Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಚಿಕ್ಕೋಡಿಯಲ್ಲಿ ಯಾರ ಪಾಲಾಗಲಿದೆ ಗೆಲುವಿನ ಪಟ್ಟ?

ಚಿಕ್ಕೋಡಿಯಲ್ಲಿ ಯಾರ ಪಾಲಾಗಲಿದೆ ಗೆಲುವಿನ ಪಟ್ಟ?

Spread the love

ಚಿಕ್ಕೋಡಿ, ಮೇ 27: ಬೆಳಗಾವಿ ಜಿಲ್ಲೆ ತಾಲೂಕು ಕೇಂದ್ರವಾಗಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಭಾರಿ ಎರಡು ಪ್ರಮುಖ ಪಕ್ಷಗಳು ತೀವ್ರ ಪೈಪೋಟಿ ಒಡ್ಡಿದವು. ಮೇ 7ರಂದು ಚುನಾವಣೆ ನಡೆದಿದ್ದು, ಬರೋಬ್ಬರಿ ಈ ಕ್ಷೇತ್ರವೊಂದರಲ್ಲೇ ಶೇಕಡಾ 78.66 ರಷ್ಟು ಮತದಾನ ಆಗಿದೆ.

ಹಾಗಾದರೆ ಈ ಬಾರಿ ಗೆಲುವು ಯಾರಿಗೆ? ಕಾಂಗ್ರೆಸ್‌-ಬಿಜೆಪಿಗೆ ಇರುವ ಪೂರಕ ಅಂಶಗಳ ಏನು?.

ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಕಾಂಗ್ರೆಸ್‌ನಿಂದ ಕರ್ನಾಟಕದ ಹಾಲಿ ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಕಣಕ್ಕಿಳಿದಿದ್ದರು.Chikkodi Lok Sabha Election 2024 Results: ಚಿಕ್ಕೋಡಿಯಲ್ಲಿ ಯಾರ ಪಾಲಾಗಲಿದೆ ಗೆಲುವಿನ ಪಟ್ಟ?

ಬಿಜೆಪಿಗೆ ಚಿಕ್ಕೋಡಿ ಗೆಲುವಿನ ಲೋಕಸಭಾ ಕ್ಷೇತ್ರವಾದರೂ ಸಹಿತ ಈ ಭಾರಿ ಪಕ್ಷವು ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದೆ. ಅಂದಮೇಲೆ ಕಾಂಗ್ರೆಸ್‌ಗೆ ಲೋಕಸಭಾ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ ಸಿಕ್ಕಂತಾಯಿತು.

ಟಿಕೆಟ್ ಪಡೆಯಲು ಲಾಭಿ: ಒಮ್ಮತ ತೀರ್ಮಾನ

ಅಲ್ಲದೇ ಪ್ರತಿ ಭಾರಿ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಲಾಭಿ ನಡೆಯುತ್ತದೆ. ಇದು ಸ್ಥಳಿಯ ಕಾರ್ಯಕರ್ತರ ಮೇಲೆ ಪ್ರಭಾವ ಬೀರುತ್ತದೆ. ಎರಡು ಭಾರಿ ಗೆಲುವು ಸಾಧಿಸಿದ್ದ ರಮೇಶ್ ಕತ್ತಿ ಅವರು ಈ ಸಲದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ಪಡೆದ ಅಣ್ಣಾ ಸಾಹೇಬ್ ಜೊಲ್ಲೆ ಕಣಕ್ಕಿಳಿದರು. ಹೀಗಾಗಿ ಪ್ರಮುಖ ನಾಯಕರೊಬ್ಬರ ಸಕಾರಾತ್ಮಕ ಬೆಂಬಲ ಪಡೆಯುವಲ್ಲಿ ಬಿಜೆಪಿ ಅಭ್ಯರ್ಥಿ ಜೊಲ್ಲೆಗೆ ಸಾಧ್ಯವಾಗಲಿಲ್ಲ.

ಈ ಭಾಗದಲ್ಲಿ ಪ್ರಭಾವಿಗಳಾಗಿರುವ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಪುತ್ರಿ ಕಣಕ್ಕಿಳಿದಿದ್ದರು. ಅವರನ್ನು ಕಾಂಗ್ರೆಸ್ ಮುಖಂಡರು ಒಮ್ಮತದಿಂದ ಚುನಾವಣೆಗೆ ಆಯ್ಕೆ ಮಾಡಿದ್ದರು. ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು, ಮೊದಲ ಚುನಾವಣೆಯಲ್ಲೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ