Breaking News

ಶಿವಸೇನೆ ಕಾರ್ಯಕರ್ತರನ್ನು ಗಡಿಯಲ್ಲೇ ತಡೆದು ವಾಪಸ್ ಕಳುಹಿಸಿದ ಬೆಳಗಾವಿ ಪೊಲೀಸರು

Spread the love

ಚಿಕ್ಕೋಡಿ: ರಾಜ್ಯಾದ್ಯಂತ ಇಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕುಂದಾನಗರಿ ಬೆಳಗಾವಿಯಲ್ಲಿ ಹಬ್ಬದ ವಾತಾವರಣ ಕಾಣುತ್ತಿದೆ.

ಇದರ ನಡುವೆ ಶಿವಸೇನೆಯ ಕೆಲವು ಕಾರ್ಯಕರ್ತರು ಗಡಿ ಮೂಲಕ ಬೆಳಗಾವಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡ ಕರ್ನಾಟಕ ಪೊಲೀಸರು, ಅವರನ್ನು ಮರಳಿ ಮಹಾರಾಷ್ಟ್ರಕ್ಕೆ ಕಳುಹಿಸಿದ್ದಾರೆ.

ಕೊಲ್ಲಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ ದೇವಣೆ, ಬೆಳಗಾವಿಗೆ ಆಗಮಿಸಿ ಕರಾಳ ದಿನ ಆಚರಣೆ ಮಾಡಲು ನಿನ್ನೆ (ಮಂಗಳವಾರ) ಕೊಲ್ಲಾಪುರದಲ್ಲಿ ಕರೆ ನೀಡಿದ್ದರು. ಇಂದು (ಬುಧವಾರ) ನಿಪ್ಪಾಣಿ ಮಾರ್ಗವಾಗಿ ಬೆಳಗಾವಿಗೆ ಆಗಮಿಸುತ್ತಿದ್ದಂತೆ ಕೋಗನೊಳ್ಳಿ ಚೆಕ್ ಪೋಸ್ಟ್​ನಲ್ಲಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತು ಕರ್ನಾಟಕದ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ, ನೂಕಾಟವಾಯಿತು. ಗಡಿಯಲ್ಲೇ ಕೆಲಹೊತ್ತು ಕುಳಿತ ಕಾರ್ಯಕರ್ತರು, ”ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು” ಎಂದು ಘೋಷಣೆಗಳನ್ನು ಕೂಗಿದರು.

ಉದ್ಧವ್ ಠಾಕ್ರೆ ಬಣದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸ್ ವಾಹನದಲ್ಲಿ ಹತ್ತಿಸಿಕೊಂಡ ಪೊಲೀಸರು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋದರು. ಮುನ್ನೆಚ್ಚರಿಕೆ ಕ್ರಮವಾಗಿ ನಿಪ್ಪಾಣಿ ಕುಗೋನಳ್ಳಿ ಚೆಕ್ ಪೋಸ್ಟ್​ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇತರೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿಲ್ಲ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿ ಕರ್ನಾಟಕ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ.


Spread the love

About Laxminews 24x7

Check Also

ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ:ಸತೀಶ್‌ ಜಾರಕಿಹೊಳಿ

Spread the love ಹುಕ್ಕೇರಿ: ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ