Breaking News

ಹಾನಗಲ್ ಟಿಕೆಟ್: ಸಿದ್ದರಾಮಯ್ಯ ಸಂಧಾನ ಸಭೆಯಲ್ಲಿ ನಾಯಕರ ಮಾತಿಗೆ ಸೈ ಎಂದ ಮನೋಹರ್

Spread the love

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಾನಗಲ್ ವಿಚಾರದ ಸಂಧಾನ ಸಭೆ ಸಕ್ಸಸ್ ಆಗಿದ್ದು ನಿನ್ನೆ ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲ್ಲ ಅಂದಿದ್ದ ಮನೋಹರ್ ತಹಶಿಲ್ದಾರ್ ಇದೀಗ ಯೂಟರ್ನ್ ಹೊಡೆದಿದ್ದಾರೆ. ಶ್ರೀನಿವಾಸ್ ಮಾನೆ ಅಭ್ಯರ್ಥಿಯಾದರೂ ಕೆಲಸ ಮಾಡುವೆ ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡ್ತೀನಿ ಎಂದಿದ್ದಾರೆ.

ನಿನ್ನೆ ಯಾವುದೇ ಕಾರಣಕ್ಕೂ ಮಾನೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲ್ಲ ಅಂತ ಮನೋಹರ್ ಹೇಳಿದ್ದರು. ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯ ನಂತರ ಸ್ವತಃ ಮನೋಹರ್ ತಹಹಶಿಲ್ದಾರ್ ಹೇಳಿಕೆ ಕೊಟ್ಟಿದ್ದಾರೆ. ನಿನ್ನೆ ಸ್ಥಳೀಯರಿಗೇ ಟಿಕೆಟ್ ಕೊಡಬೇಕು.. ಮಾನೆ ಸ್ಥಳೀಯರಲ್ಲದ ಕಾರಣ ಕೆಲಸ ಮಾಡಲ್ಲ ಎಂದಿದ್ದರು.

ಒಬ್ಬರಿಗೆ ಟಿಕೆಟ್ ಇನ್ನೊಬ್ಬರಿಗೆ ಪರ್ಯಾಯ ಸ್ಥಾನಮಾನ ಎಂದು ಸಿದ್ದರಾಮಯ್ಯ ಮಾಡಿದ ತೀರ್ಮಾನಕ್ಕೆ ಸದ್ಯ ತಹಶಿಲ್ದಾರ್ ಸೈ ಎಂದಿದ್ದಾರೆ. ನಾನು ನಿನ್ನೆ ಕೆಲ ಹೇಳಿಕೆ ಕೊಟ್ಟಿದ್ದೆ, ಆದರೆ ಇಂದಿನ ಸಭೆಯಲ್ಲಿ ನಮ್ಮ ನಾಯಕರೆಲ್ಲ ಒಗ್ಗೂಡಿ ತೀರ್ಮಾನ ಮಾಡಿದ್ದಾರೆ. ಒಬ್ಬರಿಗೆ ಹಾನಗಲ್ ಟಿಕೆಟ್, ಇನ್ನೊಬ್ಬರಿಗೆ ಪರ್ಯಾಯ ಸ್ಥಾನಮಾನ ಎಂದಿದ್ದಾರೆ, ಇದನ್ನು ಒಪ್ಪಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ