ಹುಬ್ಬಳ್ಳಿ
ಮಾಜಿ ಮುಖ್ಯಮಂತ್ರಿ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಾಯಿ ವಿಧಿವಶರಾಗಿದ್ದಾರೆ.
ಬಸವಣ್ಣೆಮ್ಮ ಶಿವಪ್ಪ ಶೆಟ್ಟರ್ (87 ) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು
ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಅಕ್ಕನಬಳಗದಲ್ಲಿ ಸಕ್ರಿಯರಾಗಿದ್ದರು.
ಕೇಶ್ವಾಪುರದ ಶಬರಿ ನಗರದಲ್ಲಿ ತಮ್ನ ಇನ್ನೊಬ್ಬ ಪುತ್ರ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ನಿವಾಸದಲ್ಲಿ ಇದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡು ವಿಧಿವಶರಾಗಿದ್ದಾರೆ.
ಬಸವಣ್ಣೆಮ್ಮ ಶಿವಪ್ಪ ಶೆಟ್ಟರ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Check Also
ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
Spread the love ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಉದ್ಯಮಿಯೊಬ್ಬರ ಕುಟುಂಬವೊಂದು ತಮ್ಮ ಬದುಕಿನಲ್ಲಿ ಅದೃಷ್ಟ ತಂದು ಕೊಟ್ಟ ಕಾರಿಗೆ ಅದ್ಧೂರಿ …