Breaking News
Home / Uncategorized / ವಿಶ್ವಕಪ್​ನಲ್ಲಿ ಎರಡನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದ ಮೊಹಮ್ಮದ್​ ಶಮಿ

ವಿಶ್ವಕಪ್​ನಲ್ಲಿ ಎರಡನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದ ಮೊಹಮ್ಮದ್​ ಶಮಿ

Spread the love

 

 

ರ್ಮಶಾಲಾ ಮೈದಾನದಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್​ ಶಮಿ ಐದು ವಿಕೆಟ್​ ಕಿತ್ತರು.

ಧರ್ಮಶಾಲಾ (ಹಿಮಾಚಲ ಪ್ರದೇಶ): 2023ರ ವಿಶ್ವಕಪ್​ನಲ್ಲಿ ಭಾರತ ತಂಡ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈಗಾಗಲೇ ನಡೆದ ಪಂದ್ಯಗಳಲ್ಲಿ ಎದುರಾಳಿ ತಂಡವನ್ನು 300 ರನ್‌ಗಳ ಗಡಿ ದಾಟದಂತೆ ನಿಯಂತ್ರಿಸಿದೆ.

ಅಲ್ಲದೇ ಯಾವುದೇ ತಂಡದ ಬ್ಯಾಟರ್​ಗಳೂ ಶತಕ ದಾಖಲಿಸಿರಲಿಲ್ಲ. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಡೇರಿಲ್ ಮಿಚೆಲ್ ಶತಕ ದಾಖಲಿಸುವ ಮೂಲಕ ಈ ರೆಕಾರ್ಡ್​ ಬ್ರೇಕ್​ ಮಾಡಿದರು. ಆದರೆ ಅವರ ಶತಕದಾಟದ ಹೊರತಾಗಿಯೂ ತಂಡ 273 ರನ್‌ಗಳಿಗೆ ಸರ್ವಪತನ ಕಂಡಿತು. ಡೆತ್​ ಓವರ್​ಗಳಲ್ಲಿ ಶಮಿ ವಿಕೆಟ್‌ಗಳನ್ನು ಉರುಳಿಸಿ ಆಲ್​ಔಟ್​ ಮಾಡಿದರು.

 

 

ವಿಶ್ವಕಪ್​ನಲ್ಲಿ ಎರಡನೇ 5 ವಿಕೆಟ್​ ಸಾಧನೆ: ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಶಮಿ 10 ಓವರ್​ ಮಾಡಿ 54 ರನ್​ ಬಿಟ್ಟುಕೊಟ್ಟು 5 ವಿಕೆಟ್​ ಕಬಳಿಸಿದರು. ಇದರಿಂದ ವಿಶ್ವಕಪ್​ನಲ್ಲಿ ಎರಡನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದರು. ವಿಶ್ವಕಪ್​ನಲ್ಲಿ 5 ವಿಕೆಟ್​ ಪಡೆದ ಭಾರತೀಯರಲ್ಲಿ ಇವರೇ ಮೊದಲಿಗ. ಕಪಿಲ್​ ದೇವ್​, ವೆಂಕಟೇಶ್​ ಪ್ರಸಾದ್​, ರಾಬಿನ್​ ಸಿಂಗ್​​, ಆಶಿಶ್​ ನೆಹ್ರಾ ಮತ್ತು ಯುವರಾಜ್​ ಸಿಂಗ್​ ಒಂದು ಬಾರಿ ಪಂಚ ವಿಕೆಟ್​ ಪಡೆದ ಭಾರತೀಯ ಬೌಲರ್​ಗಳಾಗಿದ್ದಾರೆ.

ಶಮಿ ಇದರೊಂದಿಗೆ ವಿಶ್ವಕಪ್​ನಲ್ಲಿ 5 ಬಾರಿ ನಾಲ್ಕಕ್ಕೂ ಹೆಚ್ಚು ವಿಕೆಟ್​ ಪಡೆದ ಸಾಧನೆ ಮಾಡಿದರು. ಈ ಸಾಧನೆಗೈದ ಭಾರತದ ಮೊದಲ ಬೌಲರ್​ ಎಂಬ ಖ್ಯಾತಿಗೂ ಪಾತ್ರರಾದರು. ಅಲ್ಲದೇ ವಿಶ್ವ ಮಟ್ಟದಲ್ಲಿ ಮಿಚೆಲ್​ ಸ್ಟಾರ್ಕ್​ 6 ಬಾರಿ 4ಕ್ಕೂ ಹೆಚ್ಚು ವಿಕೆಟ್​ ಪಡೆದಿದ್ದರೆ, ಇಮ್ರಾನ್​ ತಾಹಿರ್​ ಹಾಗೂ ಶಮಿ 5 ಸಲ ಈ ಸಾಧನೆ ಮಾಡಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.

 

 

ವಿಶ್ವಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್​ ಪಡೆದ ಎರಡನೇ ಬೌಲರ್​ ಶಮಿ. ಜಹೀರ್​ ಖಾನ್​ ಮತ್ತು ಜಾವಗಲ್​ ಶ್ರೀನಾಥ್​ 44 ವಿಕೆಟ್​ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶಮಿ 36 ವಿಕೆಟ್​ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅನಿಲ್​ ಕುಂಬ್ಳೆ (31), ಜಸ್ಪ್ರೀತ್​ ಬುಮ್ರಾ (29) ಹಾಗು ಕಪಿಲ್​ ದೇವ್​ (28) ಇದ್ದಾರೆ.


Spread the love

About Laxminews 24x7

Check Also

ನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ!

Spread the loveನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ