Breaking News
Home / Uncategorized / ಬಿ.ಎಸ್.ಯಡಿಯೂರಪ್ಪ ಸಭಾಭವನದ ಉದ್ಘಾಟನೆ ನೆರವೇರಿಸಿದ ವಿಜಯೇಂದ್ರ

ಬಿ.ಎಸ್.ಯಡಿಯೂರಪ್ಪ ಸಭಾಭವನದ ಉದ್ಘಾಟನೆ ನೆರವೇರಿಸಿದ ವಿಜಯೇಂದ್ರ

Spread the love

ಬೆಳಗಾವಿ: ಬೆಳಗಾವಿಯ ಆಟೋನಗರದ ಗುರು ರೋಡ್ ಲೈನ್ಸ್ ಕಚೇರಿ ಆವರಣದಲ್ಲಿ ಗುರು ರೋಡ್ ಲೈನ್ಸ್ ಸಂಸ್ಥಾಪಕರಾದ ಗುರುದೇವ ಪಾಟೀಲ ಅವರ ಇಚ್ಚಾಶಕ್ತಿಯಿಂದ ನೂತನವಾಗಿ ನಿರ್ಮಿಸಲಾದ ಬಿ.ಎಸ್.ಯಡಿಯೂರಪ್ಪ ಸಭಾಭವನದ ಉದ್ಘಾಟನೆಯನ್ನು ಬಿ.ವೈ.ವಿಜಯೇಂದ್ರ ಅವರು ನೆರವೇರಿಸಿದರು.
ಉದ್ಘಾಟನಾಪರ ಮಾತನಾಡಿದ ಅವರು,”ಪಕ್ಷದ ಕಾರ್ಯಕರ್ತ, ಅಪ್ಪಟ ಅಭಿಮಾನಿಯಾದ ಗುರುದೇವ ಪಾಟೀಲ ಅವರ ಸಂಕಲ್ಪಶಕ್ತಿಯಿಂದ ತಮ್ಮ ಸ್ವಂತ ಜಾಗದಲ್ಲಿ, ಸ್ವಂತ ಖರ್ಚಿನಲ್ಲಿ ತಂದೆಯವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿದ್ದು ವೈಯಕ್ತಿಕವಾಗಿ ನನಗೆ ಅಭಿಮಾನ ತಂದಿದೆ ಎಂದರು.

ರಾಜ್ಯದಲ್ಲಿ ರಾಜಕಾರಣಿಯಾಗಿ, ರೈತನಾಯಕರಾಗಿ,ಜನಸಮೂಹದ ಹೃದಯದಲ್ಲಿ ಇಂಥ ಸ್ಥಾನ ಪಡೆದ ಗಣ್ಯರ ಸಾಲಿನಲ್ಲಿ ಜನಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪನವರು ನಿಲ್ಲುತ್ತಾರೆ. ಇಂಥ ನಿಸ್ವಾರ್ಥ ಕಾರ್ಯಕರ್ತರಿಂದಲೇ ಒಬ್ಬ ನಾಯಕ, ಒಂದು ಪಕ್ಷ ಪ್ರವರ್ಧಮಾನಕ್ಕೆ ಬರಲು ಸಾಧ್ಯ. ಹೀಗಾಗಿ ಗುರುದೇವ ಪಾಟೀಲ ಅವರಂಥ ಅಭಿಮಾನಿ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಪಕ್ಷ ಸದಾ ಮುಂದಿದೆ. ಈ ಸಭಾಭವನದಲ್ಲಿ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗುರು ರೋಡ್ ಲೈನ್ಸ್ ಸಂಸ್ಥಾಪಕ ಗುರುದೇವ ಪಾಟೀಲ, ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಎಂ.ಬಿ.ಝಿರ್ಲಿ, ಮಾಜಿ ಶಾಸಕ ವಿ.ಆಯ್.ಪಾಟೀಲ, ದೀಪಾ ಕುಡಚಿ, ಆಟೋನಗರ ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಶನ್ ಅಧ್ಯಕ್ಷ, ಸಮಾಜ ಸೇವಕ ಸುರೇಶ ಯಾದವ, ರಾಘವೇಂದ್ರ ಪಾಟೀಲ, ಸಿದಗೌಡ ಪಾಟೀಲ, ಶಿವಾಜಿ ಸುಂಟಕರ, ಮಹಾದೇವ ಪಾಟೀಲ, ವಿಲಾಸ ಕೆರೂರ, ಬಾಳು ಮೀಸಿ, ಅಭಿ ಹಾಲಭಾವಿ, ಸಿದ್ದಪ್ಪ ಗುರವ, ರಾಯಪ್ಪ ಕಾಟಾಬಳಿ ಹಾಗೂ ಪಕ್ಷದ ವಿವಿಧ ಗಣ್ಯರು ಆಗಮಿಸಿದ್ದರು. ಏಒಆಅ ಅಧ್ಯಕ್ಷ ಮುಖ್ತಾರಹುಸೆನ್ ಪಠಾಣ ಕಾರ್ಯಕ್ರಮ ನಿರ್ವಹಿಸಿದರು.


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ