Home / ರಾಜಕೀಯ / ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ.:ಪಾಟೀಲಗೆ ಲಕ್ಷ್ಮಿ ತಿರುಗೇಟು

ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ.:ಪಾಟೀಲಗೆ ಲಕ್ಷ್ಮಿ ತಿರುಗೇಟು

Spread the love

ಬೆಳಗಾವಿ: ‘ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ. ಸಂಜಯ ಪಾಟೀಲ ಅವರು ಹೇಳಿರುವಂತೆ ಇತರ ರಾಜಕಾರಣ ನನಗೆ ಗೊತ್ತಿಲ್ಲ’ ಎಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿರುಗೇಟು ನೀಡಿದರು.

‘ರಾತ್ರಿ ರಾಜಕೀಯದಿಂದ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳಕರ’ ಎಂಬ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

 

‘ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಒಬ್ಬ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಶ್ರೀರಾಮನ 2ನೇ ಅವತಾರವಾಗಿರುವ ಸಂಜಯ ಪಾಟೀಲರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮಾತನಾಡುತ್ತಿವೆ. ಅದು ಕ್ಷೇತ್ರದ ಜನರಿಗೂ ಗೊತ್ತಿದೆ. ಮಾಜಿ ಶಾಸಕರ ಎಲ್ಲ ಹೇಳಿಕೆಗಳಿಗೂ ಪ್ರತಿಕ್ರಿಯಿಸಲು ಬಯಸುವುದಿಲ್ಲ’ ಎಂದರು.


Spread the love

About Laxminews 24x7

Check Also

ಮುಂಬೈ ಹೊಟೇಲ್ ಉದ್ಯಮಿ ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

Spread the love ಮುಂಬೈ: 2001ರಲ್ಲಿ ಮುಂಬೈನ ಹೊಟೇಲ್ ಉದ್ಯಮಿ ಜಯಾ ಶೆಟ್ಟಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ