Breaking News
Home / ಜಿಲ್ಲೆ / ಬೆಳಗಾವಿ / ಶಾಸಕ ಅಭಯ್ ಪಾಟೀಲ್​ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ.

ಶಾಸಕ ಅಭಯ್ ಪಾಟೀಲ್​ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ.

Spread the love

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ಆಸ್ತಿ ತೆರಿಗೆ ಹೆಚ್ಚಳ ನಿರ್ಣಯದ ದಿನಾಂಕ ತಿದ್ದಿದ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬುಧವಾರ ಬಿಜೆಪಿ ಶಾಸಕ ಅಭಯ್ ಪಾಟೀಲ್ ದಲಿತ ಅಧಿಕಾರಿಗಳ ಮೇಲೆ ವೈಯಕ್ತಿಕ ಹಗೆತನ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

 

ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್ ನಗರಸಭೆ ಸದಸ್ಯರು, ವಿವಿಧ ದಲಿತ ಸಂಘಟನೆಗಳು ಹಾಗೂ ಸಚಿವ ಸತೀಶ್​ ಜಾರಕಿಹೊಳಿ ಅವರ ಬೆಂಬಲಿಗರು, ಅಭಯ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮಟೆ, ಜಾಂಝ್ ವಾದ್ಯಗಳ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾದರು.

ಪಾಲಿಕೆಯಲ್ಲಿ 2023-24ರ ಆಸ್ತಿ ಕರ ಹೆಚ್ಚಳ ಮಾಡುವಂತೆ ಮೇಯರ್ ಶೋಭಾ ಸೋಮನಾಚೆ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, 2023-24ರ ಆಸ್ತಿ ಕರ ಹೆಚ್ಚಳದ ಪ್ರತಿ ಕಳಿಸಬೇಕಿದ್ದ ಅಧಿಕಾರಿಗಳು, ಲೋಪ ದೋಷ ಮಾಡಿ 2024-25 ಎಂದು ತಿದ್ದುಪಡಿ ಮಾಡಿ ಸರ್ಕಾರಕ್ಕೆ ಕಳಿಸಿದ್ದರು. ಇದನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಆಡಳಿತಾರೂಢ ಬಿಜೆಪಿ ಸದಸ್ಯರು, ಲೋಪದೋಷ ಮಾಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ, ಕರ್ನಾಟಕ ಲೋಕಸೇವಾ ಆಯೋಗ, ಡಿಪಿಎಆರ್, ಡಿಒಪಿಟಿಗೆ ನಿರ್ಣಯ ಕೈಗೊಳ್ಳಲು ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಸತೀಶ್​ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ದೂರು: ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿಯವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು, ಸಚಿವರ ಹಸ್ತಕ್ಷೇಪದಿಂದ ನಮಗೆ ಆಡಳಿತ ಮಾಡಲು ಆಗುತ್ತಿಲ್ಲ. ನಮಗೆ ನಿಮ್ಮ ಸಮಯ ನೀಡಿ ದಿನಾಂಕ ಕೊಡಿ ಎಂದು ಮನವಿ ಪತ್ರ ಬರೆದಿದ್ದಾರೆ.

ಪ್ರತಿಭಟನೆ ನಂತರ ಪಾಲಿಕೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ‌ ಅವರು ಪ್ರತಿಭಟನಾನಿರತ ಕಾಂಗ್ರೆಸ್ ನಗರ ಸೇವಕರು, ಸಂಘಟನೆಗಳ ಕಾರ್ಯಕರ್ತರ ಜೊತೆಗೆ ಮಹತ್ವದ ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಸಭೆಯಲ್ಲಿ ಒಂದೇ ನಿರ್ಣಯ ಪಾಸ್ ಆಗಿದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಚೇರಿಗಳಾದ ಯುಪಿಎಸ್​ಸಿ, ಟಿಒಪಿಸಿಗೆ ಪತ್ರ ಬರೆಯಲಿಕ್ಕೆ ಭ್ರಷ್ಟಾಚಾರ, ಯಾವುದೇ ಗಂಭೀರ ಆರೋಪದ ನಿರ್ಣಯ ಅಲ್ಲ. ಕೇವಲ ವರ್ಷ ಬದಲಾವಣೆ ಆದ ವಿಷಯ ಸಭೆಯಲ್ಲಿ ಚರ್ಚೆ ಆಗಿದೆ.

ರಾಜ್ಯ ಸರ್ಕಾರಕ್ಕೆ ಪತ್ರ ಬರೆಯೋದು ಬಿಟ್ಟು, ಕೇಂದ್ರದ ಏಜೆನ್ಸಿಗಳಿಗೆ ಪತ್ರ ಬರೆದು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅಭಯ್ ಪಾಟೀಲ್ ದುರುದ್ದೇಶದಿಂದ ತೊಂದರೆ ಆಗುತ್ತಿದೆ ಎಂದು ಇಂದು ಪ್ರತಿಭಟನೆ ಆಗಿದೆ. ದಾಖಲೆಗಳಲ್ಲಿ ಮೇಯರ್ ಸೈನ್ ಮಾಡಿದ್ದಾರೆ. ಮೇಯರ್ ಸಹಿ ಮಾಡಿದ ನಂತರವೇ ಆಯುಕ್ತರು ಸರ್ಕಾರಕ್ಕೆ ಕಳಿಸಿದ್ದಾರೆ. ಮೇಯರ್ ಹಿಂದೆ ಅಭಯ್ ಪಾಟೀಲ್ ಇದ್ದಾರೆ. ಹಾಗಾಗಿ ನಾವೂ ಕೂಡ ಎಣಿಸಿಯೇ ಹೆಜ್ಜೆ ಇಡಬೇಕಾಗುತ್ತದೆ ಎಂದರು.

ಇನ್ನು ನಾವೂ ಕೂಡ ಶಾಸಕರು, ವಿರೋಧ ಪಕ್ಷದ ಸದಸ್ಯರು, ಮೇಯರ್ ಬಂದಾಗ ಪ್ರತಿಭಟನೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಮೇಯರ್ ಅವರು ಮನೆಗೆ ಕಡತ ಒಯ್ದಿದ್ದಕ್ಕೆ ಪ್ರತಿಭಟನೆ ಮಾಡುತ್ತೇವೆ. ಅಭಯ್ ಪಾಟೀಲ್ ಮನೆ ಮುಂದೆಯೂ ಸಹ ಸದಸ್ಯರು ಪ್ರತಿಭಟನೆ ಮಾಡುತ್ತಾರೆ. ಪಾಲಿಕೆ ಆದೇಶ ಇಲ್ಲದೆ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ಇದರ ಮೇಲೂ ಸಹ ನಿರ್ಣಯ ಮಾಡಿದ್ದೇವೆ ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ