Breaking News
Home / ರಾಜಕೀಯ / ದಾವಣಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದ್ದೇವೆ: ಯಡಿಯೂರಪ್ಪ

ದಾವಣಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದ್ದೇವೆ: ಯಡಿಯೂರಪ್ಪ

Spread the love

ಲಬುರಗಿ: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ದಾವಣಗೆರೆ ಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ಉದ್ದೇಶಿಸಿ ಮಾತನಾಡಿ, ದಾವಣಗೆರೆ ಯಲ್ಲಿ ಶಕ್ತಿ ಪ್ರದರ್ಶನ ಜತೆಗೇ ಮೈಸೂರಿನಿಂದ ರಥಯಾತ್ರೆ ಶುರು ಮಾಡುತ್ತೇವೆ.

ಎಲ್ಲ ಕಡೆ ತಿರುಗಾಡಿ ಪಕ್ಷ ಬಲಪಡಿಸಲಾಗುವುದು. ಹೀಗಾಗಿ ಹಿಂದುಳಿದ ವರ್ಗದವರು ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಬಲಪಡಿಸಬೇಕೆಂದರು. ದೇಶದಲ್ಲಿ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ.‌ ಆದರೆ ಬಿಜೆಪಿ ದೇಶದುದ್ದಕ್ಕೂ ಅಧಿಕಾರದಲ್ಲಿದೆ. ಹೀಗಾಗಿ ಹಣಬಲ- ತೊಳ್ಬಲದಿಂದ ಮತ್ತು ಜಾತಿ ವಿಷ ಬೀಜ ಬಿತ್ತಿ ಅಧಿಕಾರ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿ ಎಂದು ಬಿಎಸ್ ವೈ ಕರೆ ನೀಡಿದರು. ‌

ಅಧಿಕಾರದಲಿದ್ದಾಗ ಖರ್ಗೆ ನೆನಪಾಗಲಿಲ್ಲವೇ?

ಕಾಂಗ್ರೆಸ್ ಮುಳುಗುವ ಹಡಗಾಗಿದ್ದು ಇಂತಹ ಸಂದರ್ಭದಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಒಂದು ವೇಳೆ ಬೆಳೆಸಬೇಕೆಂಬ ಕಾಳಜಿವಿದ್ದರೆ ಈ ಹಿಂದೆ ಅಧಿಕಾರದಲ್ಲಿದ್ದಾಗ ಏಕೆ ಅಧ್ಯಕ್ಷ ಹಾಗೂ ಸಿಎಂ ಮಾಡಲಿಲ್ಲ ಎಂದು ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ ಸಮಾವೇಶದಲ್ಲಿ ಪ್ರಶ್ನಿಸಿದರು.

ಹೊರಗಿನಿಂದ ಬಂದವರು ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಮುಖ್ಯಮಂತ್ರಿ ಯಾದರು.‌ ಆದರೆ ಆಗ ಖರ್ಗೆ ಅವರು ನೆನಪಾಗಲಿಲ್ಲವೇ? ಮುಖ್ಯ ಮಂತ್ರಿ ಮಾಡದೇ ಅನ್ಯಾಯ ಎಸಗಲಾಗಿತ್ತು.‌ ಅಷ್ಟೇ ಏಕೆ 11ವರ್ಷಗಳ ಕಾಲ ಕೇಂದ್ರದಲ್ಲಿ ಯುಪಿಎ ಸರ್ಕಾರ ವಿದ್ದಾಗ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು.‌ ಬಹು ಮುಖ್ಯವಾಗಿ ಬಾಬು ಜಗಜೀವನರಾಮ ಅವರು ಪ್ರಧಾನಿಯಾಗದಂತೆ ತಡೆದಿದ್ದೇ ಕಾಂಗ್ರೆಸ್ ಎಂದು ಕಾರಜೋಳ ವಾಗ್ದಾಳಿ ನಡೆಸಿದರು.

ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಹಿಂದುಳಿದ ವರ್ಗದವರಿಗೆ ಕೇಂದ್ರದ ಲ್ಲಿ 27 ಸಚಿವ ಸ್ಥಾನ ನೀಡಿದ್ದ ಲ್ಲದೇ ಶೇ. 27ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದರು.

ಬಿಎಸ್ ವೈ ಹೆಸರು ಹೇಳದಿದ್ದಕ್ಕೆ ಆಕ್ಷೇಪ
ಸಮಾವೇಶದಲ್ಲಿ ಆಕ್ಷೇಪಿಸಿದ ಘಟನೆ ನಡೆಯಿತು. ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ ಅವರು ಮಾತನಾಡುವಾಗ, ವೇದಿಕೆ ಮೇಲಿದ್ದ ಎಲ್ಲ ನಾಯಕರ ಹೆಸರು ಹೇಳಿದರು. ಆದರೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಹೇಳಲಿಲ್ಲ.‌ಇದನ್ನು ಗಮನಿಸಿದ ಕಾರ್ಯಕರ್ತರು ಬಿ. ಎಸ್.‌ಯಡಿಯೂರಪ್ಪನವರ ಹೆಸರು ಹೇಳಿ ಎಂದು ಸಮಾವೇಶದಲ್ಲಿ ಕಾರ್ಯಕರ್ತರು ಒಕ್ಕೋರಲಿನಿಂದ ಆಗ್ರಹಿಸಿದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ