Breaking News
Home / ರಾಜಕೀಯ / ಹಾವೇರಿ: ತೈವಾನ್​ ದೇಶದ ಪಪ್ಪಾಯಿ ಬೆಳೆದ ರೈತ.. 8 ಲಕ್ಷ ರೂ ಆದಾಯದ ನಿರೀಕ್ಷೆಯಲ್ಲಿ ಬೆಳೆಗಾರ!

ಹಾವೇರಿ: ತೈವಾನ್​ ದೇಶದ ಪಪ್ಪಾಯಿ ಬೆಳೆದ ರೈತ.. 8 ಲಕ್ಷ ರೂ ಆದಾಯದ ನಿರೀಕ್ಷೆಯಲ್ಲಿ ಬೆಳೆಗಾರ!

Spread the love

ಹಾವೇರಿ : ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಹಲವು ಬೆಳೆಗಳಲ್ಲಿ ಅಂತರಬೆಳೆ ಬೆಳೆಯುವ ಮೂಲಕ ಪ್ರಗತಿಪರ ರೈತರೊಬ್ಬರು ಕೃಷಿಯಲ್ಲಿ ಲಾಭಗಳಿಸಿಕೊಂಡಿದ್ದಾರೆ.

ಕಬ್ಬೂರು ಗ್ರಾಮದ ಪ್ರಗತಿಪರ ರೈತ ಉಮೇಶ ಸಂಗೂರು ಅವರು ಎಲ್ಲ ರೈತರಂತೆ ಒಂದೇ ಬೆಳೆಗೆ ಅಂಟಿಕೊಂಡಿಲ್ಲ. ಗ್ರಾಮದ ಸಮೀಪ ಇರುವ ಎರಡು ಎಕರೆ ಜಮೀನಿನಲ್ಲಿ ಎರಡು ವರ್ಷದ ಹಿಂದೆ ಅಡಕೆ ನೆಟ್ಟಿದ್ದಾರೆ. ಅಡಿಕೆ ಗಿಡಗಳ ನಡುವೆ ಇರುವ ಜಾಗದಲ್ಲಿ ಉಮೇಶ್​ ಈ ವರ್ಷ ಪಪ್ಪಾಯಿ ಬೆಳೆದಿದ್ದಾರೆ. ಉಮೇಶ್ ತೈವಾನ್​ ದೇಶದ ರೆಡ್ ಲೇಡಿ ಹೆಸರಿನ ಪಪ್ಪಾಯಿ ಬೆಳೆದಿದ್ದಾರೆ.

ಏಳು ಅಡಿ ಉದ್ದ 6 ಅಡಿ ಅಗಲ ಅಥವಾ ಏಳು ಅಡಿ ಉದ್ದ 8 ಅಡಿ ಅಗಲ ಅಳತೆಯಲ್ಲಿ ಉಮೇಶ್​ ಪಪ್ಪಾಯಿ ಬೆಳೆದಿದ್ದಾರೆ. ಪಪ್ಪಾಯಿ ಬೆಳೆಗೆ ಕಡಿಮೆ ಮಳೆಬೇಕು. ಕಡಿಮೆ ಮಳೆಯಾದರೆ ರೋಗಗಳ ಕಾಟ ಕಡಿಮೆ. ಅಲ್ಲದೇ ಇಳುವರಿ ಉತ್ತಮವಾಗಿ ಬರುತ್ತದೆ. ಅತಿಯಾದ ಮಳೆ ಪಪ್ಪಾಯಿಗೆ ಮಾರಕ ಎನ್ನುತ್ತಾರೆ ರೈತ ಉಮೇಶ.

ಪ್ರಸ್ತುತ ವರ್ಷ ಪಪ್ಪಾಯಿ ಕೆಜಿಗೆ 18 ರೂಪಾಯಿ ದರ ಇದೆ. ಇದು ಉತ್ತಮ ದರವಾಗಿದ್ದು ಇದೇ ರೀತಿ ದರ ಇದ್ದರೆ ಸುಮಾರು 10 ಲಕ್ಷ ರೂಪಾಯಿ ಆದಾಯ ಪಡೆಯಬಹುದು ಎಂದಿದ್ದಾರೆ. ಇವರು ಬೆಳೆದ ಪಪ್ಪಾಯಿ ದೂರ ದೂರದ ಊರುಗಳ ಕೈಗಾರಿಕೆಗಳಿಗೆ ಮತ್ತು ಸ್ಥಳೀಯ ರೈತ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ. ವ್ಯಾಪಾರಿಗಳೇ ಇವರ ಜಮೀನಿಗೆ ಬಂದು ಪಪ್ಪಾಯಿ ತೆಗೆದುಕೊಂಡು ಹೋಗುತ್ತಾರೆ. ಪಪ್ಪಾಯಿ ನೋಡಿದಂತೆ ಪಪ್ಪಾಯಿ ಬೆಳೆಯುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ಉಮೇಶ್ ಸಸಿ ನೆಟ್ಟು 8 ತಿಂಗಳಿಗೆ ಪಪ್ಪಾಯಿ ಫಸಲು ಬಿಡಲಾರಂಭಿಸಿದೆ. 10 ದಿನಕ್ಕೆ ಒಮ್ಮೆ ಪಪ್ಪಾಯಿ ಹರಿದು ಅವರು ಮಾರಾಟ ಮಾಡುತ್ತಿದ್ದಾರೆ. ಈ ವರ್ಷ ಎರಡು ಎಕರೆಯಲ್ಲಿ ಸುಮಾರು ಸಾವಿರದ ಮೂವತ್ತು ಗಿಡ ಹಚ್ಚಿದ್ದು, ಅವುಗಳಿಂದ ಈ ವರ್ಷ 50 ಟನ್ ಪಪ್ಪಾಯಿ ನಿರೀಕ್ಷೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಹಚ್ಚಿದಾಗಿನಿಂದ ಸಸಿ ಆರೈಕೆ ಮಾಡಬೇಕು. ಎರಡು ತಿಂಗಳ ನಂತರ ಅಧಿಕ ನೀರು ಬೇಕು. ಗಿಡ ದೊಡ್ಡದಾಗುತ್ತಿದ್ದಂತೆ ಗಿಡಕ್ಕೆ ಅರ್ಧ ಕೆಜಿ ಗೊಬ್ಬರ ಹಾಕಬೇಕು. ಯಾವುದೇ ರೋಗಗಳು ಬರದಂತೆ ಜಮೀನನ್ನ ಸ್ವಚ್ಚವಾಗಿಟ್ಟುಕೊಳ್ಳಬೇಕು. ಪ್ರತಿನಿತ್ಯ ಪಪ್ಪಾಯಿ ತೋಟಕ್ಕೆ ಭೇಟಿ ನೀಡಿ ಗಿಡಗಳು, ಕಾಯಿಗಳು ಗಿಡಗಳ ಬೆಳವಣಿಗೆಗಳನ್ನ ಗಮನಿಸುತ್ತಾ ಸಮರ್ಪಕ ನೀರು ಪೂರೈಕೆ ಮಾಡಿದ್ದೇ ಆದರೆ ಪಪ್ಪಾಯಿ ಫಸಲು ಬಂಪರಾಗಿ ಬರುತ್ತೆ. ಫಸಲು ಬಂಪರ್ ಬಂದರೆ ಸಾಲದು ಅದಕ್ಕೆ ಬಂಪರ್ ಬೆಲೆ ಬಂದಾಗ ಮಾತ್ರ ತಮಗೆ ಹೆಚ್ಚು ಲಾಭದಾಯಕ ಎಂದು ತಿಳಿಸಿದ್ದಾರೆ.

ಇನ್ನು ಉಮೇಶ ಕಬ್ಬೂರು ಗ್ರಾಮದಲ್ಲಿ ಪ್ರಗತಿಪರ ರೈತರಾಗಿದ್ದು, ಪಪ್ಪಾಯಿ ಜೊತೆಗೆ ಮೆಣಸಿನಕಾಯಿ, ಕಲ್ಲಂಗಡಿ, ಶೇಂಗಾ, ಹತ್ತಿ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ತಮಗೆ ತಿಳಿದ ಜ್ಞಾನವನ್ನ ಅಕ್ಕಪಕ್ಕದ ರೈತರಿಗೆ ಹಂಚುತ್ತಾರೆ. ಕಬ್ಬೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಇವರು ಸಲಹೆ ನೀಡುತ್ತಾರೆ. ಎಲ್ಲ ರೈತರು ಮಳೆ ಅವಲಂಬಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ