Breaking News
Home / ರಾಜಕೀಯ / ದಟ್ಟ ಅರಣ್ಯದ ಮಧ್ಯೆ ಶಾಂತಚಿತ್ತವಾಗಿ ಹರಿಯುವ ಜಲಧಾರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.

ದಟ್ಟ ಅರಣ್ಯದ ಮಧ್ಯೆ ಶಾಂತಚಿತ್ತವಾಗಿ ಹರಿಯುವ ಜಲಧಾರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.

Spread the love

ಖಾನಾಪುರ: ತಾಲ್ಲೂಕಿನ ನಾಗರಗಾಳಿ ಅರಣ್ಯ ವ್ಯಾಪ್ತಿಯಲ್ಲಿರುವ ಜಲಪಾತ ಚಾರಣಪ್ರಿಯರ ಮನ ತಣಿಸುತ್ತಿದೆ. ದಟ್ಟ ಅರಣ್ಯದ ಮಧ್ಯೆ ಶಾಂತಚಿತ್ತವಾಗಿ ಹರಿಯುವ ಜಲಧಾರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.

ಲೋಂಡಾ, ಉತ್ತರ ಕನ್ನಡ ಜಿ ಖಾನಾಪುರ ಲ್ಲೆಯ ದಾಂಡೇಲಿ ಮತ್ತು ಧಾರವಾಡ ಜಿಲ್ಲೆಯ ಅಳ್ನಾವರ ಅರಣ್ಯದ ಮಧ್ಯೆ ನಾಗರಗಾಳಿ ಅರಣ್ಯ ಪ್ರದೇಶವಿದೆ.

ಬಹುತೇಕ ಸಾಗವಾನಿ ಹಾಗೂ ಸೀಸಂ ಮರಗಳಿರುವ ಈ ಕಾಡಿನಲ್ಲಿ ಹರಿಯುವ ಜಲಪಾತ ಮುಂದೆ ಕಾಳಿ ನದಿ ಸೇರುತ್ತದೆ.

ಅನುಮತಿ ಬೇಕು: ದಾಂಡೇಲಿಯಿಂದ ನಾಗರಗಾಳಿ ಅರಣ್ಯಕ್ಕೆ ಕಾಡಾನೆಗಳ ಹಿಂಡು ಆಗಾಗ ಬಂದು ಹೋಗುತ್ತದೆ. ಹೀಗಾಗಿ, ಜನರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ಜಲಪಾತ ವೀಕ್ಷಿಸಲು ಸಾರ್ವಜನಿಕರಿಗೆ ಅನುಮತಿ ಕೊಟ್ಟಿಲ್ಲ. ಒಂದುವೇಳೆ ಪ್ರವಾಸಿಗರು ಜಲಪಾತ ವೀಕ್ಷಿಸುವುದಾದರೆ, ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ.

ಬೆಳಿಗ್ಗೆಯಿಂದ ಸಂಜೆಯವರೆಗೆ ಜಲಪಾತ ವೀಕ್ಷಿಸಬಹುದು. ಆದರೆ, ಜಲಧಾರೆ ಸಮೀಪದವರೆಗೆ ವಾಹನದೊಂದಿಗೆ ಹೋಗಲು ಅವಕಾಶವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಗದರ್ಶನದಲ್ಲಿ ಕಾಲ್ನಡಿಗೆಯೊಂದಿಗೆ ಸಾಗಬೇಕು.

‘ನಾಗರಗಾಳಿ ಅರಣ್ಯದಲ್ಲಿರುವ ಜಲಪಾತವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಇಚ್ಛಿಸಿದರೆ, ಗ್ರಾಮ
ಪಂಚಾಯ್ತಿಯಿಂದ ಅಗತ್ಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಬೇಕು. ಕೆಲವು ಷರತ್ತುಗಳೊಂದಿಗೆ ಜಲಪಾತ ವೀಕ್ಷಿಸಲು ಅವಕಾಶ ಕಲ್ಪಿಸಿದರೆ ಚಾರಣಪ್ರಿಯರಿಗೆ ಅನುಕೂಲವಾಗಲಿದೆ. ಸ್ಥಳೀಯವಾಗಿ ಕೆಲವರಿಗೆ ಉದ್ಯೋಗಾವಕಾಶವೂ ಸಿಗಲಿದೆ’ ಎನ್ನುತ್ತಾರೆ ನಾಗರಗಾಳಿ ಪಿಡಿಒ ಬಾಲರಾಜ್ ಭಜಂತ್ರಿ.

ಈ ಪ್ರದೇಶಕ್ಕೆ ಒಮ್ಮೆ ಬಂದು ಹೋದರೆ ಮನಸ್ಸು ಉಲ್ಲಾಸಗೊಳ್ಳುತ್ತದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ