Breaking News
Home / Uncategorized / ಅಕಾಲಿಕ ಮಳೆಯಿಂದ ಬೆಳೆ ನಾಶ; ಸಂಕಷ್ಟದ ಸುಳಿಯಲ್ಲಿ ಧಾರವಾಡದ ರೈತರು

ಅಕಾಲಿಕ ಮಳೆಯಿಂದ ಬೆಳೆ ನಾಶ; ಸಂಕಷ್ಟದ ಸುಳಿಯಲ್ಲಿ ಧಾರವಾಡದ ರೈತರು

Spread the love

ಧಾರವಾಡ (ಜ. 10): ಮುಂಗಾರು ಬೆಳೆಗಳು ಅತಿವೃಷ್ಟಿ-ನೆರೆ ಹಾವಳಿಗೆ ತುತ್ತಾದ ಕಾರಣ ನಷ್ಟದ ಸುಳಿಯಲ್ಲಿದ್ದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇದೀಗ ಮತ್ತೆ ವರುಣನ ಆರ್ಭಟಕ್ಕೆ ಹಿಂಗಾರು ಬೆಳೆಗಳು ಸಹ ಹಾನಿಯಾಗುತ್ತಿದೆ. ಮಳೆರಾಯನ ಚೆಲ್ಲಾಟದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೌದು, ಧಾರವಾಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಅಕಾಲಿಕ ಮಳೆಯಿಂದ ಹಿಂಗಾರಿನ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜಿಲ್ಲೆಯ ರೈತ ಸಮೂಹ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.

ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ ಸುರಿದ ಮಳೆ ವಿವರ ಹೀಗಿದೆ.ಧಾರವಾಡ ತಾಲೂಕು 85 ಮೀ.ಮೀ,
ಹುಬ್ಬಳ್ಳಿ ತಾಲೂಕು 54 ಮೀ.ಮೀ,
ಕಲಘಟಗಿ ತಾಲೂಕು 3.8 ಮೀ.ಮೀ,
ನವಲಗುಂದ ತಾಲೂಕು 26.1 ಮೀ.ಮೀ,
ಅಣ್ಣಿಗೇರಿ ತಾಲೂಕು 19.4 ಮೀ.ಮೀ,ಕುಂದಗೋಳ ತಾಲೂಕು 5.8 ಮೀ.ಮೀ,

ಅತಿವೃಷ್ಟಿ-ನೆರೆಹಾವಳಿಗೆ ಗೆಜ್ಜೆ ಶೇಂಗಾ, ಹೆಸರು, ಸೋಯಾಬಿನ್, ಗೋವಿನಜೋಳ, ಸೂರ್ಯಕಾಂತಿ, ಈರುಳ್ಳಿ, ಅಲಸಂದಿ, ಉದ್ದು, ಮಡಿಕೆ, ಸೇರಿದಂತೆ ಮುಂಗಾರಿನ ಹಂಗಾಮಿನ ಶೇ.90ರಷ್ಟು ವಿವಿಧ ಬೆಳೆ ವರುಣನ ಪಾಲಾಗಿದ್ದವು. ಆದರೆ, ಮುಂಗಾರು ಬೆಳೆ ಕೈಕೊಟ್ಟರೂ ಹಿಂಗಾರು ಬೆಳೆ ಕೈ ಹಿಡಿ ಹಿಡಿಯುತ್ತದೆ ಎಂಬ ಕನಸು ಕಂಡ ರೈತರಿಗೆ ಆಘಾತ ತಂದಿದೆ ಈ ಅಕಾಲಿಕ ಮಳೆ.‌ ರೈತರಿಗೆ ತುಸು ಆದಾಯ ತರುವ ಕಡಲೆ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಧಾರವಾಡ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟರ್ ಬಿತ್ತನೆಯಾಗಿತ್ತು. ಅಕಾಲಿಕ ಮಳೆಯಿಂದ ಹೂವು ಉದುರಿ ಶೇ. 70ರಷ್ಟು ಬೆಳೆಗಳು ಹಾನಿಯಾಗಿವೆ.

ಹವಾಮಾನ ಆಧಾರಿತ ಬಿಳಿಜೋಳ, ಗೋಧಿ, ಕಡಲೆ, ಕುಸುಬಿ ಬೆಳೆಗಳು ವರುಣನ ರೌದ್ರ ನರ್ತನಕ್ಕೆ ನೆಲಕಚ್ಚಿವೆ. ಇನ್ನು ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು, ಬೃಹತ್ ಮರ ಧರೆಗೆ ಉರುಳಿದೆ. ಇನ್ನು ಕೆಲವೆಡೆ ಮನೆಗಳಿಗೆ ಸಣ್ಣಪುಟ್ಟ ಹಾನಿ ಸಂಭವಿಸಿವೆ.ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರ ಹಿಂಗಾರಿನ ಬಹುತೇಕ ಬೆಳೆಗಳಿಗೆ ಹಾನಿಯಾಗಿವೆ. ಇದರಿಂದ ರೈತರ ಬಾಯಿಗೆ ಬಂದ ತುತ್ತು ಕೈಗೆ ಬರದಂತಾಗಿದೆ.

ದರ ಕುಸಿತ, ಬರ, ಮಧ್ಯವರ್ತಿಗಳ ಹಾವಳಿ ಹೀಗೆ ಒಂದಿಲ್ಲೊಂದು ಸಮಸ್ಯೆ ನಡುವೆ ಪ್ರಸಕ್ತ ಅತಿವೃಷ್ಟಿ, ನೆರೆಹಾವಳಿ, ಅಕಾಲಿಕ ಮಳೆಯಿಂದ ಮುಂಗಾರು-ಹಿಂಗಾರು ಬೆಳೆಗಳು ವರುಣನ ಪಾಲಾಗಿವೆ. ರೈತನ ಕಣ್ಣೀರಿನ ಗೋಳು ಕೇಳೋರು ಯಾರು ಎಂಬ ಪ್ರಶ್ನೆ.

ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆಗಳ ಹಾನಿ ಸಮೀಕ್ಷೆ ಕಾರ್ಯ ನಡೆದಿದೆ. ಸಮೀಕ್ಷಾ ವರದಿ ಸರ್ಕಾರಕ್ಕೆ ಕಳುಹಿಸಲಿದ್ದೆವೆ. ಪರಿಹಾರ ಬಂದ ನಂತರ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜಶೇಖರ ಬಿಜಾಪೂರ ಹೇಳುತ್ತಾರೆ.


Spread the love

About Laxminews 24x7

Check Also

ಗಣೇಶವಾಡಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ, ಯುವ ನಾಯಕರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ

Spread the love  ಘಟಪ್ರಭಾ : ಪ್ರಾಚೀನ ಕಾಲದಿಂದಲೂ ನಾವು ದೈವ ಭಕ್ತರು. ದೇವರನ್ನು ನಂಬಿ ಬದುಕುತ್ತಿರುವವರು. ದೇವರಿಂದಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ