Breaking News
Home / ರಾಜಕೀಯ / ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸಿ ಅವಾಂತರ; ಅತಿರೇಕದ ಅಭಿಮಾನಿಗಳಿಗೆ ಸಲ್ಮಾನ್ ಖಾನ್​ ಕಿವಿ ಮಾತು

ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸಿ ಅವಾಂತರ; ಅತಿರೇಕದ ಅಭಿಮಾನಿಗಳಿಗೆ ಸಲ್ಮಾನ್ ಖಾನ್​ ಕಿವಿ ಮಾತು

Spread the love

ಮುಂಬೈ (ಮಹಾರಾಷ್ಟ್ರ): ಟೈಗರ್ 3 ಚಿತ್ರದ ವೀಕ್ಷಣೆ ವೇಳೆ ಥಿಯೇಟರ್​ಗಳಲ್ಲಿಯೇ ಪಟಾಕಿ ಸಿಡಿಸಿ ಅತಿರೇಕದ ಅಭಿಮಾನ ತೋರಿರುವ ಬಗ್ಗೆ ನಟ ಸಲ್ಮಾನ್ ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಯಾರೂ ಸಹ ಜೀವಕ್ಕೆ ಅಪಾಯವನ್ನುಂಟು ಮಾಡುವ ಇಂತಹ ಅಭಿಮಾನಕ್ಕೆ ಮುಂದಾಗಬಾರದು ಎಂದು ಅವರು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ ವಿಷಾದ ವ್ಯಕ್ತಪಡಿಸಿರುವ ಸಲ್ಮಾನ್ ಖಾನ್, “ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸಿದ ಬಗ್ಗೆ ನಾನೂ ಸಹ ಕೇಳಿದೆ. ಈ ಘಟನೆ ತುಂಬಾ ಅಪಾಯಕಾರಿ. ನಮ್ಮನ್ನು ಮತ್ತು ಇತರರನ್ನು ಅಪಾಯಕ್ಕೆ ಸಿಲುಕಿಸುವ ಇಂತಹ ಕಾರ್ಯಕ್ಕೆ ಯಾರೂ ಮುಂದಾಗಬಾರದು. ಚಿತ್ರವನ್ನು ನೋಡಿ ಆನಂದಿಸೋಣ. ಸುರಕ್ಷಿತವಾಗಿರಿ” ಎಂದು ಬರೆದಿದ್ದಾರೆ.

 

  •  

 

ಥಿಯೇಟರ್​​ನಲ್ಲಿ ಪಟಾಕಿ ಸಿಡಿಸಿ ಅವಾಂತರಕ್ಕೆ ಕಾರಣರಾದ ಕಿಡಿಗೇಡಿಗಳ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಖ್ಯಾತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಅನೇಕ ನೆಟಿಜನ್​ಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಇದು ಮಿತಿ ಮೀರಿದ ಹುಚ್ಚುತನ, ಥಿಯೇಟರ್​​ನಲ್ಲಿ ಪಟಾಕಿ ಹಚ್ಚಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

 

  •  

 

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ ‘ಟೈಗರ್ 3’ ಚಿತ್ರ ಭಾನುವಾರವಷ್ಟೇ ತೆರೆ ಕಂಡಿತು. ದೀಪಾವಳಿ ಹಬ್ಬದ ನಿಮಿತ್ತ ಹಾಗೂ ಬಹಳ ದಿನಗಳ ಬಳಿಕ ನೆಚ್ಚಿನ ನಟನ ಚಿತ್ರ ಬಿಡುಗಡೆ ಆಗಿದ್ದಕ್ಕೆ ಅಭಿಮಾನಿಗಳಲ್ಲಿ ಖುಷಿ ಇಮ್ಮಡಿಯಾಗಿದೆ. ಆದರೆ, ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿರುವ ಮೋಹನ್ ಚಿತ್ರಮಂದಿರದಲ್ಲಿ ಕೆಲವರು ಪಟಾಕಿ ಸಿಡಿಸಿ ಅವಾಂತರ ಸೃಷ್ಟಿಸಿದರು. ಸಲ್ಮಾನ್ ಖಾನ್ ಪರದೆ ಮೇಲೆ ಎಂಟ್ರಿ ಆಗುತ್ತಿದ್ದಂತೆ ರಂಗು ರಂಗಿನ ಪಟಾಕಿ ಸಿಡಿಸಿ ಹುಚ್ಚು ಅಭಿಮಾನ ಮೆರೆದರು. ಸುಮಾರು 10 ನಿಮಿಷಗಳ ಕಾಲ ಚಿತ್ತಾಕರ್ಷಕ ಪಟಾಕಿಗಳು, ರಾಕೆಟ್‌ಗಳು ಎಲ್ಲರನ್ನು ಭಯಕ್ಕೆ ತಳ್ಳಿತು. ಸಿನಿಮಾ ನೋಡುತ್ತಿದ್ದವರ ಮೇಲೆ ಇದ್ದಕ್ಕಿದ್ದಂತೆ​ ಪಟಾಕಿ ಕಿಡಿಗಳು ಬಿದ್ದಿದ್ದರಿಂದ ಜೀವಭಯದಲ್ಲಿ ಚಿತ್ರಮಂದಿರದಲ್ಲಿಯೇ ಓಡಾಡಲು ಶುರು ಮಾಡಿದರು. ಈ ವೇಳೆ, ಕಾಲ್ತುಳಿತದ ಸನ್ನಿವೇಶ ಕೂಡ ನಡೆಯಿತು. ಈ ಭೀಕರತೆಯನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಥಿಯೇಟರ್‌ನೊಳಗೆ ಪಟಾಕಿ ಸಿಡಿಸುತ್ತಿರುವ ವೈರಲ್ ವಿಡಿಯೊಗೆ ಸಂಬಂಧಿಸಿದಂತೆ ಮಾಲೆಗಾಂವ್ ಪೊಲೀಸರು ಸೋಮವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಪ್ರಕಾರ ಸೆಕ್ಷನ್ 112 ಮತ್ತು 117 ರ ಅಡಿ ಚವಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೀಷ್‌ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ಟೈಗರ್‌ 3 ಚಿತ್ರವನ್ನು ಯಶ್‌ ರಾಜ್‌ ಫಿಲಂಸ್‌ ನಿರ್ಮಾಣ ಮಾಡಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ, ರಿದ್ಧಿ ಡೋಗ್ರಾ, ಅಶುತೋಷ್ ರಾಣಾ, ರೇವತಿ, ಶಾರುಖ್ ಖಾನ್ ಸೇರಿದಂತೆ ಅನೇಕ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಡಸ್ಟ್ರಿ ಟ್ರ್ಯಾಕರ್​ ಸಾಕ್ನಿಲ್​ ಪ್ರಕಾರ, ಚಿತ್ರ ಬಿಡುಗಡೆಯಾದ ಮೊದಲ ದಿನವೇ 44.5 ಕೋಟಿ ರೂಪಾಯಿ ಗಳಿಸಿದೆ.

 

  •  

Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ