Breaking News
Home / Uncategorized / ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 65 ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 65 ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Spread the love

ಬೆಂಗಳೂರು, ನ.7- ಕನ್ನಡ ಭಾಷೆ ಹೆತ್ತ ತಾಯಿಗೆ ಸಮ. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಪುನರುಚ್ಚರಿಸಿದ್ದಾರೆ. ಹೆತ್ತ ತಾಯಿಗೆ ಏನೆಲ್ಲಾ ಸಲ್ಲಬೇಕೋ ಅದು ನಮ್ಮ ಭಾಷೆ ಹಾಗೂ ಹುಟ್ಟಿದ ಊರಿಗೂ ಸಲ್ಲಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ. ಈ ಬಗ್ಗೆ ಯಾರಿಗೂ ಯಾವ ರೀತಿಯ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ರವೀಂದ್ರಕಲಾಕ್ಷೇತ್ರದಲ್ಲಿ ನಡೆದ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೇ ಕನ್ನಡವನ್ನು ಬೆಳೆಸಲು ಸಾಧ್ಯವಾಗದಿದ್ದರೆ ಇನ್ನು ಎಲ್ಲಿಯೂ ಬೆಳೆಸಲಾಗದು. ಕನ್ನಡದ ಕೆಲಸಕ್ಕಾಗಿ ಈ ರಾಜ್ಯದ ಏಳ್ಗೆಗಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು. ಕನ್ನಡ ನಾಡು, ನುಡಿ, ಸಂಸ್ಕøತಿ ನಮ್ಮ ಆಸ್ಮಿತೆಯಾಗಿದೆ. ಕನ್ನಡ ಭಾಷೆಗಾಗಿ ಕನ್ನಡ ಕಾಯಕ ವರ್ಷ ಆಚರಿಸಲಾಗುತ್ತಿದೆ ಎಂದರು.

ಕನ್ನಡದ ಸಾಮಥ್ರ್ಯ, ಅದರ ಶಕ್ತಿ, ಅದರ ಓಝಸ್ಸು ಜಗತ್ತಿನ ಇನ್ಯಾವ ಭಾಷೆಗೂ ಕಡಿಮೆ ಇಲ್ಲ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಕನ್ನಡ ನಮ್ಮ ಹೃದಯ ಭಾಷೆ. ಇದನ್ನು ನಾವು ಪ್ರೋತ್ಸಾಹಿಸುವ ಕೆಲಸ ಮಾಡಿದರೆ ನಮಗೆ ಎಂದೆಂದೂ ಒಳ್ಳೆಯದಾಗುತ್ತದೆ ಎಂದು ಆಶಿಸಿದರು.

ಕನ್ನಡದ ನಾಡು, ನುಡಿ, ಸಂಸ್ಕøತಿ, ಭಾಷೆ, ಜಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಸಂತಸದವಿಷಯ. ಎಲೆಮರೆಕಾಯಿಯಂತಿದ್ದವರನ್ನು ಶೋಧಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಮ್ಮ ನಡೆ, ನುಡಿ ಸದಾ ಕನ್ನಡವಾಗಿರಬೇಕ್ನು ಎಂದು ಹೇಳಿ ಪ್ರಶಸ್ತಿ ಪುರಸ್ಕøತರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ವೇಳೆ ಸದಾ ಒಂದಿಲ್ಲೊಂದು ವಿವಾದವಾಗುತ್ತಲೇ ಇತ್ತು. ಈ ಬಾರಿ ಒಂದೇ ಒಂದು ಸಣ್ಣ ವಿವಾದಕ್ಕೂ ಆಸ್ಪದ ನೀಡದಂತೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ನ.1ರ ಕನ್ನಡ ರಾಜ್ಯೋತ್ಸವದಂದೇ ಈ ಪ್ರಶಸ್ತಿ ವಿತರಣೆ ಮಾಡಬೇಕಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಪ್ರಶಸ್ತಿ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದಿಗೆ ದಿನಾಂಕ ನಿಗದಿ ಮಾಡಲಾಯಿತು ಎಂದರು. ಕರ್ನಾಟಕ ಶ್ರೀಗಂಧದ ಬೀಡು. ಶ್ರೀಮಂತ ಹಿರಿಮೆ ನಮ್ಮ ರಾಜ್ಯ. ಎಲ್ಲಾ ಹಂತದಲ್ಲೂ ಹಿರಿಮೆ, ಗರಿಮೆ ಹೊಂದಿರುವ ರಾಜ್ಯ ಕರುನಾಡು ಎಂದು ಬಣ್ಣಿಸಿದರು.

ಸಾಧಕರನ್ನು ಆಯ್ಕೆ ಮಾಡಬೇಕು ಎಂದರೆ ಅಸಂಖ್ಯ ಮುತ್ತುಗಳನ್ನು ಹೆಕ್ಕಿ ತೆಗೆದಂತೆ. ನಮ್ಮ ಜತೆ ಸಾಕಷ್ಟು ಮುತ್ತುಗಳಿವೆ. ಆದರೆ, 65 ಮುತ್ತುಗಳನ್ನು ಮಾತ್ರ ಆಯ್ಕೆ ಮಾಡಬೇಕಿತ್ತು. ಹೀಗಾಗಿ ಅಷ್ಟೇ ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಸಚಿವ ಸಂಪುಟ ವಿಸ್ತರಣೆಯಾದ ಮೇಲೆ ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಭಾಯಿಸುವಂತೆ ಸೂಚನೆ ನೀಡಿದರು.

ಈ ವೇಳೆ ಕೆಲವರು ಸಿ.ಟಿ.ರವಿ ನಿನಗೆ ಬೇರೆ ಖಾತೆ ಕೊಡಬೇಕಿತ್ತು ಎಂದಿದ್ದರು. ಪ್ರಾರಂಭದಲ್ಲಿ ನನಗೂ ಕೂಡ ಈ ಖಾತೆ ನಿಭಾಯಿಸುವುದು ಹೇಗೆ ಎಂಬ ಸಣ್ಣದೊಂದು ಆತಂಕವಿತ್ತು. ಆದರೆ, ಬರಬರುತ್ತಾ ಈ ಇಲಾಖೆ ಸಾಕಷ್ಟು ಮತ್ತೇರೆಸಿತು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಒಂದು ವರ್ಷದ ಅವಧಿಯಲ್ಲಿ ನನಗೆ ಇಲಾಖೆ ಸಾಕಷ್ಟು ತೃಪ್ತಿ ತಂದಿದೆ. ಇನ್ನು ಸುಧಾರಣೆಯನ್ನು ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಆದರೆ, ಪಕ್ಷ ನನಗೆ ಹೊಸ ಜವಾಬ್ದಾರಿ ವಹಿಸಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಬಂದಿತು ಎಂದು ವಿಷಾದಿಸಿದರು. ಮುಖ್ಯಮಂತ್ರಿಗಳು ಇಂದೂ ಕೂಡ ನನ್ನ ರಾಜೀನಾಮೆ ಪತ್ರವನ್ನು ಅಂಗೀಕಾರ ಮಾಡಿಲ್ಲ. ಈಗ ನನ್ನನ್ನು ಇಲಾಖೆಯಿಂದ ಯಾವುದೇ ಸಂದರ್ಭದಲ್ಲೂ ಬಿಡುಗಡೆ ಮಾಡಬಹುದು. ಮುಂದೆ ಈ ಇಲಾಖೆಗೆ ಬರುವ ಮಂತ್ರಿಗಳು ಚೆನ್ನಾಗಿ ಕೆಲಸ ಮಾಡಲಿ ಎಂದು ಸಿ.ಟಿ.ರವಿ ಆಶಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 65 ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ತೇಜಸ್ವಿಸೂರ್ಯ, ಶಾಸಕ ಉದಯ್ ಗರುಡಾಚಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ನಿದೆರ್ಶಕ ರಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

‘SIT’ ಮುಂದೆ ಶರಣಾಗಲಿದ್ದಾರೆ ‘ಪ್ರಜ್ವಲ್ ರೇವಣ್ಣ’!

Spread the love‘SIT’ ಮುಂದೆ ಶರಣಾಗಲಿದ್ದಾರೆ ‘ಪ್ರಜ್ವಲ್ ರೇವಣ್ಣ’! ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ