Breaking News
Home / Uncategorized / 75th Independence Day 2021 Live Updates: ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ

75th Independence Day 2021 Live Updates: ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ

Spread the love

ನವದೆಹಲಿ, ಆಗಸ್ಟ್ 15: ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ದೇಶಪ್ರೇಮಿಗಳು ಸಜ್ಜಾಗಿದ್ದಾರೆ. ಅಮೃತ ಮಹೋತ್ಸವದ ಘಳಿಗೆಯನ್ನು ಇನ್ನಷ್ಟು ಚಂದವಾಗಿಲಸು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ದೇಶಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೊರೊನಾ ಆತಂಕದಿಂದ ಈ ಸ್ವಾತಂತ್ರ್ಯೋತ್ಸವದ ಉತ್ಸಾಹಕ್ಕೆ ಅಲ್ಪ ಮಟ್ಟಿನ ಉತ್ಸಾಹ ಕಡಿಮೆಯಾಗಿದೆ.

74 ನೇ ಸ್ವಾತಂತ್ರ್ಯ ದಿನವನ್ನು ಕೂಡ ಕೊರೊನಾ ನಿಯಮಗಳನ್ನು ಪಾಲಿಸಿಯೇ ಆಚರಿಸಲಾಗಿತ್ತು. ಧ್ವಜಾರೋಹಣವಾದ ಬಳಿಕ ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದ ಭಾಷಣ ಬೆಳಗ್ಗೆ 7.30ಕ್ಕೆ ಶುರುವಾಗಲಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಗುತ್ತದೆ.

ಭಾರತದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಈ ವರ್ಷದಿಂದ ಆರಂಭಗೊಂಡಿದೆ. 2023ರ ವರೆಗೆ ನಡೆಯಲಿದೆ. ಈ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಮುಂದಿನ 2 ಸ್ವಾತಂತ್ರ್ಯ ದಿನಾಚರಣೆಯಲ್ಲೂ ಅಮೃತ ಮಹೊತ್ಸವ ಸಂಭ್ರಮ ಇರಲಿದೆ.

ಮಾರ್ಚ್ 12, 2021ರಂದು ಪ್ರಧಾನಿ ಮೋದಿ ಅಜಾದಿಕಾ ಅಮೃತ ಮಹೋತ್ಸವ(ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ) ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. 2023ರ ವರೆಗೆ ಅಮೃತ ಮಹೋತ್ಸವ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿವೆ. ಆದರೆ ಕೆಲ ದಾಖಲೆಗಳಲ್ಲಿ, ಉಲ್ಲೇಖಗಳಲ್ಲಿ ಇದು 74ನೇ ಸ್ವಾತಂತ್ರ್ಯ ದಿನಾಚರಣೆ, ಮತ್ತೆ ಕೆಲವು ದಾಖಲೆಗಳಲ್ಲಿ ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.

ನೇತಾಜಿ ಸುಭಾಷ್ ಮಾರ್ಗ, ಲೋಥಿಯನ್ ರಸ್ತೆ, ಎಸ್‌ಪಿ ಮುಖರ್ಜಿ ಮಾರ್ಗ, ಚಾಂದಿನಿ ಚೌಕ ರಸ್ತೆ, ನಿಶಾದ್ ರಾಜ್ ಮಾರ್ಗ, ಲಿಂಕ್ ರಸ್ತೆಯಿಂದ ನೇತಾಜಿ ಸುಭಾಷ್ ಮಾರ್ಗ, ರಿಂದ ರಸ್ತೆಯಿಂದ ರಾಜ್‌ಘಾಟ್ ಬಳಿಕ ಐಎಸ್‌ಬಿಟಿ ಹಾಗೂ ಔಟರ್ ರಿಂಗ್ ರಸ್ತೆ, ಐಪಿ ಫ್ಲೈಓವರ್ ಪ್ರದೇಶಗಳಲ್ಲಿ ಬೆಳಗಿನ ಜಾವ 4 ರಿಂದ 10 ಗಂಟೆಯವರೆಗೆ ರಸ್ತೆ ಬಂದ್ ಮಾಡಲಾಗುತ್ತದೆ.

ಎನ್‌ಎಸ್‌ಜಿ, ಸೆಕ್ಯುರಿಟಿ ರಿಂಗ್, SWAT ಕಮಾಂಡರ್ಸ್ ಸೇರಿದಂತೆ ಹಲವು ಭದ್ರತೆ ನೀಡಲಾಗಿದೆ. ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. 350ಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗಿದೆ. 5 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯನ್ನು ಮೊಬೈಲ್ ಫೋನ್ ಮತ್ತು ಆನ್‌ಲೈನ್ ಲೈವ್ ಆಗಿ ವೀಕ್ಷಿಸಬಹುದು. ಪ್ರಧಾನಿ ಮೋದಿ ಭಾಷಣವನ್ನು ದೂರದರ್ಶನ ಪ್ರಸಾರ ಮಾಡಲಿದೆ.

ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ ಕೂಡ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಲಿದೆ ಹಾಗೂ ಅದರ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಭಾಷಣ ನೇರ ಪ್ರಸಾರವಾಗಲಿದೆ.

ಪ್ರಧಾನಿ ಕಚೇರಿಯ (ಪಿಎಂಒ) ಅಧಿಕೃತ ಯೂಟ್ಯೂಬ್ ಚಾನೆಲ್, ಹಾಗೂ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ

ದೂರದರ್ಶನ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೆಂಪು ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಯಾವುದೇ ಅವಘಡ ನಡೆಯಬಾರದು ಎಂಬ ಕಾರಣಕ್ಕೆ ದೆಹಲಿ ಪೊಲೀಸರು ಇಂಥ ಕ್ರಮಕ್ಕೆ ಮುಂದಾಗಿದ್ದಾರೆ. ಕಳೆದ ಗಣರಾಜ್ಯೋತ್ಸವ ಸಮಾರಂಭದ ವೇಳೆ ರೈತರು ನಡೆಸಿದ್ದ ಟ್ರ್ಯಾಕ್ಟರ್​ ರ‍್ಯಾಲಿ ಹಿಂಸಾಚಾರದ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಈ ಬಾರಿ ಹಾಗೆ ಆಗಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ: ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಶ್ರೀನಯಾ ಸೇರ್ಪಡೆ

Spread the love ಹುಬ್ಬಳ್ಳಿ: ಇಲ್ಲಿನ ಬಾಲಕಿ ಶ್ರೀನಯಾ ಹೊಂಗಲ ಸಾಧನೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದೆ. 4 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ