Breaking News
Home / Uncategorized / 2 ತಿಂಗಳೊಳಗೆ ನೆಲಮಂಗಲ ನಗರಸಭೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

2 ತಿಂಗಳೊಳಗೆ ನೆಲಮಂಗಲ ನಗರಸಭೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

Spread the love

ನೆಲಮಂಗಲ (ಜ. 10): ಎರಡು ತಿಂಗಳಲ್ಲಿ ನೆಲಮಂಗಲ ನಗರಸಭೆ ಚುನಾವಣೆ ನಡೆಸುವಂತೆ ಹೈ ಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ದೇವದಾಸ್ ಅದೇಶ ನೀಡಿದ್ದಾರೆ. ನಗರಸಭೆ ಚುನಾವಣೆ ಕುರಿತಂತೆ ನೆಲಮಂಗಲ ನಗರಸಭೆಗೆ ನೂತನವಾಗಿ ಸೇರ್ಪಡೆಗೊಂಡಿರುವ ಅರಿಶಿನಕುಂಟೆ, ವಾಜರಹಳ್ಳಿ, ವಿಶ್ವೇಶ್ವರಪುರ, ಬಸವನಹಳ್ಳಿ ಗ್ರಾಮ ಪಂಚಾಯ್ತಿಗಳು 108 ಜನ ಮಾಜಿ ಸದಸ್ಯರ ಪರವಾಗಿ ಕಲ್ಪನಾ ಮಂಜುನಾಥ್ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೇವದಾಸ್ ಅವರು ನೆಲಮಂಗಲ ನಗರಸಭೆ ಚುನಾವಣೆ ನಡೆಸುವಂತೆ ಆದೇಶ ನೀಡಿದ್ದಾರೆ.

ಈ ಹಿಂದೆ ನೆಲಮಂಗಲ ಪುರಸಭೆಗೆ 26 ಮೇ 2019ರಲ್ಲಿ 23 ವಾರ್ಡ್‌ಗಳಿಗೆ ಚುನಾವಣೆ ನಡೆಸಲಾಗಿದ್ದು, 2019ರ ಜೂನ್ 1ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಜೂನ್ 3 ರಂದು ರಾಜ್ಯಪತ್ರದಲ್ಲಿ ಪುರಸಭಾ ಸದಸ್ಯರನ್ನು ಸರ್ಕಾರ ಘೋಷಣೆ ಮಾಡುವುದರ ಮೂಲಕ 23 ವಾರ್ಡ್ ಸದಸ್ಯರನ್ನ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು.ನಗರಸಭೆ ಘೋಷಣೆ:

ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರದ ಮನವಿಯನ್ನ ರಾಜ್ಯಪಾಲರು ಪುರಸ್ಕರಿಸಿ ದಿನಾಂಕ 24-6-2019 ರಂದು ಅಂಕಿತ ಹಾಕಿ ಕಲಂ 3/1 ರ ಪ್ರಕಾರ ಆಕ್ಷೇಪಣಾ ಅರ್ಜಿಗೆ ದಿನಾಂಕ 27-7-2019 ರವರೆಗೆ 30 ದಿನಗಳ ಕಾಲ ಗಡುವು ನೀಡುತ್ತದೆ. ಈ ನಡುವೆ ಪುರಸಭೆ ಸದಸ್ಯರು ನಾವು ಪುರಸಭೆಗೆ ಚುನಾಯಿತರಾಗಿದ್ದೇವೆ ನಮ್ಮನ್ನು ನಗರಸಭೆಯ ಸದ್ಸಯರನ್ನಾಗಿ ಪರಿಗಣಿಸಿ ಎಂದು ಆಕ್ಷೇಪಣಾ ಅರ್ಜಿ ಸಲ್ಲಿಸುತ್ತಾರೆ. ಆದರೆ ಪುರಸಭಾ ಸದಸ್ಯರನ್ನ ನಗರಸಭಾ ಸದಸ್ಯರನ್ನಾಗಿ ಮುಂದುವರೆಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಸೆಕ್ಷನ್ 351 ರಡಿ ಅಕ್ಷೇಪಣೆ ಅರ್ಜಿಯನ್ನ ವಜಾಗೊಳಿಸಲಾಗುತ್ತದೆ. ದಿನಾಂಕ 26-12-2019 ರಲ್ಲಿ ನೆಲಮಂಗಲ ಪುರಸಭೆ ಸೇರಿದಂತೆ ವಾಜರಹಳ್ಳಿ ಹಾಗೂ ಅರಿಶಿನಕುಂಟೆಯ ಸಂಪೂರ್ಣ ಗ್ರಾಮ ಪಂಚಾಯ್ತಿ, ಬಸವನಹಳ್ಳಿ ಹಾಗೂ ವಿಶ್ವೇಶ್ವರಪುರದ ಭಾಗಶಃ ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡಂತೆ ನೆಮಂಗಲ ಪುರಸಭೆಯನ್ನು ನಗರಸಭೆಯನ್ನಾಗಿ ಸರ್ಕಾರ ಮೇಲ್ದರ್ಜೆಗೆ ಏರಿಸಲಾಗಿತ್ತು. ನಂತರ ಪುರಸಭೆಯ ಆಡಳಿತ ವೈಖರಿ ನಗರಸಭೆಯಾಗಿ ಮೇಲ್ದರ್ಜೆಗೆ ಏರುತ್ತದೆ. ಅಲ್ಲದೆ 2011 ಜನಗಣತಿ ಪ್ರಕಾರ 70,373 ಜನಸಂಖ್ಯೆ ಆಧಾರದ ಮೇಲೆ 31 ವಾರ್ಡ್‌ಗಳ ವಿಂಗಡಣೆ ಸಹ ಮಾಡಲಾಗುತ್ತದೆ.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ