Breaking News
Home / ಅಂತರಾಷ್ಟ್ರೀಯ / ನಾನೇ ಅಮೆರಿಕಾದ ಮುಂದಿನ ಅಧ್ಯಕ್ಷ, ಕಮಲಾ ಉಪಾಧ್ಯೆಕ್ಷೆ : ಬಿಡೆನ್‍ ಘೋಷಣೆ

ನಾನೇ ಅಮೆರಿಕಾದ ಮುಂದಿನ ಅಧ್ಯಕ್ಷ, ಕಮಲಾ ಉಪಾಧ್ಯೆಕ್ಷೆ : ಬಿಡೆನ್‍ ಘೋಷಣೆ

Spread the love

ವಾಷಿಂಗ್ಟನ್/ನ್ಯೂಯಾರ್ಕ್,ನ.6- ನಾನು ಮತ್ತು ಕಮಲಾ ಹ್ಯಾರಿಸ್ ವಿಜೇತರಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಹುದ್ದೆಗಳನ್ನು ಅಲಂಕರಿಸುವುದಾಗಿ ಮಾಜಿ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಗದ್ದುಗೆ ಏರುವ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಧುರೀಣ ಜೋ ಬಿಡೆನ್ ಹೇಳಿದ್ದಾರೆ.

ತಮ್ಮ ತವರು ರಾಜ್ಯ ಡೆಲವೇರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ಅಧಿಕೃತ ಫಲಿತಾಂಶ ಪ್ರಕಟವಾಗುವ ತನಕ ಜನರು ತಾಳ್ಮೆಯಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ.

ಈ ಮಧ್ಯೆ, ಚುನಾವಣೆಗಳಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಟ್ರಂಪ್ ದೊಡ್ಡ ಮಟ್ಟದ ಕಾನೂನು ಸಮರ ಆರಂಭಿಸಿದ್ದರೂ ಕೆಲವು ರಾಜ್ಯಗಳಲ್ಲಿ ಮರುಚುನಾವಣೆ ನಡೆಸುವ ಸಾಧ್ಯತೆಗಳು ಕ್ಷೀಣಿಸಿದೆ. ಹೀಗಾಗಿ ಜೋ ಬಿಡೆನ್ ವೈಟ್‍ಹೌಸ್ ಹಾದಿ ಮತ್ತಷ್ಟು ಸುಗಮವಾಗಿದೆ.

ಇಡೀ ವಿಶ್ವದಾದ್ಯಂತ ಭಾರೀಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅಂತಿಮ ಘಟ್ಟತಲುಪಿದ್ದು, ಅಧ್ಯಕ್ಷ ಗದ್ದುಗೇರಲು ಮಾಜಿ ಉಪಾಧ್ಯಕ್ಷ ಮತ್ತುಡೆ ಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಸಜ್ಜಾಗಿದ್ದಾರೆ. ಇದೇ ವೇಳೆ ಭಾರತೀಯ ಮೂಲದ ಸೆನೆಟರ್ ಮತ್ತು ಪ್ರಭಾವಿ ನಾಯಕಿ ಕಮಲಾ ಹ್ಯಾರಿಸ್ ಅವರೂ ಕೂಡ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಲಿದ್ದಾರೆ.

ಕಮಲಾ ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಮಣಿಸಿ ಉಪಾಧ್ಯಕ್ಷ ಗದ್ದುಗೇ ಏರಲು ಸನ್ನದ್ಧರಾಗಿದ್ದಾರೆ. ಮತಗಳ ಎಣಿಕೆ ಆರಂಭದಿಂದಲೂ ಬಿಡೆನ್‍ಗೆತಿ ೀವ್ರ ಪೈಪೋಟಿ ನೀಡುತ್ತಿದ್ದ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಉಮೇದುವಾರ ಡೊನಾಲ್ಡ್ ಟ್ರಂಪ್ ಗೆಲುವಿನ ಅಸೆ ಕಮರಿ ಹೋಗಿದೆ.

ಅನೇಕ ರಾಜ್ಯಗಳಲ್ಲಿ ಬಿಡೆನ್ ಮತ್ತುಅವರ ಬೆಂಬಲಿಗರುಚುನಾವಣಾ ಅಕ್ರಮಗಳನ್ನು ನಡೆಸಿದ್ಧಾರೆ ಎಂದು ಆರೋಪಿಸಿರುವ ಟ್ರಂಪ್ ಕಾನೂನು ಸಮರ ಆರಂಭಿಸಿದ್ದರೂ ಮಿಚಿಗನ್ ಮತ್ತು ಜಾರ್ಜಿಯಾ ರಾಜ್ಯಗಳ ನ್ಯಾಯಾಲಯಗಳು ಅವರ ಮನವಿಗಳನ್ನು ವಜಾಗೊಳಿಸಿದೆ.

ಹೈವೋಲೇಜ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, 538 ಎಲೆಕ್ಟ್ರೋಲ್‍ಕಾಲೇಜ್ ವೋಟ್‍ಗಳಲ್ಲಿ (ಪ್ರತಿನಿಧಿಗಳ ಮತ) ಬಿಡೆನ್ ಮ್ಯಾಜಿಕ್ 270 ಸಂಖ್ಯೆಗೆತೀರಾ ಸನಿಹದಲ್ಲಿದ್ದಾರೆ. ಅವರು 264 ಪ್ರಾತಿನಿಧಿಕ ಮತಗಳನ್ನು ಗಳಿಸಿದ್ದು, ಶ್ವೇತಭವನದ ಕುರ್ಚಿಗೇರಲು ಅವರಿಗೆ ಕೇವಲ 6 ಸಂಖ್ಯೆಗಳ ಕೊರತೆ ಇತ್ತು. ಆದರೆ ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋಲ್ ಕಾಲೇಜ್ ಮತಗಳನ್ನು ಗಳಿಸಿದ್ದು, ಅವರ ಗೆಲುವಿನ ಮಹತ್ವಾಕಾಂಕ್ಷೆ ನುಚ್ಚುನೂರಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಅಧಿಕೃತವಾಗಿ ಪ್ರಕಟಗೊಳ್ಳಬೇಕಿದೆ. ಮತಗಳ ಎಣಿಕೆ ಆರಂಭದಿಂದಲೂ ಬಿಡೆನ್, ಅಧ್ಯಕ್ಷ-ರಿಪಬ್ಲಿಕ್ ಪಕ್ಷದ ಉಮೇದುವಾರ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, 23.9 ಕೋಟಿ ಅಮೆರಿಕನ್ನರು ಮತದಾನದ ಹಕ್ಕುಗಳನ್ನು ಹೊಂದಿದ್ದರು. ಆರಂಭದಲ್ಲೇ 16 ಕೋಟಿ ಮಂದಿ ಮತ ಚಲಾಯಿಸಿರುವುದು ಹೊಸ ದಾಖಲೆಯಾಗಿದೆ.

ಭಾರೀ ಸಂಖ್ಯೆಯಲ್ಲಿ ಮತದಾನವಾಗಿರುವುದರಿಂದ ಫಲಿತಾಂಶ ನಿರೀಕ್ಷೆಗೂ ಮೀರಿ ವಿಳಂಬವಾಗಿದೆ. ಡೊನಾಲ್ಡ್ ಟ್ರಂಪ್ ಕಾನೂನು ಸಮರ ಮತ್ತು ಹಿಂಸಾಚಾರ ಸಾಧ್ಯತೆ ಹಿನ್ನಲೆಯಲ್ಲಿ ಅಧಿಕೃತ ಚುನಾವಣಾ ಫಲಿತಾಂಶವೂ ಸಹ ತಡವಾಗಿದೆ


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ