Breaking News
Home / ಜಿಲ್ಲೆ / ಬೆಂಗಳೂರು / ಈ ಬಾರಿ ದಸರಾಗೆ ಶಾಲಾ-ಕಾಲೇಜುಗಳಿಗಿಲ್ಲ ರಜೆ

ಈ ಬಾರಿ ದಸರಾಗೆ ಶಾಲಾ-ಕಾಲೇಜುಗಳಿಗಿಲ್ಲ ರಜೆ

Spread the love

ಬೆಂಗಳೂರು: ನಾಡಹಬ್ಬ ದಸರಾಗೆ ಈಬಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲದಿರುವುದು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಬೇಸರಕ್ಕೆ ಕಾರಣವಾಗಿದೆ.

ಸೆ.26ರಿಂದ ಅಕ್ಟೋಬರ್ 5ರವರೆಗೆ ನಾಡಹಬ್ಬ ದಸರಾ, ನವರಾತ್ರಿ ಉತ್ಸವದ ಸಂಭ್ರಮ. ಆದರೆ ಶಾಲಾ-ಕಾಲೇಜುಗಳಿಗೆ ಮಾತ್ರ ಈ ಬಾರಿ ರಜೆಯನ್ನು ದಸರಾ ಬದಲಾಗಿ ದಸರಾ ಹಬ್ಬ ಮುಗಿದ ಬಳಿಕ ನೀಡಲಾಗಿರುವ ಶಿಕ್ಷಣ ಇಲಾಖೆ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿರುವ ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ಯಾಲೇಂಡರ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅಕ್ಟೋಬರ್ 3ರಿಂದ 16ವರೆಗೆ ಹಾಗೂ ಪದವಿ ಪೂರ್ವ ಇಲಾಖೆಯು ಅಕ್ಟೋಬರ್ 1ರಿಂದ 13ರವರೆಗೆ ದಸರಾ ರಜೆ ನಿಗದಿ ಪಡಿಸಿದೆ. ಅಂದರೆ ನವರಾತ್ರಿಯ ಕೊನೆ ಎರಡು ದಿನ ಮಕ್ಕಳು ಶಾಲೆಯಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ.

ಶಿಕ್ಷಣ ಇಲಾಖೆಗೆ ವರ್ಷದ ರಜೆ, ಹಬ್ಬಗಳ ಆಚರಣೆ ಬಗ್ಗೆ ಮೊದಲೇ ಗೊತ್ತಿದ್ದರೂ ಇಂತಹ ಎಡವಟ್ಟು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈಗಲಾದರೂ ಹಬ್ಬಕ್ಕೆ ಅನುಗುಣವಾಗಿ ರಜೆ ಸಮಯ ನಿರ್ದಿಷ್ಟ ಪಡಿಸುವಂತೆ ಪೋಷಕರ ಒತ್ತಾಯಿಸಿದ್ದಾರೆ .

ಈ ಹಿಂದೆ ದಸರಾ ರಜೆ ಶಾಲೆಗಳಿಗೆ 28 ದಿನಗಳ ಕಾಲ ಇದ್ದುದನ್ನು ಬಳಿಕ 15 ದಿನಗಳಿಗೆ ಕಡಿತಗೊಳಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ 13 ದಿನಗಳಿಗೆ ಸೀಮಿತಗೊಳಿಸಲಾಗಿದೆ. 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ