Breaking News
Home / ಜಿಲ್ಲೆ / ಕೇರಳದಲ್ಲಿ ನಾಳೆಯಿಂದ ಹೋಟೆಲ್, ಬಸ್ ಸಂಚಾರಕ್ಕೆ ಅನುಮತಿ

ಕೇರಳದಲ್ಲಿ ನಾಳೆಯಿಂದ ಹೋಟೆಲ್, ಬಸ್ ಸಂಚಾರಕ್ಕೆ ಅನುಮತಿ

Spread the love

ಕೇರಳದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
– ಷರತ್ತುಗಳೊಂದಿಗೆ ಅನುಮತಿ ನೀಡಿದ ಕೇರಳ
– ಕೆಂಪು ವಲಯದಲ್ಲಿ ಮೇ 3ರವರೆಗೆ ಲಾಕ್‍ಡೌನ್ ಮುಂದುವರಿಕೆ

ತಿರುವನಂತಪುರಂ: ಮಹತ್ವದ ನಿರ್ಧಾರವೊಂದರಲ್ಲಿ ಕೇರಳ ಸರ್ಕಾರ ರಾಜ್ಯದಲ್ಲಿ ಹೋಟೆಲ್, ರೆಸ್ಟೋರೆಂಟ್‍ಗಳ ಓಪನ್‍ಗೆ ಅನುಮತಿ ನೀಡುವುದರ ಜೊತೆಗೆ ಬಸ್‍ಗಳ ಓಡಾಟಕ್ಕೂ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಿದೆ. ಈ ಮೂಲಕ ನಾಳೆಯಿಂದ ಕೇರಳದ 14 ಜಿಲ್ಲೆಗಳಲ್ಲಿ ಜನ ಜೀವನ ಸಹಜ ಸ್ಥಿತಿಗೆ ಬರಲಿದೆ.

21 ದಿನಗಳ ಲಾಕ್‍ಡೌನ್ ಬಳಿಕ ವಿನಾಯ್ತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೇರಳ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆ ಪ್ರಸ್ತಾವನೆಯನ್ನು ಶುಕ್ರವಾರ ಪ್ರಧಾನಿ ಮೋದಿ ಸರ್ಕಾರ ಒಪ್ಪಿಕೊಂಡಿದೆ. ಲಾಕ್‍ಡೌನ್‍ನಿಂದ ವಿನಾಯ್ತಿ ನೀಡುವ ಸಲುವಾಗಿ ಕೇರಳದಲ್ಲಿರುವ ಒಟ್ಟು 14 ಜಿಲ್ಲೆಗಳನ್ನು ಕೆಂಪು ವಲಯ, ಹಳದಿ ವಲಯ(ಎ), ಹಳದಿ ವಲಯ(ಬಿ), ಹಸಿರುವ ವಲಯವಾಗಿ ವಿಂಗಡಿಸಲಾಗಿತ್ತು. ಶನಿವಾರ ಕೇರಳದಲ್ಲಿ ಕೇವಲ ಮೂರು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಕೆಂಪು ವಲಯ:
ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲ್ಲಪುರಂ ಮೇ3 ರವರೆಗೆ ಸಂಪೂರ್ಣ ಲಾಕ್‍ಡೌನ್ ಆಗಿರಲಿದೆ. ಕೊರೊನಾ ಹಾಟ್ ಸ್ಪಾಟ್ ಜಾಗದಲ್ಲಿ ಅಗತ್ಯ ವಸ್ತು ಸಾಗಾಟಕ್ಕೆ ಎರಡು ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ಇರಲಿದೆ. ಇಲ್ಲಿ ಯಾವುದೇ ವಿನಾಯಿತಿ ಇಲ್ಲ. ಇದನ್ನೂ

ಕಿತ್ತಳೆ(ಎ) ವಲಯ:
ಪತನಂತಿಟ್ಟ, ಎರ್ನಾಕುಲಂ, ಕೊಲ್ಲಂ ಜಿಲ್ಲೆಗಳಲ್ಲಿ ಏಪ್ರಿಲ್ 24ರ ಬಳಿಕ ಲಾಕ್‍ಡೌನ್ ಸಡಿಲಿಕೆ ಆಗಲಿದೆ.

ಕಿತ್ತಳೆ(ಬಿ) ವಲಯ:
ಅಲಪ್ಪುಜ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರಂ, ವಯನಾಡಿನಲ್ಲಿ ಏಪ್ರಿಲ್ 20ರ ಬಳಿಕ ಕೆಲವೆಡೆ ವಿನಾಯಿತಿ.

ಹಸಿರು ವಲಯ:
ಕೊರೊನಾ ಪ್ರಕರಣಗಳು ಬಾರದೇ ಇರುವ ಕೊಟ್ಟಾಯಂ, ಇಡುಕ್ಕಿಯಲ್ಲಿ ಏಪ್ರಿಲ್ 20ರಿಂದ ವಿನಾಯಿತಿ ಸಿಗಲಿದೆ.

ವಿನಾಯಿತಿ ಹೇಗಿರಲಿದೆ?
ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಸ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳು ಸಂಚರಿಸಬಹುದು. ಮಂಗಳವಾರ, ಗುರುವಾರ ಶನಿವಾರ – ಸಮ ಸಂಖ್ಯೆಯೊಂದಿಗೆ ಅಂತ್ಯವಾಗುವ ವಾಹನಗಳ ಓಡಾಟಕ್ಕೆ ಅನುಮತಿ ಸಿಕ್ಕಿದೆ.

ಬೈಕ್ ಸವಾರರು ತಮ್ಮ ಸಂಬಂಧಿಕರೊಂದಿಗೆ ಡಬಲ್ ರೈಡಿಂಗ್‍ಗೆ ಅವಕಾಶವಿದ್ದು, ಜಿಲ್ಲೆಯ ಒಳಗಷ್ಟೇ 50ರಿಂದ 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಸ್‍ಗಳು ಓಡಾಡಹುದು. ಮೂರು ಸೀಟ್‍ಗಳಿದ್ದರೆ ಮಧ್ಯದ ಒಂದು ಸೀಟು ಖಾಲಿ ಬಿಡಬೇಕು, ಎರಡು ಆಸನಗಳಿದ್ದರೆ ಒಂದು ಆಸನದಲ್ಲಿ ಮಾತ್ರ ಕೂರಬೇಕು. ಬಸ್‍ಗೆ ಹತ್ತುವ ಮೊದಲು ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ, ಯಾರೂ ನಿಂತು ಪ್ರಯಾಣಿಸುವಂತಿಲ್ಲ.

ಶನಿವಾರ ಮತ್ತು ಭಾನುವಾರ ಸಲೂನ್ ಅಂಗಡಿ ತೆರೆಯಬಹುದು. ಸಂಜೆ 7 ಗಂಟೆವರೆಗೆ ಹೋಟೆಲ್-ರೆಸ್ಟೋರೆಂಟ್ ತೆರೆಯಬಹುದು, 8 ಗಂಟೆವೆರೆಗೆ ಪಾರ್ಸೆಲ್‍ಗೆ ಅವಕಾಶ ಸಿಕ್ಕಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, ಹಸಿರು ವಲಯದಲ್ಲಿ ಬಟ್ಟೆ ಅಂಗಡಿ ತೆರೆಯಬಹುದು. ವಾರದಲ್ಲಿ ಎರಡು ದಿನ ಮೊಬೈಲ್, ಆಟೋ ವರ್ಕ್‍ಶಾಪ್, ಕಂಪ್ಯೂಟರ್ ಸೆಂಟರ್, ಬುಕ್‍ಸ್ಟೋರ್  ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.

ಶನಿವಾರ ಮತ್ತು ಭಾನುವಾರ ಹೊರತು ಪಡಿಸಿದ ವಾರದ ಎಲ್ಲ ದಿನ ಸರ್ಕಾರಿ ಕಚೇರಿಗಳು ತೆರೆದಿರುತ್ತದೆ. ಸಹಕಾರ ಸಂಸ್ಥೆಗಳಲ್ಲಿ ಶೇ.33 ರಷ್ಟು ಉದ್ಯೋಗಿಗಳು, ಗ್ರಾಮೀಣ ಪಂಚಾಯತ್ ನಲ್ಲಿ ಶೇ. 35ರಷ್ಟು ಉದ್ಯೋಗಿಗಳು ಕರ್ತವ್ಯ ನಿರ್ವಹಿಸಲು ಅನುಮತಿ.

ನಿರ್ಬಂಧ ಮುಂದುವರಿಕೆ:
ಹಸಿರು ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು, ಶಿಕ್ಷಣ, ಧಾರ್ಮಿಕ ಸ್ಥಳ ತೆರೆಯುವಂತಿಲ್ಲ. ಜಿಲ್ಲೆಯಿಂದ ಯಾರೂ ಹೊರಗಡೆ ತೆರಳುವಂತಿಲ್ಲ. ಕೇಂದ್ರ ಗೃಹ ಇಲಾಖಯ ಮಾರ್ಗಸೂಚಿಯಂತೆ ಮದುವೆ ಮತ್ತು ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ.

ಎಷ್ಟು ಪ್ರಕರಣವಿದೆ?
ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ ಕೇರಳದಲ್ಲಿ 399 ಮಂದಿಗೆ ಸೋಂಕು ಬಂದಿದ್ದು, 257 ಮಂದಿ ಗುಣಮುಖರಾಗಿದ್ದಾರೆ. ಈಗ 140 ಸಕ್ರೀಯ ಪ್ರಕರಣವಿದ್ದು, ಕೇವಲ 2 ಮಂದಿ ಮಾತ್ರ ಮೃತಪಟ್ಟಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ