Breaking News
Home / ರಾಜಕೀಯ / ಫಾಲೋವರ್ಸ್ ವಿಚಾರದಲ್ಲಿ ಶಾರುಖ್​ನ ಹಿಂದಿಕ್ಕಿದ ಬಾಲ ನಟಿ

ಫಾಲೋವರ್ಸ್ ವಿಚಾರದಲ್ಲಿ ಶಾರುಖ್​ನ ಹಿಂದಿಕ್ಕಿದ ಬಾಲ ನಟಿ

Spread the love

ನ್ನತ್ ಇನ್‌ಸ್ಟಾಗ್ರಾಮ್‌ನಲ್ಲಿ ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಫಾಲೋವರ್ಸ್ ವಿಷಯದಲ್ಲಿ ಶಾರುಖ್ ಖಾನ್ ಅವರನ್ನೂ ಮೀರಿಸಿದ್ದಾರೆ. ಜನ್ನತ್ ಇನ್‌ಸ್ಟಾಗ್ರಾಮ್‌ನಲ್ಲಿ 49.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಂದರೆ 4.92 ಕೋಟಿ. ಶಾರುಖ್ 46.5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಬಾಲ ಕಲಾವಿದರಾಗಿ ಪ್ರೇಕ್ಷಕರ ಮನದಲ್ಲಿ ವಿಶೇಷ ಛಾಪು ಮೂಡಿಸಿದ ಅನೇಕರು ಇದ್ದಾರೆ. ಅವರು ಬೆಳೆದು ದೊಡ್ಡವಾರದ ಬಳಿಕ ಉದ್ಯಮಕ್ಕೆ ಮರಳಿ ಗೆದ್ದವರೂ ಅನೇಕರಿದ್ದಾರೆ. ಈ ಪಟ್ಟಿಯಲ್ಲಿ ಆಲಿಯಾ ಭಟ್‌ (Alia Bhatt) ಅವರಿಂದ ಹಿಡಿದು ಶ್ರೀದೇವಿಯವರೆಗೆ ಅನೇಕ ಕಲಾವಿದರು ಇದ್ದಾರೆ. ಜನ್ನತ್ ಜುಬೇರ್ ತಮ್ಮ ಏಳನೇ ವಯಸ್ಸಿಗೆ ಧಾರಾವಾಹಿ ಲೋಕಕ್ಕೆ ಕಾಲಿಟ್ಟರು. ಈಗ ಬೆಳೆದು ದೊಡ್ಡವರಾದ ಬಳಿಕವೂ ಅವರಿಗೆ ಬೇಡಿಕೆ ಹಾಗೆಯೇ ಇದೆ. ಈ ನಟಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಅನುಯಾಯಿಗಳ ಸಂಖ್ಯೆಯಲ್ಲಿ ಬಾಲಿವುಡ್ ಕಿಂಗ್ ಅಂದರೆಶಾರುಖ್ ಖಾನ್ಅವರನ್ನು ಮೀರಿಸಿದ್ದಾರೆ.

ಫಾಲೋವರ್ಸ್ ವಿಚಾರದಲ್ಲಿ ಶಾರುಖ್​ನ ಹಿಂದಿಕ್ಕಿದ ಬಾಲ ನಟಿ; ಇವರ ಆಸ್ತಿ 25 ಕೋಟಿ ರೂಪಾಯಿ

ಜನ್ನತ್ ಏಳನೇ ವಯಸ್ಸಿಗೆ ‘ಚಾಂದ್ ಕೆ ಪರ್ ಚಲೋ’ ಧಾರಾವಾಹಿಯ ಮೂಲಕ ಸಣ್ಣ ಪರದೆಗೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು ಜನಪ್ರಿಯ ಧಾರಾವಾಹಿ ‘ದಿಲ್ ಮಿಲ್ ಗಯೆ’ ನಲ್ಲಿ ಅತಿಥಿ ಕಲಾವಿದೆಯಾಗಿ ಕಾಣಿಸಿಕೊಂಡರು. ಈ ಸರಣಿಯು ಜನ್ನತ್‌ ಅವರ ಜನಪ್ರಿಯತೆ ಹೆಚ್ಚಿಸಿತು. ‘ಕಾಶಿ ಅಬ್ ನಾ ರಹೇ ತೇರಾ ಕಾಗಜ್ ಕೋರಾ’ ಧಾರಾವಾಹಿ ಕೂಡ ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಿದೆ. ಅದರ ನಂತರ ಅವರು ‘ಫುಲ್ವಾ’ ಧಾರಾವಾಹಿಯಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದರು. ಈ ಎರಡು ಧಾರಾವಾಹಿಗಳಿಂದಾಗಿ ಜನ್ನತ್ ಅವರ ಅದೃಷ್ಟ ಬದಲಾಯಿತು. ಬಾಲಿವುಡ್‌ನ ಹಾದಿಯೂ ಸುಗಮವಾಯಿತು. ‘ಲವ್ ಕಾ ದಿ ಎಂಡ್’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಅವರ ತಂಗಿ ಪಾತ್ರದಲ್ಲಿ ನಟಿಸಿದ್ದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ