Breaking News
Home / ಜಿಲ್ಲೆ / ಬೆಂಗಳೂರು / ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.‌ ಧ್ರುವ ನಾರಾಯಣ (60) ಹೃದಯಾಘಾತದಿಂದನಿಧನ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.‌ ಧ್ರುವ ನಾರಾಯಣ (60) ಹೃದಯಾಘಾತದಿಂದನಿಧನ

Spread the love

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.‌ ಧ್ರುವ ನಾರಾಯಣ (60) ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.

ನಗದಲ್ಲಿನ ಅವರ ಮನೆಯಲ್ಲಿ ಶುಕ್ರವಾರ ತಡರಾತ್ರಿಯಲ್ಲಿ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.

 

1983 ರಲ್ಲಿ ಕಾಂಗ್ರೆಸ್‌ ಸೇರುವ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದ ಅವರು, ಸಂತೇಮರಹಳ್ಳಿ ಕ್ಷೇತ್ರದಿಂದ ಒಂದು ಶಾಸಕರಾಗಿ ಆಯ್ಕೆಯಾಗಿದ್ದರು. 2004 ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 1 ಮತದ ಅಂತರದಿಂದ ಗೆದ್ದಿದ್ದರು. 2008 ರಲ್ಲಿ ಎರಡನೇ ಬಾರಿ ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಚಾಮರಾಜನಗರ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಸಿದ್ದರಾಮಯ್ಯ ನಂತರ ಮೈಸೂರಿನ ಪ್ರಭಾವಿ ನಾಯಕರು ಎಂದರೆ ಅದು ಆರ್.‌ಧ್ರುವ ನಾರಾಯಣರಾಗಿದ್ದರು. ಶ್ರಿನಿವಾಸ್‌ ಪ್ರಸಾದ್‌ ಅವರ ಬಳಿಕ ಮೈಸೂರಿನ ಭಾಗದಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸಿದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು.

ಕೇಂದ್ರದ ಅನುದಾನವನ್ನು ಉತ್ತಮವಾಗಿ ಬಳಸಿ ಅಭಿವೃದ್ದಿಗೆ ನೆರವಾದ ಅವರು ಜನರಿಂದ
ಅತ್ಯುತ್ತಮ ಸಂಸದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇತ್ತೀಚಿಗೆ ಆರೋಗ್ಯ ಸಮಸ್ಯೆ ಇದ್ದರೂ ರಾಜಕೀಯ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು.

ಶುಕ್ರವಾರ ಪ್ರಜಾಧ್ವನಿ ಯಾತ್ರೆ ಮುಗಿಸಿ ಬಂದ ಅವರಿಗೆ ಶನಿವಾರ ಮುಂಜಾನೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಮನಗರ ಪ್ರಜಾಧ್ವನಿ ಯಾತ್ರೆ ರದ್ದು: ಡಿ.ಕೆ. ಶಿವಕುಮಾರ್:

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ರಾಮನಗರದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.


Spread the love

About Laxminews 24x7

Check Also

2023 : ಪಕ್ಷ, ನಾಯಕರ ಮೇಲೆ ಬಿಎಸ್‌ವೈ ಪ್ರಭಾವವನ್ನು ತಗ್ಗಿಸಲು ಬಿಜೆಪಿ ಹೈಕಮಾಂಡ್‌ ಬಿಗ್‌ ಪ್ಲ್ಯಾನ್‌?

Spread the love ಬೆಂಗಳೂರು, ಮಾರ್ಚ್‌ 13: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾರತೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ