Breaking News
Home / ರಾಜಕೀಯ / ಶಿಕ್ಷಕ ಹುದ್ದೆ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌ : ವಿವಿ, ಕಾಲೇಜುಗಳಲ್ಲಿ ಖಾಲಿ ಇರುವ ಅಧ್ಯಾಪಕರ ನೇಮಕಾತಿಗೆ ʼUGCʼ ಅಧಿಸೂಚನೆ

ಶಿಕ್ಷಕ ಹುದ್ದೆ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌ : ವಿವಿ, ಕಾಲೇಜುಗಳಲ್ಲಿ ಖಾಲಿ ಇರುವ ಅಧ್ಯಾಪಕರ ನೇಮಕಾತಿಗೆ ʼUGCʼ ಅಧಿಸೂಚನೆ

Spread the love

ದೇಶಾದ್ಯಂತ ಇರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ವಿಶ್ವವಿದ್ಯಾನಿಲಯ ಅನುದಾನ ಆಯೋಗವು ದೇಶಾದ್ಯಂತ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಸಂಸ್ಥೆಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸಿದೆ.

ಈ ಸುತ್ತೋಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನ ಭರ್ತಿ ಮಾಡುವಂತೆ ತಿಳಿಸಲಾಗಿದೆ.

ಯುಜಿಸಿ ಹೊರಡಿಸಿರುವ ನೋಟಿಸ್ ಪ್ರಕಾರ, ಅಧ್ಯಾಪಕರಲ್ಲಿ (Faculty) ಕಾಯಂ ನೇಮಕಾತಿಗೆ ಸಂಬಂಧಿಸಿದಂತೆ ಸೂಚನೆಗಳನ್ನ ನೀಡಲಾಗಿದೆ. ಏಪ್ರಿಲ್ 1, 2021ರ ಪ್ರಕಾರ, ದೆಹಲಿ ವಿಶ್ವವಿದ್ಯಾನಿಲಯದಲ್ಲಿ (DU) ವಿವಿಧ ವಿಭಾಗಗಳಲ್ಲಿ ಸುಮಾರು 846 ಸಹಾಯಕ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ.

ವಾಸ್ತವವಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವ್ರು, ಸೆಪ್ಟೆಂಬರ್ ತಿಂಗಳಿನಲ್ಲಿ 45 ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಭೆಯನ್ನ ಕರೆದಿದ್ದರು. ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎಲ್ಲಾ ಸಂಸ್ಥೆಗಳು ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸಬೇಕು ಎಂದವ್ರು ಹೇಳಿದರು. ಇದರ ಅಡಿಯಲ್ಲಿ, ಎಲ್ಲಾ ವಿಶ್ವವಿದ್ಯಾನಿಲಯಗಳು ಮೀಸಲಾತಿ ವರ್ಗಗಳ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿನ ವಾರ ಜಾಹೀರಾತುಗಳನ್ನ ನೀಡಬೇಕು ಎಂದಿದ್ದರು. ಆದ್ರೆ, ಇವರೆಗೂ ಅಧಿಸೂಚನೆ ಹೊರಡಿಸಿಲ್ಲ.

ಎಲ್ಲಿ, ಎಷ್ಟು ಖಾಲಿ ಹುದ್ದೆಗಳಿವೆ..?
ಶಿಕ್ಷಣ ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ದೇಶಾದ್ಯಂತದ ವಿಶ್ವವಿದ್ಯಾಲಯಗಳಲ್ಲಿ ಒಟ್ಟು 6229 ಬೋಧಕ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 1012 ಎಸ್‌ಸಿ, 592 ಎಸ್‌ಟಿ, 1767 ಇತರೆ ಹಿಂದುಳಿದ ವರ್ಗಗಳು (ಒಬಿಸಿ), 805 ಇಡಬ್ಲ್ಯೂಎಸ್ ಮತ್ತು 350 ದಿವ್ಯಾಂಗ ವರ್ಗಗಳು ಖಾಲಿ ಇವೆ. ಅದೇ ಸಮಯದಲ್ಲಿ, ಉಳಿದವು ಸಾಮಾನ್ಯ ವರ್ಗದ ಹುದ್ದೆಗಳಾಗಿವೆ. ಮಾಧ್ಯಮ ವರದಿಗಳ ಪ್ರಕಾರ, ದೆಹಲಿ ವಿಶ್ವವಿದ್ಯಾಲಯ ಸೇರಿದಂತೆ 44 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, 15 ವಿಶ್ವವಿದ್ಯಾಲಯಗಳಲ್ಲಿ 40% ಕ್ಕಿಂತ ಹೆಚ್ಚು ಮಂಜೂರಾದ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಲ್ಲಿ, ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ಒಡಿಶಾದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 70% ಕ್ಕಿಂತ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ