Breaking News
Home / Uncategorized / ಪ್ರಕಾಶ ಹುಕ್ಕೇರಿಗೆ ಭರ್ಜರಿ ಗೆಲುವು: ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದ ಚಿಕ್ಕೋಡಿ ಕಾಂಗ್ರೆಸ್ ಕಾರ್ಯಕರ್ತರು..

ಪ್ರಕಾಶ ಹುಕ್ಕೇರಿಗೆ ಭರ್ಜರಿ ಗೆಲುವು: ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದ ಚಿಕ್ಕೋಡಿ ಕಾಂಗ್ರೆಸ್ ಕಾರ್ಯಕರ್ತರು..

Spread the love

ಪ್ರಕಾಶ ಹುಕ್ಕೇರಿಗೆ ಭರ್ಜರಿ ಗೆಲುವು: ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದ ಚಿಕ್ಕೋಡಿ ಕಾಂಗ್ರೆಸ್ ಕಾರ್ಯಕರ್ತರು..

ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ಜೂನ 13 ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಭರ್ಜರಿ ಗೆಲುವು ಸಾಧಿಸಿದ್ದು. ಇದರಿಂದ ಚಿಕ್ಕೋಡಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದರು.

ಪುರಸಭೆ ಸದಸ್ಯ ಸಾಭೀರ ಜಮಾದಾರ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಪ್ರವಾಸಿ ಮಂದಿರದಿಂದ ಬ್ಯಾಂಡ ಬಾರಿಸುವ ಮೂಲಕ ಮೆರವಣಿಗೆ ನಡೆಸಿ ಬಸವ ವೃತ್ತದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡಿದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಹಾಗೂ ಪ್ರಕಾಶ ಹುಕ್ಕೇರಿ ಪರವಾಗಿ ಘೋಷಣೆ ಕೂಗಿದರು. ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೊಹಿತೆ ಮಾತನಾಡಿ ಈ ನಮ್ಮ ಗೆಲುವಿಗೆ ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲಾ ಮುಖಂಡರು ಪರಿಶ್ರಮ ಪಟ್ಟಿದ್ದಾರೆ. ಹಾಗೂ ವಯಸ್ಸು, ಧರ್ಮ, ಜಾತಿ ಹೀಗೆ ಪ್ರಕಾಶ ಹುಕ್ಕೇರಿಯವರ ಶಿಕ್ಷಣದ ಬಗ್ಗೆ ಅಪಪ್ರಚಾರವನ್ನು ಮಾಡಿದ ಬಿಜೆಪಿ ಮುಖಂಡರಿಗೆ ಫಲಿತಾಂಶವೆ ತಕ್ಕ ಉತ್ತರವಾಗಿದೆ..

ನಂತರ ಪುರಸಭೆ ಸದಸ್ಯ ಸಾಬೀರ ಜಮಾದಾರ ಮಾತನಾಡಿ ಕೊರೊನಾ ಸಂಧರ್ಭದಲ್ಲಿ ಪ್ರಕಾಶ ಹುಕ್ಕೇರಿ ಅವರು ಶಿಕ್ಷಕರಿಗೆ ಉಚಿತವಾಗಿ ವಾಕ್ಸಿನ್ ನೀಡಿದರು..ಹಾಗೂ ಅವರ ಜನಪರ ಕಾರ್ಯಗಳಿಂದ ಶಿಕ್ಷಕರು ಪ್ರಕಾಶ ಹುಕ್ಕೇರಿಯವರಿಗೆ ರಾಜಕೀಯ ಪುರ್ನಜನ್ಮ ನೀಡಿದ್ದಾರೆ ಎಂದರು…

ನಂತರ ಇನ್ನೋರ್ವ ಪುರಸಭೆ ಸದಸ್ಯ ಗುಲಾಬ ಹುಸೇನ್ ಬಾಗವಾನ ಮಾತನಾಡಿ ನಾವು ವಿಜಯಪುರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಾಗ ಪ್ರಕಾಶ ಹುಕ್ಕೇರಿ ಬಗ್ಗೆ ಶಿಕ್ಷಕರು ಹೆಚ್ಚಿನ ಒಲವು ತೋರಿಸಿದ್ದರು. ಪ್ರಕಾಶ ಹುಕ್ಕೇರಿ ಒಬ್ಬ ಅಭಿವೃದ್ಧಿ ಹರಿಕಾರರು ಈ ಕಾರಣಕ್ಕಾಗಿ ಅವರ ಅಭೂತಪೂರ್ವ ಗೆಲವುವಾಗಿದೆ ಎಂದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಭಾಕರ ಈ ಕೋರೆ. ರಾಮಾ ಮಾನೆ ನ್ಯಾಯವಾದಿ ಮುದ್ದಸರ ಜಮಾದರ, ಬಾಬು ಸಮ್ಮತಶೆಟ್ಟಿ, ಶೀತಲ ಮುಂಡೆ,ವಿನೋದ ಮಾಳಗೆ, ಈರ್ಫಾನ ಬೇಪಾರಿ,ರವಿ ಹಂಪನ್ನವರ,ರಾಜು ಪಾಟೀಲ,ರಾಜು ಕೋಟಗಿ,ಸುರೇಶ ಖೋತ,ಸಮ್ಮೀರ ನಾಯಿಕವಾಡಿ,ಪಿರೋಜ ಕಲಾವಂತ,ರಾಜು ಗುಲಗುಜ್ಜಿ,ವಿಶಾಲ ಶಿಂಧೆ, ತನವೀರ ಹೇರವಾಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 


Spread the love

About Laxminews 24x7

Check Also

ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ

Spread the loveನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹುಬ್ಬಳ್ಳಿ, ಏಪ್ರಿಲ್ 28: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ