Breaking News
Home / ರಾಜಕೀಯ / ಅಂತಾರಾಜ್ಯ ಡ್ರಗ್ಸ್‌ ಪೆಡ್ಲರ್‌ ಗಳ ಬಂಧನ

ಅಂತಾರಾಜ್ಯ ಡ್ರಗ್ಸ್‌ ಪೆಡ್ಲರ್‌ ಗಳ ಬಂಧನ

Spread the love

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ಗಾಂಜಾ, ಎಂಡಿಎಂಎ ಸೇರಿ ವಿವಿಧ ಮಾದರಿಯ ಡ್ರಗ್ಸ್‌ಗಳನ್ನು ತಂದು ನಗರದಲ್ಲಿ ವಿದ್ಯಾರ್ಥಿಗಳು,ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಪೆಡ್ಲರ್‌ ಗಳನ್ನು ಪಶ್ಚಿಮ ವಿಭಾಗದ ಸಿ.ಟಿ.ಮಾರು
ಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಪಪ್ಪುರಾಮ್‌ ಅಲಿಯಾಸ್‌ ಪಪ್ಪು (20), ಚುನ್ನಿಲಾಲ್‌ ಅಲಿಯಾಸ್‌ ಸುನೀಲ್‌ (20) ಬಂಧಿತರು. ಇಬ್ಬರು ಅತ್ತಿಬೆಲೆಯಲ್ಲಿ ವಾಸವಾಗಿದ್ದರು. ಆರೋಪಿಗಳಿಂದ ಎರಡು ಕೋಟಿ ರೂ. ಮೌಲ್ಯದ ಒಂದುಕೆ.ಜಿ.820 ಗ್ರಾಂ ಬ್ರೌನ್‌ ಶುಗರ್‌, 859 ಗ್ರಾಂ ಎಂಡಿಎಂಎ, ಒಂದು ಕೆ.ಜಿ ಮಿಕ್ಸಿಂಗ್‌ ಪೌಡರ್‌, 1.700 ಕೆಜಿ ಗಾಂಜಾ, ಕುಕ್ಕಾ ಸೇದುವ ಸಾಧನ, ಡಿಜಿಟಲ್‌ ತೂಕದ ಯಂತ್ರ, ಕೃತ್ಯಕ್ಕೆ ಬಳಸಿದ್ದ ಕಾರು, ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಎಂ.ಪಾಟೀಲ್‌ ತಿಳಿಸಿದರು.

ಪಪ್ಪುರಾಮ್‌ ಬಿಎ ವ್ಯಾಸಂಗ ಮಾಡಿದ್ದು, ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕು ಗೊಳಿಸಿದ್ದಾನೆ. ಆರೋಪಿಗಳು ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದರು ತಮ್ಮ ಪರಿಚಿತ ಗ್ರಾಹಕರಿಗೆ ಮಾತ್ರ ಮಾರಾಟ ಮಾಡುತ್ತಿದ್ದರು. ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಕಾರಣದಿಂದ ಹೊಸಬರಿಗೆ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರಲಿಲ್ಲ. ಐಟಿ-ಬಿಟಿ ಉದ್ಯೋಗಿಗಳು,ಕಾಲೇಜು
ವಿದ್ಯಾರ್ಥಿಗಳೇಅವರ ಗ್ರಾಹಕ ರಾಗಿದ್ದಾರೆ.

ಕೆಲ ತಿಂಗಳಿನಿಂದ ಆರೋಪಿಗಳಿಗಾಗಿ ಸಿ.ಟಿ. ಮಾರುಕಟ್ಟೆ ಪೊಲೀಸರು ಶೋಧ ನಡೆಸುತ್ತಿದ್ದರು. ಆರೋಪಿಗಳಿಬ್ಬರು ಗೋಡೌನ್‌ ಸ್ಟ್ರೀಟ್‌ನಲ್ಲಿ ಭಾನುವಾರ ಸಂಜೆ 5.30ರ ಸುಮಾರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಇನ್ಸ್‌ ಪೆಕ್ಟರ್‌ ಬಿ.ಜಿ.ಕುಮಾರಸ್ವಾಮಿ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ ಎಂದರು.

 

ಆರೋಪಿ ಪಪ್ಪುರಾಮ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತನ ಮನೆಯಲ್ಲಿ ಮಾದಕ ವಸ್ತುಗಳು ಸಂಗ್ರಹಿಸಿರುವ ಮಾಹಿತಿ ಸಿಕ್ಕಿದೆ. ಅವನ್ನು ಜಪ್ತಿ ಮಾಡಿದ್ದಾರೆ.

ಈ ಹಿಂದೆಯೂ ಬಂಧನ: ನಾಲ್ಕು ವರ್ಷಗಳಿಂದ ಆರೋಪಿ ದಂಧೆಯಲ್ಲಿ ತೊಡಗಿದ್ದು, ಚುನ್ನಿಲಾಲ್‌ನನ್ನು ತನ್ನ ಸಹಾಯಕನಾಗಿ ಇಟ್ಟುಕೊಂಡಿದ್ದ. ಒಂದು ವರ್ಷದ ಹಿಂದೆ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುವಾಗ ಹನುಮಂತ ನಗರ ಠಾಣೆ
ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಪೊಲೀಸರಿಗೆ ಸಿಗಬಾರದೆಂಬ ಕಾರಣಕ್ಕೆ ನಗರದ ಹೊರ ವಲಯದ ಚಂದಾಪುರ, ಆನೇಕಲ್‌ ಭಾಗದಲ್ಲಿ ಮನೆ ಮಾಡುತ್ತಿದ್ದ. ಪ್ರತಿ ಮೂರು ತಿಂಗಳಿಗೊಮ್ಮೆ ಮನೆ ಹಾಗೂ ಸಿಮ್‌ ಕಾರ್ಡ್‌ ಬದಲಾವಣೆ ಮಾಡುತ್ತಿದ್ದ. ಮಾದಕ ವಸ್ತುವನ್ನು ಸಂಗ್ರಹಿಸಿ ಇಡಲು ‌ ಒಂದು ಸಣ್ಣ ರೂಮ್‌ ಕೂಡ ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ