Breaking News
Home / Uncategorized / ಏರುತ್ತಲೇ ಇದೆ ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ಕರ್ನಾಟಕ ಜನತೆಯ ಜೇಬುಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಿಡಿ

ಏರುತ್ತಲೇ ಇದೆ ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ಕರ್ನಾಟಕ ಜನತೆಯ ಜೇಬುಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಿಡಿ

Spread the love

ನವದೆಹಲಿ,  – ಅಂತಾರಾಷ್ಟ್ರೀಯ ತೈಲ ದರಗಳಲ್ಲಿ ಹೆಚ್ಚಳವಾಗುವ ಮೂಲಕ ಈ ವಾರದಲ್ಲಿ ಎರಡನೇ ಬಾರಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನೇರವಾಗಿ 25 ಪೈಸೆ ಹೆಚ್ಚಳವಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿದ್ದ ಕರ್ನಾಟಕ ಜನತೆಯ ಜೇಬುಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಿಡಿ ಬಿದ್ದಿದೆ. ಗುರುವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.30 ರೂ.,ಡೀಸೆಲ್ ಬೆಲೆ ಪ್ರತಿ ಲೀ.ಗೆ 79.40 ಪೈಸೆಯಾಗುವ ಮೂಲಕ ಬಳಕೆದಾರರು 0.25 ಪೈಸೆ ಹೆಚ್ಚು ನೀಡಬೇಕಾಗುತ್ತದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ವಾರದಲ್ಲಿ ಎರಡರಿಂದ ಮೂರು ಬಾರಿ ಬೆಲೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗುತ್ತಿರುವುದು ಬಳಕೆದಾರರಲ್ಲಿ ಒಂದು ರೀತಿಯ ಉದ್ವಿಗ್ನತೆ ಮೂಡಿಸಿದೆ.ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 84.70 ರೂ., ಡೀಸೆಲ್ ಪ್ರತಿ ಲೀಟರ್‍ಗೆ 74.88 ರೂ. ಆಗಿದ್ದು, ಇದು ಕಳೆದ ಐದು ದಿನಗಳಲ್ಲಿ ನೇರವಾಗಿ ಏರಿಕೆಯಾದ ದರಗಳಾಗಿವೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರ.ಲೀ. 91.32 ಮತ್ತು ಡೀಸೆಲ್ ಪ್ರ.ಲೀ.81.34 ಪೈಸೆಯಾಗಿ ದೇಶದಲ್ಲೇ ಅತ್ಯಧಿಕ ಬೆಲೆ ರುಜುವಾತಾಗಿದೆ.


Spread the love

About Laxminews 24x7

Check Also

ಲೋಕಸಭಾ ಚುನಾವಣೆ: ಸಂಜೆ 5 ಗಂಟೆಯವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

Spread the loveಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಮುಗಿಯಲು ಕೆಲವೇ ಹೊತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ