Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದ ಜನರಿಗೆ ಸಿಎಂ ಬೊಮ್ಮಾಯಿ ಭರ್ಜರಿ ಗುಡ್ ನ್ಯೂಸ್: ‘ಅಮೃತ’ ಹೊಸ ಯೋಜನೆಗಳ ಘೋಷಣೆ

ರಾಜ್ಯದ ಜನರಿಗೆ ಸಿಎಂ ಬೊಮ್ಮಾಯಿ ಭರ್ಜರಿ ಗುಡ್ ನ್ಯೂಸ್: ‘ಅಮೃತ’ ಹೊಸ ಯೋಜನೆಗಳ ಘೋಷಣೆ

Spread the love

ಬೆಂಗಳೂರು: ಬೆಂಗಳೂರಿನಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದ್ದಾರೆ.

ನಂತರ ಮಾತನಾಡಿದ ಅವರು, ಕೃಷಿ, ರೈತರ ಬದುಕಿನಲ್ಲಿ ಸಂಕಷ್ಟದ ಸಮಯವಾಗಿದೆ. ರೈತರನ್ನು ಕೃಷಿಯನ್ನು ಕೇಂದ್ರವಾಗಿಟ್ಟುಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ರೈತ ಏಕಿಷ್ಟು ಪ್ರಾಮುಖ್ಯವೆಂಬುದಕ್ಕೆ ಒಂದು ಮಾತಿದೆ. ರವೀಂದ್ರನಾಥ ಠಾಗೋರ್ ಅವರಿಗೆ ದೇವರು ಎಲ್ಲಿದ್ದಾನೆ ಎಂದು ಒಬ್ಬನು ಪ್ರಶ್ನಿಸಿದ. ರೈತರ ಶ್ರಮದಲ್ಲಿ ಕೂಲಿಕಾರ ಬೆವರಲ್ಲಿ ದೇವರಿದ್ದಾನೆ ಎಂದು ಅವರು ಹೇಳಿದ್ದರು. ಅದಕ್ಕೆ ಮಹತ್ವ ನೀಡುವ ರೀತಿ ನಮ್ಮ ಕಾರ್ಯಕ್ರಮಗಳು ಇರುತ್ತವೆ. ಈ ವಲಯದಲ್ಲಿ ಒಂದು ಪರ್ಸೆಂಟ್ ಬೆಳವಣಿಗೆಯಾದರೆ ಉತ್ಪಾದನಾ ವಲಯದಲ್ಲಿ 4 ರಷ್ಟು, ಸೇವಾವಲಯದಲ್ಲಿ 10 ಪರ್ಸೆಂಟ್ ಬೆಳವಣಿಗೆ ಕಾಣುತ್ತದೆ ಎಂದು ತಿಳಿಸಿದ್ದಾರೆ.

ಜನರ ಬದುಕನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡುತ್ತೇವೆ. ಮನೆಬಾಗಿಲಿಗೆ ಸೌಲಭ್ಯ ತಲುಪಿಸಲಾಗುವುದು. ಶ್ರಮಿಕರು, ಹಿಂದುಳಿದ, ಅಲ್ಪಸಂಖ್ಯಾತರ ಸೇರಿ ಪ್ರತಿಯೊಂದು ಕುಟುಂಬಕ್ಕೆ ಸೌಲಭ್ಯ ಕಲ್ಪಿಸಲಾಗುವುದು. ನಮಗೆ ಇರುವ ಸಮಯ ಕೇವಲ 20 ತಿಂಗಳು ಎಂಬ ಅರಿವು ಕೂಡ ನಮಗಿದೆ. ಜನ ಸ್ನೇಹಿ ಆಡಳಿತ ನೀಡುತ್ತೇವೆ. ಹಿಂದಿನ ಸಿಎಂ ಯಡಿಯೂರಪ್ಪ ಅನೇಕ ಯೋಜನೆ ರೂಪಿಸಿ ಅನುದಾನ ಒದಗಿಸಿದ್ದಾರೆ. ಈಗ ಕೊರೋನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನರು ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದ ತಲಾದಾಯ ರಾಷ್ಟ್ರದಲ್ಲೇ ಮೂರನೇ ಸ್ಥಾನದಲ್ಲಿದೆ. ಆದರೆ, ರಾಜ್ಯದ ತಲಾದಾಯದಲ್ಲಿ ಎಲ್ಲ ಸಮುದಾಯವನ್ನು ಒಳಗೊಂಡಂತಿರಬೇಕು. SC/CT, ಹಿಂದುಳಿದ, ಯುವಕರು, ಮೈನಾರಿಟಿ ರಂಗದ ಅಭಿವೃದ್ಧಿ ಹೆಣ್ಣುಮಕ್ಕಳಿಗೆ ಆರ್ಥಿಕ ಸಾಮಾಜಿಕ ಸುರಕ್ಷತೆಯ ಭರವಸೆ ನೀಡುತ್ತೇವೆ. ಅವರ ಶಕ್ತಿ ಬಳಸಿಕೊಳ್ಳುತ್ತೇವೆ. ಕೈಗಾರಿಕಾ ವಲಯದಲ್ಲಿ ಕರ್ನಾಟಕ ಅದ್ಭುತ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ವೆಸ್ಟ್ ಕರ್ನಾಟಕ ಮಾಡಿ ದೇಶ, ವಿದೇಶದ ಬಂಡವಾಳ ತರಲಾಗುವುದು ಎಂದರು.

ಕರ್ನಾಟಕ ಪೊಲೀಸ್ ದೇಶದಲ್ಲಿಯೇ ಕ್ಷಮತೆ, ಚಾಣಾಕ್ಷತೆ, ಕಾರ್ಯದಕ್ಷತೆಗೆ ಹೆಸರಾಗಿದೆ. ನಾಡು, ನುಡಿ, ಜಲ ವಿಚಾರದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಪ್ರವಾಹ ಸಂತ್ರಸ್ಥರಿಗೆ ತಕ್ಷಣಕ್ಕೆ 10 ಸಾವಿರ ರೂ., ಮನೆ ಹಾನಿಗೆ 5 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುವುದು.

ಅಮೃತ ಗ್ರಾಮ ಪಂಚಾಯಿತಿ:

ಆಯ್ದ 150 ಗ್ರಾಪಂಗಳಲ್ಲಿ ಕುಡಿಯುವ ನೀರು, ವಿದ್ಯುತ್, ಮೂಲ ಸೌಕರ್ಯ, ಡಿಜಿಟಲ್ ಲೈಬ್ರರಿ ಒದಗಿಸಲಾಗುವುದು.

ಅಮೃತ ಗ್ರಾಮೀಣ ವಸತಿ ಯೋಜನೆ

ವಸತಿ ರಹಿತರನ್ನು ಗುರುತಿಸಿ ಆಯ್ದ 750 ಗ್ರಾಮಗಳಲ್ಲಿ ಸರ್ವರಿಗೂ ವಸತಿ

ಅಮೃತ ರೈತರು, ನೇಕಾರರು, ಮೀನುಗಾರರ ಯೋಜನೆ

750 ಅಮೃತ ರೈತ, ಮೀನುಗಾರರು, ನೇಕಾರರ ಅಭಿವೃದ್ಧಿಗೆ 30 ಲಕ್ಷ ರೂ ಅನೆರವು

ಅಮೃತ ನಿರ್ಮಲ ನಗರ ಯೋಜನೆ

ಸ್ವಚ್ಛತೆ ನೈರ್ಮಲೀಕರಣಕ್ಕೆ 75 ನಗರಕ್ಕೆ ನೆರವು

ಅಮೃತ ಶಾಲಾ ಯೋಜನೆ

ಶಾಲಾ ಪ್ರಯೋಗಾಲಯ, ಕಟ್ಟಡ, ಸೇರಿ ಅಗತ್ಯ

ಅಮೃತ ಮಹಿಳಾ ಸಬಲೀಕರಣ ಯೋಜನೆ

7500 ಸ್ವ ಸಹಾಯ ಗುಂಪುಗಳಿಗೆ ತಲಾ 1 ಲಕ್ಷ ದಂತೆ 75 ಲಕ್ಷ ರೂ.ನೆರವು

ಅಮೃತ ಆರೋಗ್ಯ ಯೋಜನೆ

750 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ಡದರ್ಜೆ ಏರಿಸಲಾಗುವು

ಅಮೃತ ಕೌಶಲ್ಯ ಅಭಿವೃದ್ಧಿ ಯೋಜನೆ

75 ಸಾವಿರ ಯುವಕರು ಯುವತಿಯರಿಗೆಕೌಶಲ್ಯ ತರರಬೇತಿ ನೀಡಲಾಗುವುದ

ಅಮೃತ ಸ್ಟಾರ್ಟಪ್ ಯೋಜನೆ

ಐಟಿ ಸೇರಿ ವಿವಿಧ ವಲಯಕ್ಕೆ ನೆರವು

ಅಮೃತ ಕ್ರೀಡಾ ಯೋಜನೆ

ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಅಮೃತ ಕ್ರೀಡಾ ದತ್ತಿ ಯೋಜನೆಯಡಿ 75 ಕ್ರೀಡಾಪಟುಗಳನ್ನು ದತ್ತು ಪಡೆದು ತಯಾರಿ ಮಾಡಲಾಗುವುದು.

ಅಮೃತ ಅಂಗನವಾಡಿ ಅಭಿವೃದ್ಧಿ ಯೋಜನೆ

ಅಮೃತ ಕೆರೆಗಳ ಅಭಿವೃದ್ಧಿ ಯೋಜನೆ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ