Breaking News
Home / Uncategorized / ಫೈನ್ ಹಾಕೋದಷ್ಟೇ ಅಲ್ಲ, ರಸ್ತೆ ಗುಂಡಿ ಮುಚ್ಚುವ ಕಾಯಕದಲ್ಲೂ ಬೆಂಗಳೂರಿನ ಪೊಲೀಸ್

ಫೈನ್ ಹಾಕೋದಷ್ಟೇ ಅಲ್ಲ, ರಸ್ತೆ ಗುಂಡಿ ಮುಚ್ಚುವ ಕಾಯಕದಲ್ಲೂ ಬೆಂಗಳೂರಿನ ಪೊಲೀಸ್

Spread the love

ಬೆಂಗಳೂರು(ಜ. 07): ಅಲ್ಲಲ್ಲಿ ನಿಂತು ಹೆಲ್ಮೆಟ್ ಹಾಕಿಲ್ಲ, ಸೀಟ್ ಬೆಲ್ಟ್ ಹಾಕಿಲ್ಲ ಅಂತ ಜನರಿಗೆ ಕ್ಲಾಸ್ ತಗಳ್ಳೋ ಟ್ರಾಫಿಕ್ ಪೊಲೀಸರು ಈಗ ಬಿಬಿಎಂಪಿ ಜೊತೆ ಸೇರಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಹಾಯವಾಗುತ್ತಿದ್ದಾರೆ. ಪಾಟ್​ಹೋಲ್ಸ್​ನಿಂದಾಗಿ ಇದನ್ನು ಹೆಂಗಪ್ಪಾ ಸರಿ ಮಾಡೋದು ಅಂತ ತಲೆಬಿಸಿಮಾಡಿಕೊಂಡಿದ್ದ ಬಿಬಿಎಂಪಿ ಕೈ ಹಿಡಿದಿದ್ದು ಬೆಂಗಳೂರಿ‌ನ ಟ್ರಾಫಿಕ್ ಪೊಲೀಸರು. ಕಳೆದ‌ ಕೆಲ‌ ತಿಂಗಳಿನಿಂದ ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಪೊಲೀಸರೂ ದುಡಿಯುತ್ತಿದ್ದಾರೆ.

ಈವರೆಗೆ 6,654 ರಸ್ತೆಗುಂಡಿಗಳನ್ನ ಪತ್ತೆ ಹಚ್ಚಿದ್ದಾರೆ ಬೆಂಗಳೂರು ಟ್ರಾಫಿಕ್ ಪೊಲೀಸರು. ಈ ಪೈಕಿ 3,310 ಪಾಟ್ ಹೋಲ್ಸ್ ಮುಚ್ಚಿದೆ ಬಿಬಿಎಂಪಿ‌. ಈ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದ ಬಿಬಿಎಂಪಿ ಫೈಂಡಿಂಗ್ & ಸರ್ವೀಸಿಂಗ್ ಎಂಬ ಎರಡು ವಿಂಗ್ ಮಾಡಿಕೊಂಡಿತ್ತು. ಫೈಂಡಿಂಗ್ ಅಂದರೆ ಗುಂಡಿಗಳನ್ನು ಪತ್ತೆ ಹಚ್ಚುವ ಟೀಂ. ಆ ಜವಾಬ್ದಾರಿನಾ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿತ್ತು. ಈ ಹಿನ್ನೆಲೆ ನಗರದ ಎಲ್ಲೆಲ್ಲಿ ರಸ್ತೆಗುಂಡಿಗಳು ಇವೆ ಎಂದು ಪತ್ತೆ ಹಚ್ಚಿ ಬಿಬಿಎಂಪಿ ಗಮನಕ್ಕೆ ಖಾಕಿ ತಂದಿತ್ತು. ಫೋಟೋ & ಲೊಕೇಶನ್ ಅನ್ನು ಜಿಯೋ ಟ್ಯಾಗಿಂಗ್ ನಲ್ಲಿ ಹಾಕಿ ಬಿಬಿಎಂಪಿಗೆ ಮಾಹಿತಿ ಮುಟ್ಟಿಸುತ್ತಿತ್ತು.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ