Breaking News
Home / ರಾಜಕೀಯ / ದಲಿತ ಸಮುದಾಯದ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ಕೇಸ್; ಐವರನ್ನ ಬಂಧಿಸಿದ ಪೊಲೀಸ್

ದಲಿತ ಸಮುದಾಯದ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ಕೇಸ್; ಐವರನ್ನ ಬಂಧಿಸಿದ ಪೊಲೀಸ್

Spread the love

ಕೊಪ್ಪಳ: ಮಕ್ಕಳು ದೇವರ ಸಮಾನ ಅಂತಾರೆ. ಆದ್ರೆ, ಇಲ್ಲೊಂದು ದಲಿತ ಸಮುದಾಯದ ಮಗು ತನ್ನ ಹುಟ್ಟು ಹಬ್ಬದ ಸಂತಸದಲ್ಲಿ ಗ್ರಾಮದ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಬಾಲಕನಿಗೆ ದಂಡವಿಧಿಸಿ ಅಮಾನವೀಯವಾಗಿ ನಡೆದಿಕೊಂಡಿದ್ದಾರೆ. ಗ್ರಾಮಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿದೆ. ಗ್ರಾಮದಲ್ಲಿ ಡಿಸಿ, ಎಸ್​ಪಿ, ಎಸಿ ಸಭೆ ನಡೆಸಿದ್ದು, ಅಸ್ಪೃಶ್ಯತೆ ಆಚರಿಸಿದ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಐದು ಜನರು ಬಂಧಿಸಿದ್ದಾರೆ.

 

ಸೆಪ್ಟೆಂಬರ್ 4 ರಂದು ಚಂದ್ರಶೇಖರ ಚೆನ್ನದಾಸರ ಅವರ ಪುತ್ರ ವಿನಯ ಎನ್ನುವ ಬಾಲಕನ ಹುಟ್ಟುಹಬ್ಬ ಇತ್ತು, ಅಂದು ತನ್ನ ಮಗನನ್ನು ತಂದೆ ಮನೆ ಮುಂದೆ ಇರುವ ಮಾರುತೇಶ್ವರ ಮಂದಿರಕ್ಕೆ ಕರೆದುಕೊಂಡು ಹೋಗಿದ್ದಾರೆ. ಏನೂ ಅರಿಯದ ಮಗು ಹನುಮಪ್ಪನ ನೋಡಿ ಕೈ ಮುಗಿಯಲು ದೇವಸ್ಥಾನ ಪ್ರವೇಶ ಮಾಡಿದ್ದಾನೆ‌. ಇದಕ್ಕಾಗಿ ಮಗುವಿಗೆ ಬರೋಬ್ಬರಿ 25 ಸಾವಿರ ರೂಪಾಯಿ ದಂಡವನ್ನು ಗ್ರಾಮದ ಸವರ್ಣಿಯ ಮುಖಂಡರು ಹಾಕಿದ್ದಾರೆ‌. ಈ ವಿಚಾರ ಗಂಭೀರ ಸ್ವರೂಪ ಪಡೆದಿದ್ದು ದಂಡ ಹಾಕಿದ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಡಿಸಿ ವಿಕಾಸ್ ಕಿಶೋರ್ ಸುರಳ್ಕರ್, ಎಸ್ಪಿ ಟಿ. ಶ್ರೀಧರ್, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿ ಗ್ರಾಮಸ್ಥರನ್ನು ಸೇರಿಸಿ ಸಭೆ ನಡೆಸಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಖಡಕ್ ಸೂಚನೆ ನೀಡಿದ್ದಾರೆ.

 

ಇನ್ನು ಮೀಯಾಪೂರ ಗ್ರಾಮದಲ್ಲಿ ಸುಮಾರು 20 ಕ್ಕೂ ಹಾಗು ಹೆಚ್ಚು ದಲಿತ ಕುಟುಂಬಗಳಿವೆ ಇಂದಿಗೂ ಇವರಿಗೆ ಕ್ಷೌರ ಮಾಡುವುದಿಲ್ಲ, ಹೋಟೆಲ್, ದೇವಸ್ಥಾನ ಪ್ರವೇಶ ಮಾಡುವಂತಿಲ್ಲ. ಹಾಗಾಗಿ ಬಾಲಕ ವಿನಯ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ದೇವಸ್ಥಾನ ಶುದ್ಧೀಕರಣಕ್ಕೆ 25 ಸಾವಿರ ದಂಡ ಹಾಕಿದ್ದಾರೆ. ಇದರಿಂದ ಬಾಲಕನ ತಂದೆ ಚಂದ್ರಶೇಖರ ಚೆನ್ನದಾಸರ ತಹಶೀಲ್ದಾರ್​ಗೆ ಮೊರೆಹೋಗಿದ್ದರು, ಹಾಗಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಚಂದ್ರ, ಐದು ಜನರ ಮೇಲೆ ಪ್ರಕರಣ ದಾಖಲಿಸಿದ್ದರು. ಆರ್ಚಕ ಕರಕಪ್ಪ ಪೂಜಾರಿ, ಹನಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಹಾಗೂ ಶರಣಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ IPC 504,149 SC,ST act 2005 ಅಡಿಯಲ್ಲಿ ಕೇಸ್ ದಾಖಲಾಗಿದೆ.

 

ಒಟ್ಟಾರೆ ಕೊಪ್ಪಳದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಗ್ರಾಮಗಳಲ್ಲಿ ನಿರಂತರವಾಗಿ ಅಸ್ಪೃಶ್ಯತೆ ನಡೆಯುತ್ತಿದೆ. ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ.‌ ಇದು ನಿಜಕ್ಕೂ ವಿಪರ್ಯಾಸವೇ ಸರಿ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ