲಿ ಕೊರೊನಾ ಸೋಂಕಿತರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸುಳ್ಳು ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ.

ಕಾರ್ಮಿಕರು ಇಂತಹ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಪ್ರತಿಯೊಬ್ಬರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆಗೆ ಚಾಲನೆ ನೀಡುತ್ತಿದ್ದೇವೆ. ಎಂತಹುದೇ ಸಂದರ್ಭದಲ್ಲೂ ಜನರಿಗೆ ಧಕ್ಕೆಯಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 


Spread the love

About Laxminews 24x7

Check Also

ಕೊಪ್ಪಲಿನಲ್ಲಿ ತಾಯಿ-ಮಗ ಹೀಗೆ ಸಾವಿನಲ್ಲಿ ಒಂದಾಗಿದ್ದಾರೆ

Spread the loveಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ