Breaking News
Home / ರಾಜಕೀಯ / ಹೊಸಕೋಟಿ ಗ್ರಾಮವು ರಸ್ತೆ, ಚರಂಡಿ, ವೈದ್ಯಕೀಯ ಸೌಕರ್ಯ, ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ ಮೊದಲಾದ ಮೂಲ ಸೌಲಭ್ಯಗಳಿಂದ ವಂಚಿತ

ಹೊಸಕೋಟಿ ಗ್ರಾಮವು ರಸ್ತೆ, ಚರಂಡಿ, ವೈದ್ಯಕೀಯ ಸೌಕರ್ಯ, ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ ಮೊದಲಾದ ಮೂಲ ಸೌಲಭ್ಯಗಳಿಂದ ವಂಚಿತ

Spread the love

ನೇಸರಗಿ (ಬೆಳಗಾವಿ ಜಿಲ್ಲೆ): ಸಮೀಪದ ಹೊಸಕೋಟಿ ಗ್ರಾಮವು ರಸ್ತೆ, ಚರಂಡಿ, ವೈದ್ಯಕೀಯ ಸೌಕರ್ಯ, ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ ಮೊದಲಾದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಹಣಬರಹಟ್ಟಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಗ್ರಾಮ ಬರುತ್ತದೆ.

ಪಟ್ಟಣದಿಂದ ದೂರವಿರುವ ಅಲ್ಲಿನ ಜನರಿಗೆ ನಾಗರಿಕ ಸವಲತ್ತುಗಳು ಮರೀಚಿಕೆಯಾಗಿವೆ.

ಬೈಲಹೊಂಗಲ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ., ನೇಸರಗಿ ಹೋಬಳಿ ಕೇಂದ್ರದಿಂದ 7 ಕಿ.ಮೀ. ದೂರದಲ್ಲಿ ಈ ಗ್ರಾಮವಿದೆ. 2,400 ಮತದಾರರು ಸೇರಿದಂತೆ 2,600 ಜನಸಂಖ್ಯೆ ಹೊಂದಿದೆ.

ಇಲ್ಲಿಂದ ಅಕ್ಕತಂಗೇರಹಾಳ ಮಾರ್ಗವಾಗಿ ಅಂಕಲಗಿ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದೆ. ವಾಹನ ಸವಾರರು ಸಾಕಷ್ಟು ಬಾರಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯನ್ನು ಜನರು ಈಗಲೂ ಅವಲಂಬಿಸಿದ್ದಾರೆ. ಗ್ರಾಮದಿಂದ ಹೊಲಗಳಿಗೆ ಸಂಪರ್ಕಿಸುವ (ಕುಮರಿ) ದಾರಿ ತೀರಾ ಹದಗೆಟ್ಟಿದೆಯಾದರೂ ಸುಧಾರಣೆಗೆ ಕ್ರಮವಾಗಿಲ್ಲ. ರಾತ್ರಿ ವೇಳೆ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ತೊಂದರೆಯಾಗಿದೆ:

‘ಗ್ರಾಮದಲ್ಲಿ ವೈದ್ಯಕೀಯ ಸೇವೆಯು ಇಲ್ಲದಿರುವುದರಿಂದ ಚಿಕಿತ್ಸೆಗೆ ನೇಸರಗಿ, ಬೈಲಹೊಂಗಲ, ಬೆಳಗಾವಿ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಇದೆ. ರಾತ್ರಿ ವೇಳೆ ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಮಕ್ಕಳನ್ನು ಕರೆದುಕೊಂಡು ಹೋಗುವುದು ಬಹಳ ಕಷ್ಟದಾಯಕವಾಗಿ ಪರಿಣಮಿಸಿದೆ’ ಎಂದು ಗ್ರಾಮದ ನಾಗವ್ವ ಕರಡಿಗುದ್ದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿನ ಬೀದಿಗಳ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ನಿರ್ಮಾಣವಾಗಿಲ್ಲದಿರುವುದು, ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದ್ದುದು, ಅದರ ನಡುವೆಯೇ ಜನರು ಸಂಚರಿಸುತ್ತಿದ್ದುದು ಹಾಗೂ ವಾತಾವರಣ ಕಲುಷಿತಗೊಂಡಿರುವುದು ಪತ್ರಿಕೆಯ ಪ್ರತಿನಿಧಿ ಭೇಟಿ ನೀಡಿದಾಗ ಕಂಡುಬಂತು.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ