Breaking News
Home / ಅಂತರಾಷ್ಟ್ರೀಯ / ಯುರೋಪ್‍ನಲ್ಲಿ ಕಿಲ್ಲರ್ ಕೊರೋನಾ 2ನೇ ಅಲೆ, ಮತ್ತೆ ಭಾರೀ ಆತಂಕ..!

ಯುರೋಪ್‍ನಲ್ಲಿ ಕಿಲ್ಲರ್ ಕೊರೋನಾ 2ನೇ ಅಲೆ, ಮತ್ತೆ ಭಾರೀ ಆತಂಕ..!

Spread the love

ಬ್ರಿಟನ್/ಮ್ಯಾಡ್ರಿಡ್, ಸೆ.30-ಯುರೋಪ್ ಖಂಡದ ಅನೇಕ ರಾಷ್ಟ್ರಗಳಲ್ಲಿ ಡೆಡ್ಲಿ ಕೊರೊನಾ ವೈರಸ್ ಆಕ್ರಮಣದ 2ನೇ ಆಲೆ ಆರಂಭವಾಗಿದ್ದು ಮತ್ತೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಐರೋಪ್ಯ ಖಂಡದಲ್ಲಿ ಕೋವಿಡ್-19 ವೈರಾಣು ದಾಳಿಯ ಸೆಕೆಂಡ್ ವೇವ್ ಶುರುವಾಗಿದ್ದು, ಅನೇಕ ದೇಶಗಳ ಜನರು ಮತ್ತು ಸರ್ಕಾರ ಮತ್ತೆ ತೀವ್ರ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.

ಕಿಲ್ಲರ್ ಕೊರೊನಾ ಆಟ್ಯಾಕ್‍ನಿಂದ ಈಗಷ್ಟೇ ಚೇತರಿಸಿಕೊಂಡಿದ್ದ ಯುರೋಪ್‍ನಲ್ಲಿ ಮತ್ತು ಮಹಾಮಾರಿ ವಕ್ಕರಿಸಿರುವುದು ಹೋದೆಯಾ ಪಿಶಾಚಿ ಎಂದರೆ ನಾ ಮತ್ತೆ ಬಂದೆ ಗವಾಕ್ಷಿಯಲ್ಲಿ ಎಂಬ ಗಾದೆ ಮಾತಿನಂತಾಗಿದೆ.

ಯೂರೋಪ್ ದೇಶಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಅನೇಕ ರಾಷ್ಟ್ರಗಳಲ್ಲಿ ಅಪಾರ ಸಾವು-ನೋವು ಮತ್ತು ನಷ್ಟಗಳ ನಡುವೆಯೂ ಹೆಮ್ಮಾರಿಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಿ ಚೇತರಿಸಿಕೊಳ್ಳುತ್ತಿದ್ದವು. ಇದೇ ಸಂದರ್ಭದಲ್ಲಿ ಪೆಡಂಭೂತದ ಎರಡನೇ ಅಲೆ ಶುರುವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಲ್ಬೆನಿಯಾ, ಬಲ್ಗೇರಿಯಾ, ಚೆಕ್ ರಿಪಬ್ಲಿಕ್, ಮೊಂಟೆನಿಗ್ರೋ, ನಾರ್ತ್ ಮೆಸೆಡೋನಿಯಾ ಮೊದಲಾದ ದೇಶಗಳಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ವೈರಾಣು ದಾಳಿ ಮೊದಲ ಅಲೆಗಿಂತಲೂ ತೀವ್ರವಾಗಿದೆ.

ಇದೇ ವೇಳೆ, ಬ್ರಿಟನ್, ಪೋಲೆಂಡ್, ನೆದರ್‍ಲೆಂಡ್ಸ್, ಸ್ಪೇನ್, ಫ್ರಾನ್ಸ್ ಮೊದಲಾದ ದೇಶಗಳಲ್ಲೂ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚಾಗುತ್ತಿದ್ದು, ಬಲಿಷ್ಠ ರಾಷ್ಟ್ರಗಳು ಮತ್ತೆ ಚಿಂತಾಕ್ರಾಂತವಾಗಿವೆ. ಐರೋಪ್ಯ ಸಮುದಾಯದ ಅನೇಕ ದೇಶಗಳಲ್ಲಿ ಮತ್ತೆ ಕಠಿಣ ನಿರ್ಬಂಧಗಳು ಮತ್ತು ಲಾಕ್‍ಡೌನ್‍ಗಳನ್ನು ಜಾರಿಗೊಳಿಸಲಾಗಿದೆ. ಇದೇ ವೇಳೆ ಕೋವಿಡ್ ನಿಗ್ರಹ ಲಸಿಕೆ ಮತ್ತು ಔಷಗಳನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸುವ ಪ್ರಕ್ರಿಯೆಯೂ ಸಾಗಿದೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ