Breaking News
Home / Uncategorized / ಮಹಾಲಿಂಗಪುರ ಘಟನೆ ಉಮಾಶ್ರೀ ನಿರ್ದೇಶನದ ಡ್ರಾಮಾ, ನಾವೂ ಪ್ರತಿದೂರು ದಾಖಲಿಸುತ್ತೇವೆ – ಶಾಸಕ ಸಿದ್ದು ಸವದಿ

ಮಹಾಲಿಂಗಪುರ ಘಟನೆ ಉಮಾಶ್ರೀ ನಿರ್ದೇಶನದ ಡ್ರಾಮಾ, ನಾವೂ ಪ್ರತಿದೂರು ದಾಖಲಿಸುತ್ತೇವೆ – ಶಾಸಕ ಸಿದ್ದು ಸವದಿ

Spread the love

ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಸದಸ್ಯೆಯರ ಎಳೆದಾಡಿದ ಘಟನೆ, ಗೊಂದಲಕ್ಕೆ ಕಾಂಗ್ರೆಸ್ ಹಾಗೂ ಉಮಾಶ್ರೀ ಕಾರಣ. ನನ್ನ ಹೆಸರು ಕೆಡಿಸಲು ರಾಜಕೀಯ ದುರುದ್ದೇಶದಿಂದ ಉಮಾಶ್ರೀ ಕುತಂತ್ರ  ಮಾಡುತ್ತಿದ್ದಾರೆ. ಇದು ಉಮಾಶ್ರೀ ನಿರ್ದೇಶನದ ನಾಟಕ. ಯಾಕಂದ್ರೆ ಉಮಾಶ್ರೀಗೆ ಡ್ರಾಮಾ ಬರುತ್ತೇ. ನಮಗೆ ಬರಲ್ಲ. ಆ ವಾತಾವರಣದಲ್ಲಿ ಅವರು ಬೆಳೆದುಬಂದಿದ್ದಾರೆ. ಅನೇಕ ಸಿನಿಮಾ ಮಾಡಿದ್ದಾರೆ. ಯಾವ್ಯಾವ ಸಂದರ್ಭದಲ್ಲಿ ಯಾವ ಪಾತ್ರ ಮಾಡಬೇಕು ಹಾಗೆ ಚೆನ್ನಾಗಿ ನಟಿಸುತ್ತಾರೆ. ಅದೇ ಪಾತ್ರವನ್ನು ಈಗ ಇಲ್ಲಿ ಮಾಡುತ್ತಿದ್ದಾರೆ ಎಂದು ರಬಕವಿ ಪಟ್ಟಣದಲ್ಲಿ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಅವರು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಸದಸ್ಯೆ ಚಾಂದಿನಿ ನಾಯ್ಕ, ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಕೇಸ್ ದಾಖಲಿಸಿದ ಹಿನ್ನೆಲೆಯಲ್ಲಿ  ಬಾಗಲಕೋಟೆ ಜಿಲ್ಲೆ ರಬಕವಿ ಪಟ್ಟಣದಲ್ಲಿ ಶಾಸಕ ಸಿದ್ದು ಸವದಿ ಪ್ರತಿಕ್ರಿಯಿಸಿದರು. ಮಹಾಲಿಂಗಪುರ ಘಟನೆಯಲ್ಲಿ ನನ್ನದು ಎಳ್ಳು ಕಾಳಿನಷ್ಟೂ ತಪ್ಪಿಲ್ಲ. ಈ ಘಟನೆ, ಗೊಂದಲಕ್ಕೆ  ಕಾಂಗ್ರೆಸ್ ನ ಉಮಾಶ್ರೀ ಹಾಗೂ  ಪದ್ಮಜೀತ ನಾಡಗೌಡರು ಕಾರಣ. ಅವರಿಗೆ ದುಡ್ಡು ಹೆಚ್ಚಾಗಿದೆ. ನೇರವಾಗಿ ಆಯ್ಕೆಯಾಗಿ ಅಧಿಕಾರ ಹಿಡಿಯುವ ಶಕ್ತಿ ಕಳೆದುಕೊಂಡಿದ್ದಾರೆ. ಹಿಂದಿನ ಬಾಗಿಲಿನಿಂದ ಅಧಿಕಾರ ಹಿಡಿಯಬೇಕೆಂದು ರಾತ್ರೋರಾತ್ರಿ ನಮ್ಮ ಮಹಿಳಾ ಮೂವರು ಸದಸ್ಯರನ್ನು  ಕಿಡ್ನಾಪ್ ಮಾಡಿ ಈ ಗೊಂದಲಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಮಹಿಳಾ ಸದಸ್ಯೆಗೆ ಗರ್ಭಪಾತವಾಗಿರುವುದೆಲ್ಲಾ ಬೋಗಸ್. ಸತ್ಯಕ್ಕೆ ದೂರವಾದ ಸಂಗತಿ. ನಾವೂ  ಕೂಡ ನ್ಯಾಯಾಲಯ ಮೊರೆ ಹೋಗಿ 35 ಜನರ ವಿರುದ್ಧ ಕೇಸ್ ದಾಖಲಿಸುತ್ತೇವೆ. ಈ ಗೊಂದಲಕ್ಕೆ ಕಾಂಗ್ರೆಸ್ ನವರು ಕಾರಣ. ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತೇ ನೋಡೋಣ. ಚುನಾವಣೆ ಸಂದರ್ಭದಲ್ಲಿ  ನೂಕು ನುಗ್ಗಲು ಆಗಿದೆ. ಅಷ್ಟಕ್ಕೂ ನಾನು ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡುವ ಉದ್ದೇಶದಿಂದ ನಿಂತಿದ್ದೆ. ನೂಕುನುಗ್ಗಲು ಆಗಿರಬಹುದು. ನಾವು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಆಗ ಹೆಣ್ಮಕ್ಕಳು ಗಂಡಸರು ಅನ್ನೋದು ಎಲ್ಲಿ ಬರುತ್ತೇ ಎಂದಿದ್ದಾರೆ

Spread the love

About Laxminews 24x7

Check Also

ನಕಲಿ ದಾಖಲೆ ಸೃಷ್ಟಿ; ಹದಿನೇಳು ಮಂದಿ ವಿರುದ್ಧ ಪ್ರಕರಣ

Spread the love ಹೊಸಪೇಟೆ (ವಿಜಯನಗರ): ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ ಸರ್ಕಾರಕ್ಕೆ ವಂಚಿಸಿರುವ ದೂರಿನ ಮೇರೆಗೆ ಇಲ್ಲಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ