Home / ರಾಜಕೀಯ / ಮಹಿಳೆಗೆ ಯಾವುದೇ ಜವಾಬ್ದಾರಿ ನೀಡಿದರೂ ಆಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ವಿಶ್ವಾಸದ್ರೋಹವನ್ನು ಸ್ತ್ರೀಕುಲ ಎಂದೂ ಮಾಡುವುದಿಲ್ಲ.: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮಹಿಳೆಗೆ ಯಾವುದೇ ಜವಾಬ್ದಾರಿ ನೀಡಿದರೂ ಆಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ವಿಶ್ವಾಸದ್ರೋಹವನ್ನು ಸ್ತ್ರೀಕುಲ ಎಂದೂ ಮಾಡುವುದಿಲ್ಲ.: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love

ಬೆಳಗಾವಿ: ಮಹಿಳೆಗೆ ಯಾವುದೇ ಜವಾಬ್ದಾರಿ ನೀಡಿದರೂ ಆಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ವಿಶ್ವಾಸದ್ರೋಹವನ್ನು ಸ್ತ್ರೀಕುಲ ಎಂದೂ ಮಾಡುವುದಿಲ್ಲ.

ಆದರೆ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವ ಅಪವಾದವಿದೆ. ತೊಡೆದು ಹಾಕಲು ನಾವೆಲ್ಲ ಒಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕಿತ್ತೂರು ಉತ್ಸವದಲ್ಲಿ ಬುಧವಾರ ರಾಜ್ಯಮಟ್ಟದ ಮಹಿಳಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಚಂದ್ರಯಾನ ಸೇರಿದಂತೆ ಪ್ರತಿಯೊಂದು ಸಾಧನೆಯಲ್ಲೂ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು. ಈಗ ರಾಜಕೀಯದಲ್ಲಿಯೂ ಶೇ.33ರಷ್ಟು ಮೀಸಲಾತಿ ಘೋಷಣೆಯಾಗಿದೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ದೇವರಂತೆ ಕಷ್ಟದಲ್ಲಿರುವವರ ಸಹಾಯಕ್ಕೆ ಬಂದಿದ್ದರು ಎಂದು ಸ್ಮರಿಸಿದರು.

ರಾಣಿ ಚನ್ನಮ್ಮ ಇಡೀ ಮಹಿಳಾ ಕುಲಕ್ಕೆ ಸ್ವಾಭಿಮಾನ, ಹೋರಾಟದ ಕಿಚ್ಚು ಹಾಗೂ ಜೀವನ ಸ್ಫೂರ್ತಿಯ ಸಂಕೇತ. ನಾನು ಮೊದಲಿನಿಂದಲೂ ಚನ್ನಮ್ಮನ ಆದರ್ಶವನ್ನು ಮೈಗೂಡಿಸಿಕೊಂಡು ನಡೆಯಲು ಪ್ರಯತ್ನಿಸುತ್ತಿದ್ದೇನೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಕುಟುಂಬ, ಮಕ್ಕಳ ವಿದ್ಯಾಭ್ಯಾಸಗಳಿಗಾಗಿ ದಿನವಿಡೀ ಹೋರಾಡುವುದನ್ನು ಹತ್ತಿರದಿಂದ ಕಣ್ಣಾರೆ ಕಂಡಿದ್ದೇನೆ ಎಂದರು.

ಹಿರಿಯ ಪತ್ರಕರ್ತೆ, ರಾಜ್ಯ ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಸದಸ್ಯೆ ರೋಹಿಣಿ ಪಾಟೀಲ ಆಶಯ ನುಡಿಗಳನ್ನಾಡಿದರು. ಬೈಲಹೊಂಗಲ ಎ.ಸಿ.ಪ್ರಭಾವತಿ ಫಕೀರಪುರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚನ್ನಮ್ಮನ ಹಾಗೂ ಜೀವನ ಹೋರಾಟದ ರೂಪಕವಾಗಿ ಮಹಿಳಾ ವಿಷಯ ಕುರಿತು ಡಾ.ಮಾನಸಾ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮಹಿಳಾ ಸಬಲೀಕರಣ ವಿಷಯದ ಕುರಿತಾಗಿ ಡಾ.ಸುಜಾತಾ ಕೊಂಬಳಿ, ಕಿತ್ತೂರು ಸಂಸ್ಥಾನ ಹಾಗೂ ರಾಣಿ ಚನ್ನಮ್ಮ ವಿಷಯವಾಗಿ ಡಾ.ಸಾವಿತ್ರಿ ಕಮಲಾಪುರ, ಸ್ವಾಭಿಮಾನದ ಹೆಗ್ಗುರುತಾಗಿ ರಾಣಿ ಚನ್ನಮ್ಮ ವಿಷಯದ ಕುರಿತಾಗಿ ಡಾ.ಸಂಗೀತಾ ಕುಸುಗಲ್, ಚನ್ನಮ್ಮ ಹಾಗೂ ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಜಯಶ್ರೀ ಚುನಮರಿ, ಕಿತ್ತೂರು ಅಂದು- ಇಂದು ವಿಷಯವಾಗಿ ಭಾರತಿ ಮದಭಾವಿ, ರಾಣಿ ಚನ್ನಮ್ಮಳ ಆಡಳಿತ ಹಾಗೂ ಮಮತಾಮಯಿ ವಿಷಯವಾಗಿ ಸ್ವಾತಿ ರಾವ್, ರಾಣಿ ಚನ್ನಮ್ಮ ಹಾಗೂ ಬ್ರಿಟಿಷರು ವಿಷಯವಾಗಿ ಮೀನಾಕ್ಷಿ ದೀಪಕ್, ಕಿತ್ತೂರು ಚನ್ನಮನ ಆಡಳಿತದ ವೈಜ್ಞಾನಿಕ ದೃಷ್ಟಿಕೋನ ವಿಷಯವಾಗಿ ಭಾರತಿ ಮಠದ್ ಮಾತನಾಡಿದರು.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ