Breaking News
Home / ರಾಜಕೀಯ / LPG ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ 900 ರೂಪಾಯಿಗಲ್ಲ 587ಕ್ಕೆ ಸಿಗಲಿದೆ ಸಿಲಿಂಡರ್

LPG ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ 900 ರೂಪಾಯಿಗಲ್ಲ 587ಕ್ಕೆ ಸಿಗಲಿದೆ ಸಿಲಿಂಡರ್

Spread the love

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಜನ ಸಾಮಾನ್ಯರನ್ನ ಬೆಚ್ಚಿ ಬೀಳಿಸಿದೆ. ಅಗತ್ಯ ವಸ್ತುಗಳ ಬೆಲೆಯೊಂದಿಗೆ ಪೆಟ್ರೋಲ್, ಡೀಸೆಲ್ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊತೆಗೆ ಅಡುಗೆ ಅನಿಲದ ಬೆಲೆಯೂ ಏರಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಬೆಲೆ ಸಾರ್ವಕಾಲಿಕ ಗರಿಷ್ಠ 900 ರೂ.ಗೆ ಏರಿಕೆಯಾಗಿದೆ. ಅದ್ರಂತೆ, ದಿನ ಬಳಕೆಯ ವಸ್ತುಗಳ ಜತೆಗೆ 900 ರೂ.ಗೆ ಗ್ಯಾಸ್ ಸಿಲಿಂಡರ್ ಖರೀದಿಸುವುದು ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಇನ್ನು ಕೆಲ ದಿನಗಳಿಂದ ಸರ್ಕಾರ ನೀಡುವ ಗ್ಯಾಸ್ ಸಬ್ಸಿಡಿ ಬಾರದೇ ಇದ್ದದ್ದು, ಮತ್ತಷ್ಟು ಹೊರೆಯಾಗಿತ್ತು. ಆದ್ರೆ, ಈಗ ನೀವು ಸಬ್ಸಿಡಿ ಬಗ್ಗೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ, ಕೇಂದ್ರ ಸರ್ಕಾರ ಗ್ಯಾಸ್ ಸಬ್ಸಿಡಿ ಪುನಶ್ಚೇತನಕ್ಕೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದಿಂದಲೂ ಪ್ರಸ್ತಾವನೆಗಳು ಬಂದಿವೆ. ಅದ್ರಂತೆ, ಪ್ರಸ್ತುತ ಪರಿಗಣನೆಯಲ್ಲಿರುವ ಮಾಹಿತಿ ಪ್ರಕಾರ, ಸಧ್ಯ ಪ್ರಸ್ತುತ ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ದೇಶೀಯ ಅನಿಲಕ್ಕೆ ಸಬ್ಸಿಡಿ ನೀಡಲಾಗುತ್ತದೆ ಜೊತೆಗೆ ಇಡೀ ದೇಶಕ್ಕೆ ಗ್ಯಾಸ್ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು (OMC) ಕೇಂದ್ರ ಸರ್ಕಾರದ ನಿರ್ದೇಶನದಂತೆ ಗ್ಯಾಸ್ ಡೀಲರ್‌ಗಳಿಗೆ 303 ರೂ ಸಬ್ಸಿಡಿ ನೀಡುತ್ತವೆ. ಇದರೊಂದಿಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 303 ರೂ.ಗಳ ರಿಯಾಯಿತಿ ನೀಡಲಿವೆ.ಈ ಮೂಲಕ ಈಗ 900 ರೂಪಾಯಿಯ ಗ್ಯಾಸ್ ಸಿಲಿಂಡರ್‌ಗೆ 587 ರೂಪಾಯಿಗೆ ಲಭ್ಯವಿರುತ್ತದೆ.

ಇನ್ನು ನೀವು ಕೂಡ ಗ್ಯಾಸ್ ಸಬ್ಸಿಡಿ ಪಡೆಯಲು ಇಚ್ಚಿಸಿದ್ರೆ, ನಿಮ್ಮ ಗ್ಯಾಸ್ ಸಂಪರ್ಕದೊಂದಿಗೆ ನಿಮ್ಮ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡಿ. ಆಧಾರ್ ಲಿಂಕ್ ಮಾಡಿದ ನಂತ್ರ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಬ್ಸಿಡಿ ಮೊತ್ತವನ್ನ ನೀವು ಪಡೆಯುತ್ತೀರಿ. ಇದರೊಂದಿಗೆ ನಗದು ಠೇವಣಿ ಮಾಹಿತಿಯ ಬಗ್ಗೆ ನಿಮ್ಗೆ ಸಂದೇಶವೂ ಬರುತ್ತದೆ.

ಮೊಬೈಲ್‌ನೊಂದಿಗೆ ಗ್ಯಾಸ್ ಸಂಪರ್ಕವನ್ನು ಹೇಗೆ ಲಿಂಕ್ ಮಾಡುವುದು…?
ನಿಮ್ಮ ಗ್ಯಾಸ್ ಸಂಪರ್ಕವನ್ನು ಮೊಬೈಲ್‌ನೊಂದಿಗೆ ಲಿಂಕ್ ಮಾಡಲು , ನಿಮ್ಮ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ನಿಮಗೆ ಮೊಬೈಲ್‌ನೊಂದಿಗೆ ಗ್ಯಾಸ್ ಸಂಪರ್ಕವನ್ನ ಲಿಂಕ್ ಮಾಡುವ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ . ನಂತ್ರ ನಿಮ್ಮ 17 ಅಂಕಿಗಳ LPG ID ಅನ್ನು ನಮೂದಿಸಿ. ಅಮೇಲೆ ಪರಿಶೀಲಿಸಿ ಮತ್ತು ಸಲ್ಲಿಸಿ ಕ್ಲಿಕ್‌ ಮಾಡಿ. ಬುಕಿಂಗ್ ದಿನಾಂಕ ಸೇರಿದಂತೆ ಎಲ್ಲಾ ಇತರ ಮಾಹಿತಿಯನ್ನ ಭರ್ತಿ ಮಾಡಬೇಕು. ಇದರ ನಂತರ ನೀವು ಸಬ್ಸಿಡಿಗೆ ಸಂಬಂಧಿಸಿದ ಮಾಹಿತಿಯನ್ನ ಪಡೆಯಬಹುದು.

LPG ಸಬ್ಸಿಡಿ ಕಸ್ಟಮರ್ ಕೇರ್ ಸಂಖ್ಯೆಯನ್ನು ಪರಿಶೀಲಿಸಿ..!
ಗ್ರಾಹಕ ಸಂಖ್ಯೆ 1800-233-3555 ಗೆ ಕರೆ ಮಾಡುವ ಮೂಲಕ ಸಬ್ಸಿಡಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೋದು.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ