Breaking News
Home / Uncategorized / ಹಿಂಡಲಗಾ ಜೈಲಿನಲ್ಲಿರುವ ಬಂಧಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ

ಹಿಂಡಲಗಾ ಜೈಲಿನಲ್ಲಿರುವ ಬಂಧಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ

Spread the love

ಕಾರಾಗೃಹ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಬಂಧಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತಾ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಬೆಂಗಳೂರು. ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಲಯ ಬೆಳಗಾವಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳಾದ ಬಸವ ಪ್ರಭು ಹಿರೇಮಠ ಆಗಮಸಿದ್ದರು.

ಅಧ್ಯಕ್ಷತೆಯನ್ನು ಸಹಾಯಕ ಅಧೀಕ್ಷಕರಾದ ಎಮ್.ಎಚ್.ಆಶೇಖಾನ್ ವಹಿಸಿದ್ದರು. ಸಸಿಗೆ ನಿರೂಣಿಸಿವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಬಸವ ಪ್ರಭು ಹಿರೇಮಠ ಮಾತನಾಡಿ ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯದ 8 ಕೇಂದ್ರ ಕಾರಾಗೃಹಗಳಲ್ಲಿ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು ಅದರಂತೆ ಬೆಳಗಾವಿಯ ಕಾರಾಗೃಹದಲ್ಲಿ “ಬೇಕರಿ ಮತ್ತು ಟೇಲರಿಂಗ್” ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಸದರಿ ತರಬೇತಿಗಳು ದೀರ್ಘಾವಧಿ ತರಬೇತಿಗಳಾಗಿದ್ದು 3 ತಿಂಗಳವರೆಗೆ ತರಬೇತಿಯ ಕುರಿತು ಸಮಗ್ರವಾಗಿ ಪ್ರಾತ್ಯೀಕ್ಷಿಕೆ ಮೂಲಕ ವಿವರಿಸಲಾಗುವುದು.

ಇಂದಿನ ಆಧುನಿಕ ಯುಗದಲ್ಲಿ “ಬೇಕರಿ ಮತ್ತು ಟೇಲರಿಂಗ್” ಉದ್ಯಮವು ಯುವ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ತುಂಬಾ ಅನುಕೂಲವಾಗುತ್ತಿದೆ. ಇಲಾಖೆ ವತಿಯಿಂದ ಪ್ರಥಮ ಭಾರಿಗೆ ಸದರಿ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೃಷ್ಣಕುಮಾರ ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಈ ಕಾರ್ಯಕ್ರಮವು ಆಯೋಜಿಸಲಾಗುತ್ತಿದ್ದು. ಇದರ ನಂತರ ನಿರಂತರವಾಗಿ ಬೇರೆ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಮ್.ಎಚ್ ಆಶೇಖಾನ್ ಮಾತನಾಡಿ ತಾವೆಲ್ಲಾ ಜೀವನದಲ್ಲಿ ಸಂಭವಿಸಿದ ಆಕಸ್ಮಿಕ ಘಟನೆಯ ನಿಮಿತ್ಯ ಕಾರಾಗೃಹಕ್ಕೆ ಬಂದಿರಬಹುದು ಆದರೆ ನೀವು ಇಲ್ಲಿಂದ ಬಿಡುಗಡೆಯಾಗಿ ಹೋಗಲೇ ಬೇಕು. ಕಾರಣ ಇಲ್ಲಿ ಆಯೋಜಿಸಲಾಗುವ ವಿವಿಧ ತರಬೇತಿಗಳಲ್ಲಿ ಪಾಲ್ಗೊಳ್ಳಬೇಕು. ಏಕೆಂದರೆ ನೀವು ಸಮಾಜದಲ್ಲಿದ್ದಾಗ ನಿಮಗೆ ತರಬೇತಿಗಳನ್ನು ಪಡೆಯಲು ಸಮಯ ಇರುವುದಿಲ್ಲ. ಇಂದಿನ ಯುಗದಲ್ಲಿ ಯಾವ ವ್ಯಕ್ತಿಯಲ್ಲಿ ಕೌಶಲ್ಯದ ಪ್ರತಿಭೆ ನೈಪುಣ್ಯತೆ ಇರುತ್ತದೆಯೋ ಆ ವ್ಯಕ್ತಿ ಎಲ್ಲರಿಂದ ಗುರುತಿಸಲ್ಪಡುತ್ತಾನೆ. ಆದ್ದರಿಂದ ತಾವೆಲ್ಲ 3 ತಿಂಗಳ ಕಾಲ ಪ್ರಾಮಾಣಿಕವಾಗಿ ಶ್ರಧ್ಧೆಯಿಂದ ತರಬೇತಿಗಳಲ್ಲಿ ಪಾಲ್ಗೊಂಡು ತಮ್ಮ ಬಾವಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.


Spread the love

About Laxminews 24x7

Check Also

ಮಹಿಳಾ ಹೋರಾಟಗಾರ್ತಿ ‘ಪ್ರಿಯಾ ಸವದಿ’ ಪೆನ್‌ ಡ್ರೈವ್‌ಕೇಸ್‌ನಲ್ಲಿ ಹೋರಾಟ ಮಾಡಲು ಹಾಸನಕ್ಕೆ ಎಂಟ್ರಿ?

Spread the love ಬೆಂಗಳೂರು: ನಾಡಿನ ಹೆಮ್ಮೆಯ ನಟಿ, ಟಿಕ್‌ ಟಾಕ್‌ ಸ್ಟಾರ್‌, ಮಹಿಳಾ ಪರಹೋರಾಟಗಾರ್ತಿ, ನೇಹಾ ಪ್ರಕರಣದಲ್ಲಿ ದೊಡ್ಡದಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ