Breaking News
Home / Uncategorized / ಬಡ ಕುಟುಂಬಗಳಿಗೆ ಸಾಲ ವಸೂಲಿ ನೆಪದಲ್ಲಿ ಸಾಕಷ್ಟು ತೊಂದರೆ  ನೀಡುತ್ತಿರುವ   ಖಾಸಗಿ ಬ್ಯಾಂಕ್,

ಬಡ ಕುಟುಂಬಗಳಿಗೆ ಸಾಲ ವಸೂಲಿ ನೆಪದಲ್ಲಿ ಸಾಕಷ್ಟು ತೊಂದರೆ  ನೀಡುತ್ತಿರುವ   ಖಾಸಗಿ ಬ್ಯಾಂಕ್,

Spread the love

ಅಥಣಿ:  ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಜನರು ಸಂಕಷ್ಟದಲ್ಲಿದ್ದು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರಿಗೆ, ಹಾಗೂ ಬಡ ಕುಟುಂಬಗಳಿಗೆ ಸಾಲ ವಸೂಲಿ ನೆಪದಲ್ಲಿ ಸಾಕಷ್ಟು ತೊಂದರೆ  ನೀಡುತ್ತಿರುವ   ಖಾಸಗಿ ಬ್ಯಾಂಕ್, ಫೈನಾನ್ಸ್, ಹಾಗೂ ಸ್ವಸಹಾಯ ಸಂಘಗ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳುವಂತೆ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಬಳಿಕ  ಸೇರಿದ ಪದಾಧಿಕಾರಿಗಳು ಪೈನಾನ್ಸ್ ಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ  ಮನವಿ ಸಲ್ಲಿಸಿದ ಖಾಸಗಿ ಪೈನಾನ್ಸ್ ಗಳ ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದರು.

ಸಂಘಟನೆಯ ತಾಲೂಕಾಧ್ಯಕ್ಷ ಸುನೀಲ ನಾಯಿಕ ಮಾತನಾಡಿ,   ಲಾಕ್ ಡೌನ್  ಜಾರಿಯಿಂದಾಗಿ  ಕೆಲಸವಿಲ್ಲದೇ  ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಒಂದು ಹೊತ್ತಿನ  ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹದರಲ್ಲಿ   ಸರ್ಕಾರದ ಆದೇಶ ಗಾಳಿಗೆ ತೋರಿ ಪೈನಾನ್ಸ್ ಗಳು ಸಾಲ ಮರು ಪಾವತಿಸುವಂತೆ  ತಾಲೂಕಿನ ಕೆಲವು ಗ್ರಾಮಗಳಲ್ಲಿ ದಿನನಿತ್ಯ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಹ್ಲಾದ ವಾಘಮೋರೆ, ಅಡಹಳ್ಳಿಯ ಶಾಖಾ ಅಧ್ಯಕ್ಷ ಅನಿಲ ಶಿಂಗೆ, ಉಪಾಧ್ಯಕ್ಷ ಬಸರಾಜ ಮಾದರ, ಗಜಾನನ ಐಹೊಳೆ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಲೋಕಸಭಾ ಚುನಾವಣೆ: ಸಂಜೆ 5 ಗಂಟೆಯವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

Spread the loveಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಮುಗಿಯಲು ಕೆಲವೇ ಹೊತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ