Breaking News
Home / ರಾಜಕೀಯ / ಬೆಳಗಾವಿ ಜಿಲ್ಲೆಯಲ್ಲಿ 1259 ಶತಾಯುಷಿ ಮತದಾರರು

ಬೆಳಗಾವಿ ಜಿಲ್ಲೆಯಲ್ಲಿ 1259 ಶತಾಯುಷಿ ಮತದಾರರು

Spread the love

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಕುಡಚಿ ಕ್ಷೇತ್ರದಲ್ಲಿ 196 ಜನ ಶತಾಯುಷಿ ಮತದಾರರಿದ್ದರೇ, ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ 12 ಜನ ಶತಾಯುಷಿ ಮತದಾರರಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 648 ಶತಾಯುಷಿ ಮತದಾರರಿದ್ದರೆ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 569 ಜನ ಶತಾಯುಷಿ ಮತದಾರರಿದ್ದಾರೆ.

ಬೆಳಗಾವಿ, ಮಾರ್ಚ್​ 23: ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ಅತಿ ಹೆಚ್ಚು ಶತಾಯುಷಿ (Centenarian) ಮತದಾರರಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಜಿಲ್ಲೆಯಲ್ಲಿ 1,259 ಶತಾಯುಷಿ ಮತದಾರರಿದ್ದಾರೆ (Voters). ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಸುಮಾರು 40 ಲಕ್ಷ ಮತದಾರರಿದ್ದಾರೆ. ಇವರಲ್ಲಿ 1,259 ಶತಾಯುಷಿಗಳಿದ್ದಾರೆ. 100 ವರ್ಷ ಪೂರೈಸಿದ ಇಷ್ಟು ದೊಡ್ಡ ಸಂಖ್ಯೆಯ ಶತಾಯುಷಿಗಳಿಗೆ ಮತ್ತೆ ಉತ್ತಮ ಸಂಸದರನ್ನು ಆಯ್ಕೆ ಮಾಡುವ ಅವಕಾಶ ಒದಗಿ ಬಂದಿದೆ.

Lok Sabha Election 2024: ಬೆಳಗಾವಿ ಜಿಲ್ಲೆಯಲ್ಲಿ 1259 ಶತಾಯುಷಿ ಮತದಾರರು

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಕುಡಚಿ ಕ್ಷೇತ್ರದಲ್ಲಿ 196 ಜನ ಶತಾಯುಷಿ ಮತದಾರರಿದ್ದರೇ, ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ 12 ಜನ ಶತಾಯುಷಿ ಮತದಾರರಿದ್ದಾರೆ. ಬೈಲಹೊಂಗಲದಲ್ಲಿ 110 ವರ್ಷ ಮೇಲ್ಪಟ್ಟ ಮಹಿಳೆಯೊಬ್ಬರು ಮತದಾನ ಮಾಡಲಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 648 ಶತಾಯುಷಿ ಮತದಾರರಿದ್ದರೆ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 569 ಜನ ಶತಾಯುಷಿ ಮತದಾರರಿದ್ದಾರೆ. ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಇಲ್ಲಿರುವ 42 ಜನ ಶತಾಯುಷಿ ಮತದಾರರು ಬೆಳಗಾವಿ ವ್ಯಾಪ್ತಿಗೆ ಬರಲಿದ್ದಾರೆ.

ಚಿಕ್ಕೋಡಿ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತದಾರರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,41,758 ಮತದಾರರಿದ್ದಾರೆ. ಇದರಲ್ಲಿ 8,75,953 ಪುರುಷರು, 8,65,731 ಮಹಿಳೆಯರು ಮತ್ತು 74 ತೃತೀಯ ಲಿಂಗಿ ಮತದಾರರು ಇದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19,04,099 ಮತದಾರರಿದ್ದು, 9,48,282 ಪುರುಷರು, 95,57,25 ಮಹಿಳೆಯರು ಹಾಗೂ 92 ತೃತೀಯ ಲಿಂಗಿ ಮತದಾರರು ಇದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು ಎಂಬುದು ಗಮನಾರ್ಹ.

 

ಬೆಳಗಾವಿ ಜಿಲ್ಲೆಯಲ್ಲಿ 90ರಿಂದ 99 ವರ್ಷದೊಳಗಿನ 17,119 ಮತದಾರರಿದ್ದು, 80-89 ವರ್ಷದೊಳಗಿನ 80,259 ಹಾಗೂ 70-79 ವರ್ಷದೊಳಗಿನ 2,31,628 ಮತದಾರರಿದ್ದಾರೆ. ಇನ್ನು 1,07,041 ಯುವ ಮತದಾರರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದಾರೆ. ಈ ಹೊಸ ಮತದಾರರಲ್ಲಿ 58,783 ಪುರುಷರು ಮತ್ತು 48,242 ಮಹಿಳೆಯರಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅಂಚೆ ಮತಪತ್ರ ಸೌಲಭ್ಯ ಕಲ್ಪಿಸಲಾಗುವುದು. ಪಟ್ಟಿಯಲ್ಲಿ ಇಲ್ಲದ ಮತದಾರರು ಅರ್ಜಿ ಸಲ್ಲಿಸಲು ಏಪ್ರಿಲ್ 9 ರವರೆಗೆ ಅವಕಾಶವಿದೆ ಎಂದರು.


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ, ಅತ್ತ ವಿದೇಶಕ್ಕೆ ಹೋದರಾ ಸಂಸದ?

Spread the loveಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ವಿಡಿಯೋ ಪ್ರಕರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ