Breaking News
Home / ರಾಜಕೀಯ / ಮೊದಲನೇ ವೋಟ್ ಬಿಜೆಪಿಗೆ ಹಾಕಿ, ಆದರೆ ಎರಡನೇ ವೋಟ್‍ನ್ನು ಕಾಂಗ್ರೆಸ್‍ಗೆ ಹಾಕಬೇಡಿ: ಬಾಲಚಂದ್ರ ಜಾರಕಿಹೊಳಿ

ಮೊದಲನೇ ವೋಟ್ ಬಿಜೆಪಿಗೆ ಹಾಕಿ, ಆದರೆ ಎರಡನೇ ವೋಟ್‍ನ್ನು ಕಾಂಗ್ರೆಸ್‍ಗೆ ಹಾಕಬೇಡಿ: ಬಾಲಚಂದ್ರ ಜಾರಕಿಹೊಳಿ

Spread the love

ಮೊದಲನೇ ವೋಟ್ ಬಿಜೆಪಿಗೆ ಹಾಕಿ, ಆದರೆ ಎರಡನೇ ವೋಟ್‍ನ್ನು ಕಾಂಗ್ರೆಸ್‍ಗೆ ಹಾಕಬೇಡಿ ಎನ್ನುತ್ತಲೇ ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿ, ಸಹೋದರ ಲಖನ್ ಜಾರಕಿಹೊಳಿಗೆ ವೋಟ್ ಹಾಕುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ ನೀಡಿದ್ದಾರೆ.

ಹೌದು ಬೆಳಗಾವಿ ಎಂಎಲ್‍ಸಿ ಫೈಟ್ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಈ ಸಂಬಂಧ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಮತದಾರರಿಗೆ ಯಾವುದೇ ರೀತಿ ಗೊಂದಲ ಆಗುತ್ತಿಲ್ಲ. ನಾವಂತೂ ಮೊದಲ ವೋಟ್ ಬಿಜೆಪಿಗೆ ಹಾಕಿ, ಎರಡನೇ ವೋಟ್ ಕಾಂಗ್ರೆಸ್‍ಗೆ ಮಾತ್ರ ಹಾಕಬೇಡಿ ಎಂದು ಪ್ರಚಾರ ಮಾಡುತ್ತಿದ್ದೇವೆ ಎನ್ನುತ್ತಲೇ, ಸಹೋದರ ಪಕ್ಷೇತರ ಅಭ್ಯರ್ಥಿ ಲಖನ್‍ಗೆ ಹಾಕುವಂತೆ ಪರೋಕ್ಷವಾಗಿ ಕರೆ ನೀಡಿದ್ದು ಕಂಡು ಬಂತು. ಇನ್ನು ಬಿಜೆಪಿ ಎಲ್ಲರೂ ಸಕ್ರಿಯವಾಗಿ ಪ್ರಚಾರ ಮಾಡುತ್ತಿಲ್ಲವಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಸೋಮವಾರದಿಂದ ಮತ್ತಷ್ಟು ಉತ್ಸಾಹದಿಂದ ಪ್ರಚಾರ ಆರಂಭಿಸುತ್ತೇವೆ. ಉಮೇಶ ಕತ್ತಿ ಅವರು ಸೇರಿ ಎಲ್ಲ ನಾಯಕರು 30ನೇ ತಾರೀಖಿನಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಸತೀಶ ಜಾರಕಿಹೊಳಿ ಅವರು ಜಾರಕಿಹೊಳಿ ಕುಟುಂಬದ ಕಿರೀಟ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಮಾತನಾಡಿದ ಬಾಲಚಂದ್ರ ಸತೀಶ ಜಾರಕಿಹೊಳಿ ಅವರು ಮೊದಲಿನಿಂದ ಮುಂಚೂಣಿಯಲ್ಲಿ ನಿಂತು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನಾವು ಎಲ್ಲರೂ ಕೂಡ ಅವರ ದಾರಿನಲ್ಲಿಯೇ ನಡೆದುಕೊಂಡು ಬಂದಿದ್ದೇವೆ. ಸತೀಶ ಅವರ ಬಗ್ಗೆ ಗೌರವ ಹೀಗೆ ಇರಲಿ, 2023ರ ಚುನಾವಣೆ ಒಳಗೂ ಸತೀಶ ಜಾರಕಿಹೊಳಿ ಅವರ ಬಗ್ಗೆ ಇದೇ ರೀತಿ ಪ್ರೀತಿ, ವಿಶ್ವಾಸ, ಗೌರವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಟ್ಟುಕೊಳ್ಳಲಿ ಎಂದು ನಾನು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಇನ್ನು ರಾಜಕಾರಣದಲ್ಲಿ ಎಲ್ಲವೂ ಆಗುತ್ತವೆ. ಇಲ್ಲಿ ದಯಮಾಡಿ ಜಾರಕಿಹೊಳಿ ಲಕ್ಷ್ಕೀ ಹೆಬ್ಬಾಳ್ಕರ್ ವಿಷಯ ತರಬೇಡಿ. ಇದು ಬಿಜೆಪಿ ವರ್ಸಸ್ ಕಾಂಗ್ರೆಸ್ ನಡೆದಿದೆ. ಹೀಗಾಗಿ ಇರದಲ್ಲಿ ವಯಕ್ತಿಕ ತರುವುದು ಬೇಡ. ನಾವು ಸಮಾಧಾನದಿಂದ ಚುನಾವಣೆ ಮಾಡೋಣ, ಅವರು ಸಮಾಧಾನದಿಂದ ಚುನಾವಣೆ ಮಾಡಲಿ ಎಂದು ಇದೇ ವೇಳೆ ಬಾಲಚಂದ್ರ ಸಲಹೆ ನೀಡಿದರು.

ಇನ್ನು ಜನಸ್ವರಾಜ್ ಸಮಾವೇಶಕ್ಕೆ ಗೈರಾಗಿದ್ದ ವಿಚಾರಕ್ಕೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ನಾನು ಆ ಸಮಯದಲ್ಲಿ ಬೆಂಗಳೂರಿನಲ್ಲಿ ಕೆಎಂಎಫ್ ಸಭೆಯಿತ್ತು. ಹೀಗಾಗಿ ಭಾಗವಹಿಸಲು ಆಗಿರಲಿಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ರಮೇಶ ಜಾರಕಿಹೊಳಿ ರಾಜೀನಾಮೆ ಕೊಟ್ಟು ಬಂದ ಸಿಎಂ ಮಾಡಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಗೌರವವಿದೆ. ಬೆಂಗಳೂರಿನಲ್ಲಿ ಇದ್ದಿದ್ದರಿಂದ ಬರಲು ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
: ಒಟ್ಟಿನಲ್ಲಿ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಜೊತೆಗೆ ಸಹೋದರ ಲಖನ್ ಗೆಲ್ಲಿಸಲು ರಮೇಶ, ಬಾಲಚಂದ್ರ ಜಾರಕಿಹೊಳಿ ರಣತಂತ್ರ ರೂಪಿಸುತ್ತಿದ್ದು. ಇದರಲ್ಲಿ ಜಾರಕಿಹೊಳಿ ಬ್ರದರ್ಸ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂದು ಕಾದು ನೋಡಬೇಕಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ