Breaking News
Home / ಅಂತರಾಷ್ಟ್ರೀಯ / ಏನಿದು ಐಪಿಎಲ್ ಮಿಡ್ ಟ್ರಾನ್ಸ್ಫರ್- 2020ರ ಮಿಡ್ ಟ್ರಾನ್ಸ್ಫರ್ ಆಗಬಲ್ಲ ಸಂಭಾವ್ಯ ಆಟಗಾರರ ಪಟ್ಟಿ

ಏನಿದು ಐಪಿಎಲ್ ಮಿಡ್ ಟ್ರಾನ್ಸ್ಫರ್- 2020ರ ಮಿಡ್ ಟ್ರಾನ್ಸ್ಫರ್ ಆಗಬಲ್ಲ ಸಂಭಾವ್ಯ ಆಟಗಾರರ ಪಟ್ಟಿ

Spread the love

ದುಬೈ: ಐಪಿಎಲ್ 2020ರ ಅರ್ಧ ಟೂರ್ನಿಯ ಅರ್ಧ ಪಂದ್ಯಗಳು ಪೂರ್ಣವಾಗುವ ಹಂತಕ್ಕೆ ತಲುಪಿದ್ದು, ಗೇಲ್, ರಹಾನೆರಂತಹ ಸ್ಟಾರ್ ಆಟಗಾರರು ಇಂದಿಗೂ ತಂಡದ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಈ ಸಮಯದಲ್ಲೇ ಫ್ರಾಂಚೈಸಿಗಳು ಆಟಗಾರರನ್ನು ಬದಲಿ ಮಾಡಿಕೊಳ್ಳುವ ಅವಕಾಶ ಮಿಡ್ ಟ್ರಾನ್ಸ್ಫರ್ ರೂಪದಲ್ಲಿ ಲಭ್ಯವಾಗಿದೆ

ಟೂರ್ನಿಯಲ್ಲಿ ತಮ್ಮನ್ನು ಖರೀದಿ ಮಾಡಿದ ಫ್ರಾಂಚೈಸಿ ತಂಡದ ಪರ ಆಡುವ ಅವಕಾಶ ಲಭಿಸದ ಆಟಗಾರರಿಗೆ ಮತ್ತೊಂದು ತಂಡದ ಪರ ಆಡಲು ಟೂರ್ನಿಯ ಅರ್ಧ ಪಂದ್ಯಗಳು ಮುಕ್ತಾಯವಾದ ಬಳಿಕ ‘ಮಿಡ್ ಸೀಜನ್ ಟ್ರಾನ್ಸ್ಫರ್ ವಿಂಡೋ’ ರೂಪದಲ್ಲಿ ಅವಕಾಶ ಲಭಿಸಲಿದೆ. ಟೂರ್ನಿಯ ಸಂದರ್ಭದಲ್ಲಿ ಗಾಯಗೊಂಡ ಆಟಗಾರರ ಸ್ಥಾನದಲ್ಲಿ ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಈ ಮಿಡ್ ಟ್ರಾನ್ಸ್ಫರ್ ವಿಂಡೋ ಅವಕಾಶ ಕಲ್ಪಿಸುತ್ತದೆ.

2018ರ ಐಪಿಎಲ್ ಆವೃತ್ತಿಯಲ್ಲಿ ಬಿಸಿಸಿಐ ಮೊದಲ ಬಾರಿಗೆ ಮಿಡ್ ಟ್ರಾನ್ಸ್ಫರ್ ವಿಂಡೋಗೆ ಅವಕಾಶ ನೀಡಿತ್ತು. ಆದರೆ ಇದುವರೆಗೂ ಈ ಅವಕಾಶವನ್ನು ಯಾವುದೇ ತಂಡ ಬಳಕೆ ಮಾಡಿಕೊಂಡಿಲ್ಲ. ಈ ಆವೃತ್ತಿಯಲ್ಲಿ ಐಪಿಎಲ್ ಆಡಳಿತ ಮಂಡಳಿ ಕ್ಯಾಪ್ಡ್ ಪ್ಲೇಯರ್ ಗಳನ್ನು ಫ್ರಾಂಚೈಸಿಗಳು ಬದಲಿಸಿಕೊಳ್ಳಲು ಅವಕಾಶ ನೀಡಿದೆ.

ಟೂರ್ನಿಯಲ್ಲಿ ಪ್ರತಿ ತಂಡ 7 ಪಂದ್ಯಗಳನ್ನು ಆಡಿದ ಬಳಿಕ ಆಟಗಾರರ ಬದಲಾವಣೆಗೆ ಅವಕಾಶ ಲಭಿಸಲಿದೆ. 2020ರ ಆವೃತ್ತಿಯಲ್ಲಿ ಗೇಲ್, ರಹಾನೆ, ಕ್ರಿಸ್ ಲೀನ್, ಕೌಲ್ಡರ್ ನೈಲ್, ಇಮ್ರಾನ್ ತಾಹಿರ್, ಕ್ರಿಸ್ ಮೋರಿಸ್ ರಂತಹ ಅಂತಾರಾಷ್ಟ್ರೀಯ ಆಟಗಾರರು ಮಿಡ್ ಟ್ರಾನ್ಸ್ಫರ್ ಗೆ ಅರ್ಹರಾಗಿದ್ದಾರೆ.

ಇತ್ತ ರಹಾನೆ ಅವರನ್ನು ತಂಡದಿಂದ ದೂರ ಮಾಡಿಕೊಳ್ಳುವುದಕ್ಕೆ ನಮಗೆ ಮನಸ್ಸಿಲ್ಲ ಎಂದು ಸ್ಪಷ್ಟಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುರೇಶ್ ರೈನಾ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರಾಟ್ ಸಿಂಗ್‍ರಂತಹ ಯುವ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. 2020ರ ಟೂರ್ನಿಯಲ್ಲಿ ಮಿಡ್ ಟ್ರಾನ್ಸ್ಫರ್ ಅವಕಾಶ ಅಕ್ಟೋಬರ್ 12ರ ಸೋಮವಾರದಿಂದ ಜಾರಿ ಆಗಲಿದೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ