Breaking News
Home / ರಾಜಕೀಯ / 164 ಶಾಸಕರ ಬೆಂಬಲದೊಂದಿಗೆ ಅಧಿಕಾರ ಭದ್ರಗೊಳಿಸಿದ ಶಿಂಧೆ

164 ಶಾಸಕರ ಬೆಂಬಲದೊಂದಿಗೆ ಅಧಿಕಾರ ಭದ್ರಗೊಳಿಸಿದ ಶಿಂಧೆ

Spread the love

ವಿಶ್ವಾಸ ಮತಯಾಚನೆಯಲ್ಲಿ ಏಕನಾಥ್‌ ಶಿಂಧೆ ಸರ್ಕಾರವು ಬಹುಮತ ಪಡೆದುಕೊಂಡಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಶಿಂಧೆ ಬಣ ಇದೀಗ 164 ಶಾಸಕರ ಬೆಂಬಲದೊಂದಿಗೆ ಅಧಿಕಾರ ಭದ್ರಗೊಳಿಸಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 145 ಆಗಿತ್ತು.

ಅಂದರೆ ಶಿಂಧೆ ಸರ್ಕಾರಕ್ಕೆ 145 ಶಾಸಕರ  ಬೆಂಬಲ ಬೇಕಿತ್ತು. ಆದರೆ ಅದಕ್ಕಿಂತ ಹೆಚ್ಚಿನ ಶಾಸಕರ ಬೆಂಬಲವನ್ನು ಪಡೆದುಕೊಂಡು ಗೆಲುವಿನ ನಗೆ ಬೀರಿದ್ದಾರೆ. ಏಕನಾಥ್ ಶಿಂಧೆ ಅವರ ಪರವಾಗಿ 164 ಮತಗಳು ಬಿದ್ದಿದ್ದು, ಪ್ರತಿಪಕ್ಷಗಳು ಕೇವಲ 99 ಮತಗಳನ್ನು ಪಡೆದಿವೆ.

ಶಿಂಧೆ ಸರ್ಕಾರ 164 ಮತಗಳಿಂದ ಬಹುಮತ ಸಾಬೀತುಪಡಿಸಿದೆ. ಇಂದು ಇನ್ನೂ ಇಬ್ಬರು ಶಾಸಕರು ಶಿಂಧೆ ಬೆಂಬಲಕ್ಕೆ ಬಂದಿದ್ದು, ಇವರಲ್ಲಿ ಶ್ಯಾಮಸುಂದರ್ ಶಿಂಧೆ ಮತ್ತು ಸಂತೋಷ್ ಬಂಗಾರ್ ಹೆಸರು ಸೇರಿವೆ. ಮತ್ತೊಂದೆಡೆ, ಮಹಾ ವಿಕಾಸ್ ಅಘಾಡಿಯ ಇಬ್ಬರು ಸಚಿವರಾದ ಅಶೋಕ್ ಚವ್ಹಾಣ್ ಮತ್ತು ವಿಜಯ್ ವಡೆತ್ತಿವಾರ್ ಅವರು ಸಮಯಕ್ಕೆ ಸರಿಯಾಗಿ ವಿಧಾನಸಭೆಗೆ ಬಾರದ ಕಾರಣ ಮತದಾನ ಮಾಡಲು ಸಾಧ್ಯವಾಗಲಿಲ್ಲ. 31 ತಿಂಗಳ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ ಶಿಂಧೆ ನೇತೃತ್ವದ ಸರ್ಕಾರ ಜೂನ್ 30 ರಂದು ಪ್ರಮಾಣವಚನ ಸ್ವೀಕರಿಸಿದೆ. ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನದ ಎರಡನೇ ದಿನವಾದ ಇಂದು ಶಿಂಧೆ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸಿದೆ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ